ನೀನು ನೀರಿನಲ್ಲಿ ಅಡಗಿಕೊಳ್ಳುವೆ, ಸರಿ
ಆದರೆ ಬೆಂಕಿಯಲ್ಲಿ ಹೇಗೆ ಅಡಗಿಕೊಳ್ಳುವೆ?
ಮೇಘ ಸ್ಫೋಟದಿಂದ ನೀನು ತಪ್ಪಿಸಿಕೊಳ್ಳುವೆ, ಸರಿ
ಆದರೆ ಆಕಾಶ ಗುರಿಮಾಡಿ ಹೊಡೆಯುವ
ಸಿಡಿಲುಗಳಿಂದ ಹೇಗೆ ತಪ್ಪಿಸಿಕೊಳ್ಳುವೆ?
ಪರ್ವತಗಳಿಂದ ಪ್ರವಾಹದಂತೆ ಹರಿಯುವ
ಭೀಕರ ಹಿಮಪಾತವನ್ನು ತಡೆಯುವೆ, ಸರಿ
ಆದರೆ ಅಗ್ನಿಪರ್ವತಗಳನ್ನು ಸೀಳಿಕೊಂಡು ಬರುವ
ಲಾವಾ ಪ್ರವಾಹದ ಕಥೆಯೇನು?
ಕಾಡ್ಗಿಚ್ಚಿಗೆ ಬಲಿಯಾಗುವ ಪ್ರತಿಯೊಂದು ಮರವೂ
ಒಂದು ಆಗ್ನೇಯಾಸ್ತ್ರವೇ.
ಯುದ್ಧವೂ ಕೂಡ ಫೈರ್‌ನಿಂದಲೇ ಆರಂಭವಾಗಿ
ಫೈರ್ ಜೊತೆಗೆ ಅಂತ್ಯಗೊಳ್ಳುತ್ತದೆ.
ಆದರೆ, ಎಲ್ಲಾ ಬೆಂಕಿಗಳಿಗಿಂತ ಕ್ರೂರವಾದದ್ದು,
ಎಲ್ಲಾ ಚಿಚ್ಚುಗಳಿಗಿಂತ ಭಯಂಕರವಾದದ್ದು,
ಎಲ್ಲಾ ಜ್ವಾಲೆಗಳಿಗಿಂತ ಮಾರಣಾಂತಿಕವಾದದ್ದು
ಒಂದಿದೆ.
ಕ್ಷಣಕ್ಷಣಕ್ಕೂ ಮೃತ್ಯುವಿಗೆ ಹತ್ತಿರವಾಗಿಸುವ ಕಾಲಕೂಟ,
ಹೊಟ್ಟೆಯಲ್ಲಿ ವಿಸ್ತರಿಸುವ ಮರುಭೂಮಿ,
ಮನುಷ್ಯನನ್ನು ಪ್ರಾಣಿಯನ್ನಾಗಿಸುವ ಘೋರ ಬರಗಾಲ,
ಅದೇ…
ಹಸಿವಿನ ಜ್ವಾಲೆ!
ತೆಲುಗು ಮೂಲ : ಡಾ. ಅಮ್ಮಂಗಿ ವೇಣುಗೋಪಾಲ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀ ಮೋಹನ್


ಅನುವಾದ ಕವನ ಚೆನ್ನಾಗಿ ದೆ ಸಾರ್..
Nice
ಬರಗಾಲದಲ್ಲಿ ಹಸಿವೆ ಎಂಬ ಭೀಕರ ಜ್ವಾಲೆಯಿಂದ ಸುಡುವ ಜೀವಿಗಳು ಕರುಣೆ ಕಥೆ ತುಂಬಿದ ಅನುವಾದಿತ ಕವನ ಮನತಟ್ಟಿತು!