ಪ್ರವಾಸ

ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-13

Share Button

(ಹಿಂದಿನ ಸಂಚಿಕೆಯಿಂದ ಮುಂದುವರಿದುದು)
ಭಾಗ – 6
ಸ್ವೀಟ್- ಸ್ವಿಟ್ಜರ್ಲೆ೦ಡ್

ಭೂ ಲೋಕದ ಸ್ವರ್ಗ – ಸ್ವಿಟ್ಜರ್ಲೆ೦ಡ್
ದಿನ 10

ಜೂರಿಚ್ ನಗರಕ್ಕೆ ಹಿಂದೆ 2012 ರಲ್ಲಿ ನಾನು ಭೇಟಿ ಕೊಟ್ಟಿದ್ದೆ. ಬೆಳಗ್ಗೆ ಎದ್ದು ಆಗ ನಾವು ತಂಗಿದ್ದ ಮಾವರಿಕ್ ಹೋಟೆಲ್ ಎಲ್ಲಿದೆ ಎಂದು ಸುತ್ತ ನೋಡಿದೆ. ಆ ದಿನದ ನಮ್ಮ ನಿಗದಿತ ಕಾರ್ಯಕ್ರಮದಂತೆ ಸುಮಾರು 50 ಕಿಲೋಮೀಟರ್ ದೂರದ ಲೂಸರ್ನ್ ನಗರಕ್ಕೆ, ನಾವು ಬಸ್ನಲ್ಲಿ ಹೋಗುತ್ತಿದ್ದಾಗ, ಆ ಮಾವರಿಕ್ ಹೋಟೆಲ್ ಕಂಡು, ಹನ್ನೆರಡು ಹದಿಮೂರು ವರ್ಷಗಳ ಹಿಂದಿನ ನಮ್ಮ ಭೇಟಿಯನ್ನು ಮೆಲುಕು ಹಾಕಿದೆ. ಲೂಸರ್ನ್ ಸ್ವಿಟ್ಜರ್ಲೆ೦ಡ್ ದೇಶದ ಒಂದು ಪ್ರವಾಸಿ ನಗರ. ಜೂರಿಚ್ ನಿಂದ ಲೂಸರ್ನ್ ಗೆ ಪ್ರಯಾಣಿಸುವ ದಾರಿಯೇ ಒ೦ದು ಅವಿಸ್ಮರಣೀಯ ಅನುಭವ. ಆಲ್ಪೈನ್ ಪರ್ವತಗಳು, ಕೆರೆ ನದಿಗಳಿ೦ದ ನಯನ ಮನೋಹರವಾಗಿದೆ. ಆ ನಗರ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಅಲ್ಲಿ ನಿಸರ್ಗ ಸೌಂದರ್ಯ, ಕೆರೆ ,ರಸ್ತೆ, ಸುಂದರ ಕಟ್ಟಡಗಳು, ಪುರಾತನ ಮರದ ಸೇತುವೆ, ಸಿಂಹದ ಸ್ಮಾರಕ, ಚಾಕಲೇಟ್ ಮತ್ತು ಕೈಗಡಿಯಾರದ ಅಂಗಡಿಗಳು, ಇವೆ. ಲೂಸರ್ನ್ ಪಟ್ಟಣ ಸ್ವಿಟ್ಜರ್ಲ್ಯಾಂಡ್ ನ ಹೃದಯ. ಅತ್ಯಂತ ಸುಂದರ ನಗರ. 14ನೇ ಶತಮಾನದಲ್ಲಿ ರುಯ್ಸ್ ನದಿಗೆ ಅಡ್ಡಲಾಗಿ ಮರದಲ್ಲಿ ಕಟ್ಟಿದ ಚಾಪೆಲ್ ಸೇತುವೆಯ ಎಡ ಬಲ ಭಾಗದ ಮೇಲೆ ಲೂಸರ್ನ್ ನಗರದ ಇತಿಹಾಸ ತಿಳಿಸುವ ಚಿತ್ರಗಳು ಮನಸೆಳೆಯುತ್ತವೆ. , ಕೆರೆಗೆ ಮತ್ತು ನದಿಯ ಮಧ್ಯ ಭಾಗದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರ ಇದೆ. ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಫ್ರೆಂಚ್ ನ ರಾಜ ಮನೆತನದವರ ರಕ್ಷಣೆಗಾಗಿ ಪ್ರಾಣತೆತ್ತ ಸ್ವಿಸ್ ಸೈನಿಕರ ನೆನಪಿನಾರ್ಥ ಏಕಶಿಲೆಯಲ್ಲಿ ನಿರ್ಮಿಸಿದ ಸಿಂಹದ ಸ್ಮಾರಕ ಮತ್ತು ಅದರ ಇತಿಹಾಸ ಓದಿದಾಗ ಹೃದಯ ತುಂಬಿ ಬಂದಿತು. ಈ ಎಲ್ಲಾ ಸ್ಮಾರಕ,, ಸ್ಥಳಗಳಿಗೆ ಭೇಟಿ ನೀಡಿ ಮಧ್ಯಾಹ್ನದವರೆಗೆ ಅಲ್ಲಿ ರಸ್ತೆಗಳಲ್ಲಿ ತಿರುಗಾಡಿ ಸೌಂದರ್ಯವನ್ನು ಸವಿದು ಮಧ್ಯಾಹ್ನದ ಊಟದ ನಂತರ ಅಲ್ಲಿಂದ 50 ಕಿಲೋಮೀಟರ್ ದೂರದ ಏ೦ಜೆಲ್ ಬರ್ಗ್ ನ ಮೌಂಟ್ ತಿತ್ಲಿಸ್,ಗೆ ಹೊರಟೆವು.

