ಬೆಳಕು-ಬಳ್ಳಿ

ಕ್ಷಣವೊಂದಕ್ಕೆ……..

Share Button

ಹುಟ್ಟಿದ ಕ್ಷಣವೊಂದಕ್ಕೆ
ನಿಮಿಷದ ಕೌತುಕ
ಬೆಳೆಯುತ್ತಾ ದಿನವಾಗಿ
ಉಳಿವ ಕನಸಿನ ಹೂವಾಗುತ್ತದೆ
ಬೇರಿನ ಚಿಗುರಾಗುತ್ತದೆ
ಮತ್ತೆ ಮಾತಾಗಿ ನಗೆಯಾಗಿ
ನೆಲದ ಮಣ್ಣೊಳಗೆ
ಸೇರಿ ಜಗವಾಗುತ್ತದೆ
ಅರಿವಿನ ಗುರುತು
ಮೂಲದ ನೆರಳು ಕಾಣುವ ಕನಸು
ಜಗದ ನಿಯಮಕೆ
ಸಾಲುಗಳ ಹರಡಿ
ದಿನದ ಆರಂಭಕ್ಕೆ ಅರಳಿ
ನಗುವ ಹಂಚುತ್ತದೆ
ಓದದ ಭಾವಗಳ ಎದುರು
ನೋಡುತ್ತಾ ತೆರೆಗಳಲಿ
ತೇಲಿ ಕಡಲೇ ಆಗುತ್ತೆ
ಹಾರುವ ಹಕ್ಕಿಯ
ಕಣ್ಣ ಭರವಸೆಗಳ ಓದಿ
ಗೂಡಿಗೊಂದು ಚಿತ್ರ
ಬರೆಯುತ್ತದೆ ಕ್ಷಣಗಳು
ಊಹಿಸದ ಕಂಗಳ
ಕನಸಿಗೆ ಬಣ್ಣ ಹಚ್ಚುವ
ಮೊದಲೇ ಕಾಲ
ಸರಿಯುತ್ತದೆ ಸುಮ್ಮನೇ…….

ನಾಗರಾಜ ಬಿ. ನಾಯ್ಕ, ಕುಮಟಾ.

5 Comments on “ಕ್ಷಣವೊಂದಕ್ಕೆ……..

  1. ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿ ಜೊತೆಗಿನ ಭಾವದ ಅಪೂರ್ವ ಕವನ!

  2. ಕಾಲದೊಂದಿಗೆ ಬದಲಾಗುವ ನಿಸರ್ಗ ಸಹಜ ಪ್ರಕ್ರಿಯೆಗಳ ಸುಂದರ ಅನಾವರಣ

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *