ಉಸಿರ ಇನ್ಬಾಕ್ಸ್ ನಲ್ಲಿ
ನೂರಾರು ಸಾಲು ಕುಳಿತಿರುವಂತೆ
ಪುಟ ಪುಟಕೂ
ಬಣ್ಣ ತುಂಬಿದ ನೆನಪು ಉಳಿವಂತೆ
ಹೊರಬರುವ ಉಸಿರೊಂದು
ಜಗವ ಸುತ್ತಿ ಬರುವಂತೆ
ಈ ನೆಲದ ಗುರುತು
ಒಂದು ಸೋಜಿಗದ ಹರಿವು
ಉಸಿರಿಗೆ ಅಂಟಿದ ನಂಟು
ಬಿಡಿಸಲಾಗದ ಒಗಟು
ಕಥೆಗಳ ಸರಣಿ
ಓದಿದರೆ ಅರ್ಥವ ಹರಡಿ
ಎಲ್ಲೋ ಹೊರಟಂತೆ
ಉಸಿರೊಳಗೆ ಹೆಸರು
ಇದೇ ಬದುಕು ಬವಣೆ
ಎಂದುಕೊಂಡರೂ ಜಗದೊಳಗೆ
ಸುತ್ತಿ ಬಳಸಿ ಮತ್ತದೇ
ತಿರುವಿಗೆ ಉಸಿರು
ಬಂದು ನಿಲ್ಲುತ್ತದೆ
ನಗುತ್ತಾ ನಗುವ ಹಂಚಿ
ಉಪಕರಿಸಿ ಒಳಿತಿನ
ಬೆರಗಿಗೆ ಹೊಸತಾಗಿ
ಉಳಿದು ಬಿಡುತ್ತದೆ…..
ನಾಗರಾಜ ಬಿ. ನಾಯ್ಕ, ಕುಮಟಾ.


ಚೆನ್ನಾಗಿದೆ
ಕವಿತೆ ಚಿಂತನೆಗೆ ಹಚ್ಚುವಂತೆ ಮಾಡಿದೆ
ಉಸಿರಿಗೇ ಉಸಿರ ನೀಡುವ ಚಂದದ ಕವಿತೆ
ನಗುತ್ತಾ ನಗುವ ಹಂಚಿದ ಕವನ
ವಂದನೆಗಳು ಸರ್
ಸೊಗಸಾಗಿದೆ ಕವನ.
ಚಿಕ್ಕ ಚೊಕ್ಕ ಕವನ
ಅರ್ಥ ಗರ್ಭಿತ ವಾಗಿದೆ