ನಡೆವ ಹೆಜ್ಜೆಗೆ
ನೂರಾರು ದಾರಿಗಳು
ಒಳ ತಿರುವುಗಳ
ದಾಟಿದರೂ ಕಾಲುದಾರಿ
ನಡೆದಷ್ಟೂ ದೂರ ಪಯಣ
ಕಾಲನ ಹಣತೆಯಲ್ಲಿ
ಉರಿವ ದೀಪಗಳು
ಹೆಜ್ಜೆ ಗುರುತಿನ ಆಧಾರ
ಆದರ ಅಭಿಮಾನ
ಬದುಕಿಗೆ ಅಡಿಪಾಯ
ದೂರದಿ ನಿಂತರೂ
ಗೆಲುವು ನಡೆವ ಹೆಜ್ಜೆಗೆ
ದಾರಿ ಸಮೀಪ
ಎನಿಸುತ್ತದೆ ನಡಿಗೆಗೆ
ನಡೆಯಬೇಕು ನಮ್ಮ ಹೆಜ್ಜೆಗೆ
ನಾವೇ ಉಪಕರಿಸಿ
ನಿಧಾನಿಸಿ ಅಭಿಮಾನಿಸಿ
ಎಲ್ಲವ ಮತ್ತೆ ಅರಗಿಸಿ
ಕರಗಿಸಿ ಗಟ್ಟಿಯಾಗುತ್ತಾ
ಹೂವಂತೆ ನಗುತಾ
ನಿಲ್ಲಬೇಕು ದಾರಿಗೆ
ನೆರಳಿಗೆ ತಂಪಿಗೆ ಉಪಕರಿಸಿ……

-ನಾಗರಾಜ ಬಿ ನಾಯ್ಕ, ಕುಮಟಾ.


ಬಾಳ ಪಯಣದಲ್ಲಿ ಎಲ್ಲಿಯೂ ನಿಲ್ಲದೆ ಸಾಗುವುದೇ ಒಳಿತು ಎಂದು ಗುನುಗುತ್ತಿರುವ ಚೆಂದದ ಕವನ
Beautiful
ಉತ್ತಮ ಸಂದೇಶವನ್ನು ಹೊತ್ತ ಕವನ ಚೆನ್ನಾಗಿ ದೆ..ಸಾರ್