ನಿಲುಕದೆ ಓಡದಿರು ಓ ಚಂದಿರ!

Share Button

 

ಬೆಳದಿಂಗಳ ಚೆಲುವ ಚಂದಿರ,

ನೀನೆಷ್ಟು ಸುಂದರ!

 

ಧರೆಗಿಳಿದು ಒಮ್ಮೆ ಬರುವುದಾದರೆ ಸಾವಿರ

ಚೆಲುವೆಯರ ಹಿಂಡು ನಿನಗಾಗಿ ಕಾದಿವೆ,

ಆಗಾಗ ಮಿಂಚುವ ತಾರೆಗಳು ಕೂಡಾ

ಬಿಟ್ಟು ಕೊಡಲು ಚಿಂತಿಸಿವೆ.

 

ನಿನ್ನ ಹೊಳಪಿನ ಕಂಪಿಗೆ

ಈ ಇರುಳು ಸೊಗಸು,

ಹೊಸದಾದ ಉಲ್ಲಾಸವು ಚಿಮ್ಮುತ

ನವಿರಾಯಿತು ಮನಸು.

 Catching moon

ಬಿಳುಪಾದ ನಿನ್ನ ಉಡುಗೆಯು

ಆ ಗಗನಕೆ ಕಳೆ,

ಬೆರಗಾಗುತ ಶುರುವಾಯಿತು

ಆ ಸಾಗರದ ಅಲೆ.

ಬೊಗಸೆ ಕೈಗಳ ಚಾಚಿ ಹಿಡಿಯಲೊರಟೆ

ಸಿಗದೆ ಹೋದೆ ಏಕೆ?

ಮಿಂಚಿ ಮೋಡ ಸುಳಿದು ಸುಳಿದು

ಕದಿಯುತಿಹರು ಜೋಕೆ!

 

ಹೊಂಗಿರಣದ ಸೂರ್ಯ ನಿನಗೆ ಹೋಲಲಿಲ್ಲ

ನಿನ್ನಂತೆ ಅವನನ್ನು ಕೂಡ ನಾ ಮೆಚ್ಚಲಿಲ್ಲ!

 

– ಸ್ನೇಹಾ ಪ್ರಸನ್ನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: