ಮಿಲೇ ಸುರ್ ಮೇರಾ ತುಮಾರಾ….

Share Button
Hemamala. B, DGM, Kluber Lubrication (I) Pvt.Ltd. Mysore

ಹೇಮಮಾಲಾ.ಬಿ

ಇಂದು ಗಣರಾಜ್ಯೋತ್ಸವ ದಿನ.  ಈ ಸಂದರ್ಭದಲ್ಲಿ, ರಾಷ್ಟ್ರೀಯ ಭಾವೈಕ್ಯತೆಯನ್ನು ಬಿಂಬಿಸುವ   “..ಮಿಲೇ ಸುರ್ ಮೇರಾ ತುಮಾರಾ ತೊ ಸುರ್ ಬನೇ ಹಮಾರಾ…” ಎಂಬ ದೂರದರ್ಶನದಲ್ಲಿ  ಬಹಳ ಪ್ರಸಿದ್ಧವಾದ ಹಾಡು-ದೃಶ್ಯಗಳ ಸಂಯೋಜನೆ ನೆನಪಾಗುತ್ತಿದೆ.

 

1988 ರಲ್ಲಿ  ಲೋಕ ಸೇವಾ ಸಂಚಾರ್ ಪರಿಷದ್ ನವರು ಪ್ರಸ್ತುತಿಪಡಿಸಿದ ಈ ಹಾಡು ಬಹಳಷ್ಟು ಕಾಲ ದೂರದರ್ಶನದಲ್ಲಿ ಪ್ರಸಾರವಾಗುತಿತ್ತು. ಈಗಲೂ ಕೆಲವು ಬಾರಿ ಪ್ರಸಾರವಾಗುತ್ತದೆ.  ಹೆಸರಾಂತ ಗಾಯಕರು, ಕ್ರೀಡಾಪಟುಗಳು, ರಾಜಕಾರಣಿಗಳು, ಜನಸಾಮಾನ್ಯರು, ಚಲನಚಿತ್ರ ನಟ/ನಟಿಯರು…ದನಿಗೂಡಿಸಿದ ಈ ಹಾಡಿನ ಕೊನೆಯಲ್ಲಿ, ಸಮವಸ್ತ್ರ ಧರಿಸಿದ ಮಕ್ಕಳು ಪ್ರವಾಹೋಪಾದಿಯಲ್ಲಿ ಬಂದು ಅಂತಿಮವಾಗಿ ರಾಷ್ಟ್ರದ್ವಜ ಮೂಡಿ ಬರುವಾಗ ಹೆಮ್ಮೆ ಅನಿಸುತ್ತದೆ.

 

Flag- mile sur mere tumara

ಆಗಿನ ಶಾಲಾ-ಕಾಲೇಜು ವಾರ್ಷಿಕೋತ್ಸವಗಳಲ್ಲಿ ಈ ಹಾಡಿಗೆ ಒಂದು ಸಮೂಹ ನೃತ್ಯ ಇದ್ದೇ ಇರುತ್ತಿತ್ತು. ಈಗಲೂ ಈ ಹಾಡಿಗೆ ಅದೇ ಮಾನ್ಯತೆ ದೊರೆಯುತ್ತಿದೆ. ‘ನನ್ನ ದನಿಗೆ ನಿನ್ನ ದನಿ ಸೇರಿದಾಗ ಅದು ನಮ್ಮ ದನಿಯಾಗುತ್ತದೆ’ ಎಂಬ ಈ ಸಾಲು ಎಷ್ಟು ಅರ್ಥಪೂರ್ಣ ಅಲ್ಲವೇ?

ಹಾಡನ್ನು ಕೇಳಲು ಈ ಯು-ಟ್ಯೂಬ್ ಕೊಂಡಿಯನ್ನು ಕ್ಲಿಕ್ಕಿಸಿ:  http://youtu.be/-jf6pwtPqCs

 

– ಹೇಮಮಾಲಾ.ಬಿ

 

5 Responses

  1. Jithin Saldhana says:

    Unity in diversity n Al Indian traditions were showcased well in dis song:-)

  2. C S Hanumantha Raju says:

    ನೆನಪಿನಿಂದ ಅಳಿಸಲಾಗದ ದೃಶ್ಯಕಾವ್ಯ

  3. Sathishms Praya says:

    Houdalla! Ee rashtriya bavykytheynnu saaruva hadu bahutheka nanagu marethu hogithu nenapisiddakke thnks, harmonium hididu adee raga nudisuttidene

  4. Sneha Prasanna says:

    ಒಳ್ಳೆಯ ಹಾಡು….ಮೇಡಂ.. Thank u ..

Leave a Reply to Hema Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: