ಬೆಳಕು-ಬಳ್ಳಿ

ಕಾಲದ ಕನ್ನಡಿ

Share Button

ಅರಣ್ಯ ರೋದನವಾಯ್ತು ಕೇಳುವವರಿಲ್ಲ ನಿನ್ನ ಕೂಗು
ನಿನ್ನ ನಿಷ್ಠೆ ಪ್ರಾಮಾಣಿಕತೆಗೆ ಇಲ್ಲ ಕವಡೆ ಕಾಸಿನ ಕಿಮ್ಮತ್ತು

ತನ್ನತನವ ಹೆಚ್ಚಿಸಿಕೊಳ್ಳಲು ನಡೆಸಿದ ಕುಟಿಲ ಕಾರ್ಯತಂತ್ರಕ್ಕೆ ಸಿಕ್ಕಿದೆ ಗೆಲುವು
ಮೊದಲು ಹಾಡಿ ಹೊಗಳಿದವರ ಕಣ್ಣಲ್ಲಿಂದು ಕಸವಾಗಿಹೆವು

ಬಿರುದು ಸನ್ಮಾನಗಳ ಜಾಗದಲಿ ಬರೀ ಅವಹೇಳನ ಮಾತುಗಳು
ಬಿದ್ದ ಹುಲಿಗೆ ಆಳಿಗೊಂದು ಕಲ್ಲು ಎನ್ನುವಂತೆ ತೂರಿ ಬರುತಿಹ ಬಿರು ನುಡಿಗಳು

ಕಲಿ ಪಾರ್ಥನಂತೆ ಕದನದಲಿ ಹೋರಾಡಿ ಗೆದ್ದ ವಿಜಯಗಳು ಈಗ ನೆನಪಿಲ್ಲ
ನೀವೇ ಅಮೂಲ್ಯ ಆಸ್ತಿ ಅನ್ನುವ ಮಾತು ಮರೆತೇ ಹೋಗಿದೆಯೆಲ್ಲಾ

ಕೆಲ ವರ್ಷಗಳ ಅಂತರದಲ್ಲಿ ಎಲ್ಲಾ ಅಯೋಮಯವಾಗಿದೆ
ಬದಲಾದ ಪರಿಸ್ಥಿತಿ ನಿಲ್ಲದ ಸ್ಪರ್ಧೆ ಕಣ್ಣೀರ ತರಿಸಿದೆ

ಜಂಘಾಬಲವೇ ಉಡುಗಿ ಹೋಗಿ ಆತಂಕ ಮನೆ ಮಾಡಿದೆ
ಆತ್ಮವಿಶ್ವಾಸವೇ ಕುಗ್ಗಿ ಹೋಗಿ ಎಮ್ಮ ಬಲಹೀನತೆ ಮೇಲಾಗಿದೆ

ನೈಜತೆ ಅರಿಯದೆ ಏಕಪಕ್ಷೀಯವಾಗಿ ನಿರ್ಧರಿಸುವ ಮನಸ್ಥಿತಿಗೆ ಏನು ಹೇಳಲಿ
ಚಿನ್ಮಯನ ಕೃಪೆ ಇರುವವರೆಗೆ ಹೀಗೆ ತೇಲುತಾ ಸಾಗೋಣವೆಂದು ಮನವ ಸಂತೈಸಲಿ

-ಕೆ.ಎಂ ಶರಣಬಸವೇಶ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *