ಕಣ್ಣಮುಚ್ಚಾಲೆ
ಎಲ್ಲೂ ಒಪ್ಪ ಓರಣ ಚಂದ ಚಂದದ
ಶುಭ್ರ ಉಡುಪ ಧರಿಪ ಕೊಳೆ ಮೆತ್ತಿದ
ಮಗನ ಅಂತರಂಗ.
ಎರಡಂತಸ್ತಿನ ಬೆಳ್ಳಿ ಬಣ್ಣದ ಜಮಖಾನೆ
ಹಾಸಿದ ಮನೆಯ ಮುಂದು.
ಹರಿಯುವ ಚರಂಡಿಯಿಲ್ಲಿ,
ಕಾಲು ಮುಂದಡಿ ಹಾಸಿದ ಗೋಣಿಚೀಲ.
ಮಾತಿಗೆ ಸಿಗದ, ಸಿಡುಕ, ಕಮಾಯಿ ಗಂಡನ
ಹೆಂಡತಿ ಬಡವನ ಸಂಗವಾಗಿರಲು
ಕೊಳಕು ಮಾಸಿ ಶುಭ್ರವಾಯಿತೆಂದು.
ಓಕುಳಿ ದುಡ್ಡಿನ ಮನೆ,
ಜೋಪುಡಿ ಮಮಕಾರದ ಸೆಲೆ
ಮಾನವ ಪ್ರೀತಿಯು ಉಸಿರುಗಟ್ಟಿ
ಕಣ್ಣಮುಚ್ಚಾಲೆಯಾಡಲು.
– ಅಕ್ಷಯ ಕಾಂತಬೈಲು
ಕವನ ಚೆನ್ನಾಗಿದೆ.