ಬೆಳಕು-ಬಳ್ಳಿ

ಕವಿತೆಯಾದಳಾ..ಗೆಳತಿ..?

Share Button
 Sneha Prasanna

ಭಾವಗಳ ಹಾದಿಯಲಿ ನಡೆಯುವಾಗ

ಜೊತೆಯಾದಳು ಕವಿತೆ..

ನಿಸರ್ಗದ ಜಾತ್ರೆಯಲಿ ಹುಡುಕಾಡುವಾಗ

ಸ್ನೇಹವರಸಿದ ಮನಕೆ ಇನ್ನೆಲ್ಲಿಯ ಕೊರತೆ..

 

ಕಲ್ಪನೆಯ ಚಾರಣದಿ ಅಲೆದಾಡುವಾಗ

ಪದಗಳಿಗೇನೊ ನವಿರಾದ ಸ೦ಕಟವೇ ಕಾಡಿದೆ..

ಸ್ಪೂರ್ತಿಯ ಸೆಲೆತವು ಭಾವನೆಗೆ

ಜೋತು ಬಿದ್ದಾಗ

ಕಾದು ಬೇಸರಿಸಿದ ಸಾಲುಗಳ ಆರ್ಭಟದ ಗೋಜಿದೆ..

 

ಹೊತ್ತಿಗೆಗೆ ಹೊತ್ತಿಲ್ಲದ ಲೇಖನಿಯ ಹ೦ಬಲದಿ ಧ್ಯಾನಿಸುವ

ಬೇಡಿಕೆಯು ಏಕಿದೆ..

ಮುದ್ದು ಮುದ್ದಾದ ನನ್ನ ಪೆನ್ನಿಗೇತಕೊ ಈ ನಡುವೆ

ಸಿಹಿಸಿಹಿಯಾದ ಕೊಬ್ಬಿದೆ..

ಮೌನವಾಗಿಯೇ ಈ ಗೆಳತಿಗೆ ನನ್ನ ನಮನವು ಸ೦ದಿದೆ..

 

pen quil

 

 – ಸ್ನೇಹಾ ಪ್ರಸನ್ನ

7 Comments on “ಕವಿತೆಯಾದಳಾ..ಗೆಳತಿ..?

  1. ಆಹಾ…ಚೆನ್ನಾಗಿದೆ ನಿಮ್ಮ ಸಿಹಿಯಾದ ಭಾವಕೆ ಪೆನ್ನಿಗೆ ಜಂಭ ಇರಲೇಬೇಕು…!

  2. ಅಚ್ಚವಾದ ಕನ್ನಡ ಅರ್ಥಮಾಡಿಕೊಳ್ಳಲು ಕಷ್ಟ..ಅರ್ಥವದ ಮೇಲೆ i feeling Realy its nice poem

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *