ಹುಡುಕುತ ಹುಡುಕುತ
ಇನ್ನೆಲ್ಲೋ ಸಾಗುವುದು
ಏನನ್ನೋ ಹುಡುಕುತ್ತಾ ಮನಸ್ಸು
ಇರುವುದು ಸಾಲದೆ
ಇಲ್ಲದಿರುವುದ ಅರಸುತ
ತುಂಬಿಕೊಳ್ಳುವುದು ನೂರು ಕನಸು
ಹುಡುಕುವುದು ಮುಗಿಯದು ಎಂದೂ
ತಂದಿಡಲಾಗದು ಎಲ್ಲವನ್ನೂ ಇಂದು
ಮನಸ್ಸು ಬರಿದಾಗಿದೆ ನೊಂದು ಬೆಂದು
ಇರುವುದು ಸಾಲದೇನಿಸುವುದು
ಇನ್ನೊಂದು ಮಗದೊಂದು ಬೇಕೆನಿಸುವುದು
ಮನಸ್ಸು ಸದಾ ಹಪಹಪಿಸುವುದು
ಜೊತೆಗಿರುವುದು ಬೇಕೆನಿಸದು
ತಾಟಲ್ಲಿರುವುದು ಬಾಯಿಗೆ ರುಚಿಸದು
ಇದ್ದೂ ಇಲ್ಲದಂತಾಗುವುದು ಇರುವುದು
ಕ್ಷಣದ ರುಚಿಗಾಗಿ ಎಸ್ಟೊಂದು ತವಕ
ಎದೆಯೊಳಗೆ ಇನ್ನಿಲ್ಲದ ಪುಳಕ
ಕೊನೆಗೆ ಬದುಕಾಗುವುದು ನರಕ
ಮನದ ತುಂಬಾ ತುಂಬಿಕೊಂಡು ಕೊಳಕ
ಕಾಣದೆ ಹೋಗುವೆವು ಕಣ್ಣೆದುರ ಬೆಳಕ
ಅರಿಯದೆ ಹೋಗುವೆವು ಎಲ್ಲವೂ ಕ್ಷಣಿಕ
ನಾಗರಾಜ್ ಜಿ.ಎನ್. ಬಾಡ, ಕುಮಟ


ಎಂದಿನಂತೆ ಸರಳ…ಕವನ ಚೆನ್ನಾಗಿ ದೆ ಸಾರ್
ಚೆನ್ನಾಗಿದೆ ಕವಿತೆ.
ಚೆನ್ನಾಗಿದೆ ಕವನ.
ತೃಪ್ತಿ ಕಾಣದ ಮನಸ್ಸಿನ ಹಪಾಹಪಿ ಕವನದಲ್ಲಿ ಸಹಜವಾಗಿ ಮೂಡಿಬಂದಿದೆ.
ಇರುವುದನ್ನು ಬಿಟ್ಟು ಇಲ್ಲದಿರುವುದನ್ನು ಹುಡುಕುತ್ತಾ ಹೊರಟಾಗ ಆಗುವುದು ಬದುಕು ನರಕ
ಅಭಿನಂದನೆಗಳು
ಮನದ ತುಂಬಾ ತುಂಬಿಕೊಂಡು ಕೊಳಕ
ಕಾಣದೆ ಹೋಗುವೆವು ಕಣ್ಣೆದುರ ಬೆಳಕ
ಅರಿಯದೆ ಹೋಗುವೆವು ಎಲ್ಲವೂ ಕ್ಷಣಿಕ
ಈ ಸಾಲುಗಳನ್ನ ಮತ್ತೆ ಮತ್ತೆ ಓದಬೇಕೆನಿಸುತ್ತದೆ.
ಇರುವುದನ್ನ ಮೊದಲು ಅನುಭವಿಸೋಣ!.