ನಮ್ಮ ಕನಸಿನ ತಾಣ ಮೌ೦ಟ್ ತಿತ್ಲಿಸ್. 2012 ರಲ್ಲಿ ಭೇಟಿ ಕೊಟ್ಟಾಗ ನಮ್ಮ ಕುಟುಂಬದವರನ್ನು ಕರೆದುಕೊಂಡು ಬಂದು ಅವರಿಗೂ ಈ ಜಾಗವನ್ನು ತೋರಿಸಬೇಕೆನಿಸುತ್ತಿತ್ತು. ನಮ್ಮ ಶ್ರೀಮತಿ ಮತ್ತು ತಂಗಿ ಭಾವ ಅವರೊಂದಿಗೆ ಬಂದು ಆ ಕನಸನ್ನು ನನಸಾಗಿಸಿಕೊ೦ಡೆವು. ಇದರಿ೦ದ ಅತೀವ ಸ೦ತೋಷ ವಾಯಿತು. ಸ್ವಿಸ್ ನ ಮಧ್ಯ ಭಾಗದಲ್ಲಿ ಉರಿ ಆಲ್ಪೈನ್ ಪರ್ವತಗಳಲ್ಲಿರುವ ಎಂಜಲ್ಬರ್ಗ್ ಪಟ್ಟಣದ ಹತ್ತಿರವಿರುವ ಮೌಂಟ್ ತ್ತಿತ್ಲಿಸ್ ಸ್ವಿಸ್ ನ ಅತಿಮುಖ್ಯ, ಭೇಟಿ ಕೊಡಲೇಬೇಕಾದಂತಹ ಪ್ರವಾಸಿ ತಾಣ. 3238 ಮೀಟರ್ಎತ್ತರ ವಿರುವ ತುದಿಯನ್ನು ಮುಟ್ಟಲು, ತಿರುಗುವ ಕೇಬಲ್ ಕಾರು. , ಪ್ರಪಂಚದ ಏಕೈಕ ತಿರುಗುವ ರೆಸ್ಟೋರೆಂಟ್, ಅತಿ ಎತ್ತರದ ತೂಗು ಸೇತುವೆ, 5000 ವರ್ಷಗಳಷ್ಟು ಹಳೆಯದಾದ ಗ್ಲೇಷಿಯರ್, ಹಿಮ ಗುಹೆ, ಸ್ಕಿಯಿ೦ಗ್ ಇತರ ಮನೊರ೦ಜನಾ ಸ್ಥಳಗಳಿವೆ. ಅಲ್ಲಿಯ ಹಿಮಚ್ಚಾದಿತ ಆಲ್ಪೈನ್ ಪರ್ವತಗಳ ಸೌಂದರ್ಯವನ್ನು ಸವಿದು, ಕ್ಯಾಮೆರಾ ದಲ್ಲಿ ಫೋಟೋಗಳನ್ನು ತು೦ಬಿಸಿಕೊ೦ಡು ಸಂಜೆ ವಾಪಸ್ ಜೂರಿಚ್ ನಗರಕ್ಕೆ ಹೋದೆವು. ರಾತ್ರಿಯ ಊಟ ಮುಗಿಸಿ ರಾಡಿಸನ್ ಹೋಟೆಲ್ ಗೆ ಹಿಂದಿರುಗಿದೆವು..

