ಹುಚ್ಚು ಮನಸಿನ ನಡುವೆ
ಸಣ್ಣದೊಂದು ಬೆಳಕು
ಬಿಡಿಸಿದ ಹೂಗಳಲ್ಲಿ
ಗಂಧ ಹುಡುಕುತ್ತದೆ
ಗಾಳಿಯಲ್ಲಿ ಸಾಗಿದ
ಬಂಧವ ಎಳೆಯುತ್ತಾ
ಜೋಡಿಸುವ ಸಲಿಗೆಗೆ
ಪಟಪಟನೆ ಪರಿಚಯವ
ಪರಿಚಯಿಸಿ ಪದ ಸಾಲಿನ
ಮೌನಕ್ಕೆ ಅರ್ಥ ಕಲ್ಪಿಸಿ
ಸಹಜ ವಾಸ್ತವವೇ
ಬೆಳಕಾಗುತ್ತದೆ ಹಗಲಿಗೆ
ಕತ್ತಲೆಗೆ ಹೊಳೆದ
ಕತ್ತಲೆಯ ಬಾಗಿಲಲ್ಲಿ
ಹಣತೆಯೊಂದು
ಬೀಸುವ ಗಾಳಿಗೆ ಮರೆಯಾಗಿ
ಬೆಳಕಾಗಿ ನಿಲ್ಲುತ್ತದೆ.
ಹರಿವ ನೀರಿನ ಹನಿಗೂ
ಆಸರೆಯ ಜರೂರತ್ತು
ನೆನಪಾಗಿ ಮಣ್ಣಲ್ಲಿ
ಮರೆಯಾಗಿ ಬೇರಿನ
ಅಂದಾಜು ಸೇರಿ
ಲೆಕ್ಕ ಬರೆಯುತ್ತದೆ
ಪುಟವ ತಿರುವಿ ಹಾಕುತ್ತದೆ.

-ನಾಗರಾಜ ಬಿ ನಾಯ್ಕ, ಹುಬ್ಬಣಗೇರಿ.


ಸರಳವಾದರೂ ಅರ್ಥಪೂರ್ಣ ವಾದ ಕವನ.. ಚೆನ್ನಾಗಿ ದೆ ಸಾರ್…
short and sweet
ಚೆನ್ನಾಗಿದೆ ಕವನ
ಕವಿತೆ ಬಹಳ ಸುಂದರವಾಗಿ ಮೂಡಿ ಬಂದಿದೆ.
ಸರಳ ಸುಂದರ ಕವನ.