ಹುಟ್ಟಿದ ಕ್ಷಣವೊಂದಕ್ಕೆ
ನಿಮಿಷದ ಕೌತುಕ
ಬೆಳೆಯುತ್ತಾ ದಿನವಾಗಿ
ಉಳಿವ ಕನಸಿನ ಹೂವಾಗುತ್ತದೆ
ಬೇರಿನ ಚಿಗುರಾಗುತ್ತದೆ
ಮತ್ತೆ ಮಾತಾಗಿ ನಗೆಯಾಗಿ
ನೆಲದ ಮಣ್ಣೊಳಗೆ
ಸೇರಿ ಜಗವಾಗುತ್ತದೆ
ಅರಿವಿನ ಗುರುತು
ಮೂಲದ ನೆರಳು ಕಾಣುವ ಕನಸು
ಜಗದ ನಿಯಮಕೆ
ಸಾಲುಗಳ ಹರಡಿ
ದಿನದ ಆರಂಭಕ್ಕೆ ಅರಳಿ
ನಗುವ ಹಂಚುತ್ತದೆ
ಓದದ ಭಾವಗಳ ಎದುರು
ನೋಡುತ್ತಾ ತೆರೆಗಳಲಿ
ತೇಲಿ ಕಡಲೇ ಆಗುತ್ತೆ
ಹಾರುವ ಹಕ್ಕಿಯ
ಕಣ್ಣ ಭರವಸೆಗಳ ಓದಿ
ಗೂಡಿಗೊಂದು ಚಿತ್ರ
ಬರೆಯುತ್ತದೆ ಕ್ಷಣಗಳು
ಊಹಿಸದ ಕಂಗಳ
ಕನಸಿಗೆ ಬಣ್ಣ ಹಚ್ಚುವ
ಮೊದಲೇ ಕಾಲ
ಸರಿಯುತ್ತದೆ ಸುಮ್ಮನೇ…….

–ನಾಗರಾಜ ಬಿ. ನಾಯ್ಕ, ಕುಮಟಾ.


ಚಲೋ ಬಂದಿದೆ
ಧ್ಯಾನಸ್ಥ ಕವಿತೆ
ಅಭಿನಂದನೆಗಳು
ಚೆನ್ನಾದ ಕವನ… ಸಾರ್
ಸುಂದರ ಕವನ
ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿ ಜೊತೆಗಿನ ಭಾವದ ಅಪೂರ್ವ ಕವನ!
ಕಾಲದೊಂದಿಗೆ ಬದಲಾಗುವ ನಿಸರ್ಗ ಸಹಜ ಪ್ರಕ್ರಿಯೆಗಳ ಸುಂದರ ಅನಾವರಣ