2012ರಲ್ಲಿ ನೋಡಿದ ಜುರಿಚ್ ನಗರವಾಗಲಿ, ಲೂಸರ್ನ್ ನಗರವಾಗಲಿ, ಮೌಂಟ್ ತಿತ್ಲಿಸ್ ಆಗಲಿ, 2025 ರಲ್ಲೂ ಸಹ ಅಂತಹ ವ್ಯತ್ಯಾಸ ಕಾಣಲಿಲ್ಲ. ನಮ್ಮ ಬೆಂಗಳೂರು ಈ 13 ವರ್ಷದಲ್ಲಿ ಗುರುತು ಹಿಡಿಯಲಾರದಷ್ಟು ಬದಲಾವಣೆ ಹೊಂದಿದೆ. ನಮ್ಮ ದೇಶದಲ್ಲಿ ಹಳ್ಳಿ ಹಳ್ಳಿಗಳು 10 ವರ್ಷದಲ್ಲಿ ಗುರುತು ಹಿಡಿಯಲಾರದಷ್ಟು ಪ್ರಗತಿಯನ್ನು ಹೊಂದಿರುತ್ತವೆ, ಆದರೆ ಇಲ್ಲೇಕೆ ಹೀಗೆ ಎನ್ನುವ ಆಲೋಚನೆ ತಲೆಯಲ್ಲಿ ಬಂದು ನಮ್ಮ ದೇಶದ ಬಗ್ಗೆ ಹೆಮ್ಮೆ ಅನ್ನಿಸಿತು.

(ಮುಂದುವರಿಯುವುದು)
ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ:
https://surahonne.com/?p=44735

ಟಿ.ವಿ.ಬಿ.ರಾಜನ್ , ಬೆಂಗಳೂರು

8 Comments on “ಯೂರೋಪ್‌ ಪ್ರವಾಸ (ಏಕೀಕೃತ) : ಭಾಗ-13

  1. Some details would have been given about Mount Titlis for the future visitors who visit Switzerland . Anyway we’ll narrated.

  2. ಅಭೂತಪೂರ್ವ ಪ್ರಕೃತಿ ಸೌಂದರ್ಯಕ್ಕೆ ಸ್ವಿಟ್ಜರ್ಲೆ೦ಡ್ ಗೆ ಬೇರೆ ಯಾವುದೂ ಸಾಟಿಯಲ್ಲ! ಸುಂದರ ತಾಣಗಳಲ್ಲಿ ಸುತ್ತಾಡಿದ ಅನುಭವವನ್ನು ನೀಡಿದತು…ಈ ಪ್ರವಾಸ ಕಥನ!

  3. ನಮ್ಮ ನೆನಪುಗಳು ಮರುಕಳಿಸುವಂತೆ ಮಾಡಿತು.

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *