ಲಹರಿ

ನಿಮ್ಮ ನಿರ್ಧಾರ ನಿಮ್ಮ ಕೈಯಲ್ಲಿ

Share Button

ಓದುಗರಿಗೆ ಒಂದು ಪ್ರಶ್ನೆ :ನಿಮ್ಮ ಜೀವನ ಯಾರ ನಿಯಂತ್ರಣದಲ್ಲಿದೆ ಇದಕ್ಕೆ ವಿಭಿನ್ನ ಹಿನ್ನೆಲೆಯ ಯುವಜನ ವಿಭಿನ್ನ ಉತ್ತರ ಕೊಡಬಹುದು. ಹಿಂದೆ ದೈವದಲ್ಲಿ ಅಪಾರ ನಂಬಿಕೆ ಇಟ್ಟಿದ್ದ ಹಿರಿಯರು ಹೇಳುತ್ತಿದ್ದರು ‘ಅದು ದೈವರ ಕೈಯಲ್ಲಿ’. ಇನ್ನು ಕೆಲವರು ಹೇಳುತ್ತಾರೆ, ‘ತಂದೆ-ತಾಯಿಗಳ ಕೈಯಲ್ಲಿ’. ಓದಿ ಬುದ್ದಿವಂತರಾಗಿ ಒಳ್ಳೆಯ ಕೆಲಸ ಕಂಡುಕೊಂಡಿರುವವರು ಹೇಳಬಹುದು ನನ್ನ ಕೈಯಲ್ಲಿ – “- ನನ್ನ ಹೆಂಡತಿಯ ಕೈಯಲ್ಲಿ” – ‘ನನ್ನ ಗಂಡನ ಕೈಯಲ್ಲಿ’ – ‘ಕಾಣದ ಕೈಯಲ್ಲಿ’ –‘ದುಡ್ಡಿನ ಕೈಯಲ್ಲಿ’ – ‘ಓದಿನ ಕೈಯಲ್ಲಿ’..

ನೀವು ಭವಿಷ್ಯದಲ್ಲಿ ಹೇಗಿರಬೇಕು ಎಂಬ ಬಗ್ಗೆ ಉಚಿತ ಸಲಹೆ ಕೊಡುವವರು ನಿಮಗೆ ಬೇಕಾದಷ್ಟು ಜನ ಸಿಗಬಹುದು.

ನಿಮ್ಮ ಇರುವಿಕೆಯ ಮೇಲೆ ನಿಮ್ಮ ನಿಯಂತ್ರಣವಿಲ್ಲ ಎಂದುಕೊಳ್ಳುವುದು ಸುಲಭ. ಆದರೆ ಇದು ವಿರುದ್ಧ ದಿಕ್ಕಿನಲ್ಲಿ ಯೋಚಿಸಬೇಕಾದ್ದು ನೀವು ಮಾತ್ರ. ನಿಮ್ಮ ನಿಮ್ಮ ಜೀವನ ನಡೆಸುವ ಬಗ್ಗೆ, ಪೂರ್ಣಾವಧಿಗೆ ಹೇಗಿರಬೇಕು ಎಂಬ ನಿರ್ಧಾರ ಮಾಡಬೇಕು ಎಂದು ಹೇಳಿದ್ದಾರೆ ಸಮಂತ ಬೆಲ್‌ಟ್ರಾನ್.ಅವರು ಹೇಳುವಂತೆ ಮೊಟ್ಟ ಮೊದಲು ನಿಮ್ಮ ಗುರಿಯಾಗಿರುವ ನಿಮ್ಮ ಸಾಧನೆಯಾಗಬೇಕೆಂದಿರುವ ಬಗ್ಗೆ, ನಿಮ್ಮ ಸಂತೋಷದ ಬಗ್ಗೆ ನೀವೇನಂದುಕೊಂಡಿದ್ದೀರಿ? ಮೊಟ್ಟ ಮೊದಲು ಸಂತಸ ಎಂಬುದಕ್ಕೆ ನೀವೇ ನಿಮ್ಮ ವ್ಯಾಖ್ಯೆ ಕೊಡಿ. ನಿಮ್ಮ ಓದು ಮುಗಿದು, ಯೋಗ್ಯ ಕೆಲಸ ಸಿಕ್ಕಾಗ ನಿಮಗೆ ಮದುವೆಯ ಆಸೆ ಬರಬಹುದು. ಆ ಬಗ್ಗೆ ಚಿಂತಿಸಿ ಯೋಗ್ಯ ವರ ಅಥವಾ ಕನ್ಯೆ ಬಗ್ಗೆ ಚಿಂತಿಸಬೇಕಾದವರು ನೀವು, ನಿಮ್ಮ ತಂದೆ-ತಾಯಿ, ನಿಮ್ಮ ಕುಟುಂಬದವರು ಆದರೆ ಈ ಪ್ರಶ್ನೆ ಬಾಯಿ ಚಪಲಕ್ಕೆ ಕೇಳುವ ನೂರಾರು ಜನರು ನಿಮ್ಮ ಜೀವನದ ಕಾಲದಲ್ಲಿ ಸಿಗುತ್ತಾರೆ. ಅವರ ಪ್ರಶ್ನೆ ಯಾವಾಗ ಮದುವೆ? ಇನ್ನೂ ಏಕೆ ಮಕ್ಕಳಾಗಲಿಲ್ಲ?

ಕೆಲವರಿಗೆ ಅವರ ಕಛೇರಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಾಗ ಅಥವಾ ದೊಡ್ಡ ಮನೆಯಲ್ಲಿ ವಾಸ ಮಾಡಿದಾಗ ಸಂತಸ ಪಡಬಹುದು. ಸರಳ ಶಾಂತಿಯ ಬಾಳ್ವೆ ಇನ್ನು ಹಲವರಿಗೆ ಖುಷಿ ತರಬಹುದು. ಕರೋನಾ ಅವಧಿಯಲ್ಲಿ ಹೊಸ ಹವ್ಯಾಸ, ಕೌಶಲ್ಯ ಪಡೆಯಲು ಅನೇಕರು ನಿರ್ಧರಿಸಿದರು. ಅಥವಾ ಪ್ರತಿನಿತ್ಯ ವ್ಯಾಯಾಮದಿಂದ ಆರೋಗ್ಯ ಸುಧಾರಣೆಯತ್ತ ಹೊರಟಿರಾ? ನಿಮ್ಮ ದೇಹವನ್ನು ಸ್ವ ಪ್ರೇರಣೆಯಿಂದ ಪ್ರೀತಿಯಿಂದ ಗಮನಿಸಿ ಕಾಳಜಿ ಕೊಡಿ ಇದು ಮತ್ತು ದೊಡ್ಡ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಇದು ಸುಧಾರಣೆಯತ್ತ ಮೊದಲ ಹೆಜ್ಜೆ. ಆದರೆ ಇದನ್ನು ನಿರ್ಧರಿಸಲಾಗದೇ ಎಷ್ಟೋ ಜನ ಆ ಒತ್ತಡದಲ್ಲಿ ಆತ್ಮಹತ್ಯೆ ಮಾಡಿಕೊಂಡರು.

ನಿಮ್ಮ ದೇಹವನ್ನು ಸ್ವಪ್ರೇಮದಿಂದ, ಪ್ರೀತಿಯಿಂದ ಗಮನಿಸಿ ಕಾಳಜಿ ಕೊಡಿ. ಇದು ಮತ್ತೂ ದೊಡ್ಡ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಶಾರೀರಿಕ, ಮಾನಸಿಕ ಭಾವನಾತ್ಮಕ ಚೆನ್ನಾಗಿರುವಿಕೆಯತ್ತ ಗಮನಿಸಿ. ದೇಹದ ಆರೋಗ್ಯ ಆಕಾರ ಚೆನ್ನಾಗಿದ್ದಾಗ, ನೀವದನ್ನು ಸೂಕ್ತವಾಗಿ ಗೌರವಿಸಿದಾಗ ಮುಖ್ಯ ವಿಷಯಗಳತ್ತ ಹೆಚ್ಚಿನ ಶಕ್ತಿ ಕೇಂದ್ರೀಕರಿಸಿ ಅರ್ಪಿಸಲು ಸಾಧ್ಯ. ಕಾಫಿ , ಮದ್ಯ ಹೆಚ್ಚು ಕುಡಿದಾಗ ನಿಮ್ಮ ಅಂಗಾಂಗಳಿಗೆ ಹಾನಿ ಉಂಟಾಗುತ್ತೆ. ಒಂದು ರಾತ್ರಿಯ ಒಳ್ಳೆಯ ನಿದ್ರೆ ಮಾರನೇ ದಿನ ಹೆಚ್ಚು ಚೆನ್ನಾಗಿ ವೇಗವಾಗಿ ಕೆಲಸ ಮಾಡಲು ಸಾಧ್ಯ.ನಿಮ್ಮ ಕನಸಿನ ಗುರಿಗಳ ಪಟ್ಟಿ ಮಾಡಿ. ನೀವು ಗುರಿ ಇಟ್ಟಾಗಲೇ ನೀವು ಅದನ್ನು ಸಾಧಿಸಲು ಶ್ರಮಿಸುವಿರಿ. ಆದರೆ ಈ ಮಧ್ಯೆ ಅಷ್ಟೇನೂ ಮುಖ್ಯವಲ್ಲದ ವಿಷಯಗಳತ್ತ ಗಮನ ಹೋದರೆ —? ಯಾವುದು ಮುಖ್ಯ ಒಂದು ಪ್ರಾಶಸ್ತ್ಯದ ಪಟ್ಟಿ ಮಾಡಿ. ನಿಮ್ಮ ಜೀವನದಲ್ಲಿ ಉತ್ಸವ ಆಚರಿಸಿ, ಶಾರೀರಿಕ, ಮಾನಸಿಕ, ಭಾವನಾತ್ಮಕ, ಹೀಗೆ ಒಟ್ಟು ಚೆನ್ನಾಗಿರುವಿಕೆ ಗಮನಿಸಿದಾಗ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳನ್ನು ಗಮನಿಸಿ.

ತ್ಚಿಕಿ ಡೇವಿಸ್ ಕೇಳುವಂತೆ: ನಿಮ್ಮ ಜೀವನ ಪೂರ್ತಿ ಜೀವಿಸುವುದನ್ನು ಕಲಿಯಬೇಕೆ? ಈ ಭೂಮಿಯ ಮೇಲೆ ನಿಮ್ಮ ಬಾಳು ಸಂಪೂರ್ಣ ಬದುಕಲು ಕೆಲವು ವಿಜ್ಞಾನ ಆಧರಿಸಿದ ಮಾರ್ಗಗಳಿವೆ. ನಿಮ್ಮ ಬಾಳು ಇಷ್ಟೇನೇ ಎಂದು ಕೇಳಿಕೊಳ್ಳುತ್ತಿದ್ದೀರಾ?

ನಿಮ್ಮ ಚೆನ್ನಾಗಿರುವಿಕೆಯ ಬಲವಾದ ಹಾಗೂ ದುರ್ಬಲ ವಿಷಯಗಳೇನು ಈಗ ತಿಳಿಯೋಣ.;- ದಶಲಕ್ಷ ಜನರಿಗೆ ಪೂರ್ಣ ಜೀವನ ಪರಿಪೂರ್ಣ ಬಾಳುವುದೆಂದರೇನೆಂದು ಪ್ರಶ್ನೆ ಕೇಳಿದರೆ, ದಶಲಕ್ಷ ಉತ್ತರ ಬರಬಹುದು. ಕೆಲವರಿಗೆ ಪ್ರವಾಸ, ಕೆಲವರಿಗೆ ಕುಟುಂಬದ ಉತ್ತಮ ನಿರ್ವಹಣೆ, ಕೆಲವರಿಗೆ ಕೆಲವು ಮುಖ್ಯ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಹುಡುಕುವದಾಗಿರಬಹದು. ಜೀವನದ ಅರ್ಥ ಉದ್ದೇಶ, ಹೇಗೆ ಕಾಲ ಕಳೆಯುತ್ತೀದ್ದೀರಿ ಎಂಬುದೇ ಅತ್ಯಾಕರ್ಷಕ ರೋಮಾಂಚಕಾರಿ ವಿಷಯ.

ನಮ್ಮ ಜೀವನ ಪೂರ್ಣ ನಡೆಸಲು ಅತೃಪ್ತಿ-ಅರ್ಥ-ಗುರಿ ಇಲ್ಲದಿದ್ದರೆ ಏನಾಗುತ್ತೆ? ನಮ್ಮ ಕೆಲಸದಲ್ಲಿ ತೃಪ್ತಿ ಇಲ್ಲದಿರಬಹುದು. ಬಹುಶಃ ನಮಗೆ ಭಾವೋದ್ರಿಕ್ತವಾಗುವಂತಹ ಹವ್ಯಾಸಗಳು, ಚಟುವಟಿಕೆಗಳು ನಮಗೆ ಸಿಕ್ಕಿಲ್ಲ. ನಾವಿರುವ ಪಟ್ಟಣ ಬೇಸರ ತರಿಸಬಹುದು. ಅನೇಕ ದಿನ ಸಮಯ ಕಳೆಯಲು ಟಿವಿ ನೋಡುತ್ತಿರಬಹುದು. ಆಗ ನಿಮ್ಮ ಜೀವನ ನೀರಸ ಎಂದೆನಿಸುತ್ತಿದೆಯೇ? ಸ್ಪೂರ್ತಿರಹಿತವಾದ ಜೀವನ ಅತೃಪ್ತಿತಂದಿದೆಯೇ? ಪೂರ್ಣ ಜೀವನ ಬದುಕುತ್ತಿದ್ದರೆ ನಿಮ್ಮನ್ನು ಹೀಗೆ ವರ್ಣಿಸಬಹುದೇನೋ! ಪ್ರವರ್ಧಮಾನ; ಆರ್ಥಿಕ ಪ್ರಗತಿ ಇದೆ; ಕನಸು ನನಸಾಗಿದೆ; ಸಾರ್ಥಕ ಜೀವನ; ಸಂತಸ; ತೃಪ್ತಿಯಾಗಿದೆ, ಖುಷಿಯಾಗಿದೆ. ಮೋಜಾಗಿದೆ, ಆಸ್ಪಾದಿಸುತ್ತಿದ್ದೇನೆ’. ಸವಿಯುತ್ತಿದ್ದೇನೆ, ರುಚಿ ಅನುಭವಿಸುತ್ತಿದ್ದೇನೆ; ಆನಂದದಾಯಕ; ಅರಳುತ್ತಿದ್ದೇನೆ.ಜೀವನದ ಅರ್ಥ ತೃಪ್ತಿ. ಸಮಾಧಾನ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಪ್ರೀತಿ, ಸಂತಸ ಕಡಿಮೆ ಹೆದರಿಕೆ ಕೋಪ, ನಾಚಿಕೆ ಹಾಗೂ ದುಃಖ ಇವುಗಳಿಗೂ ಜೀವನದ ಅರ್ಥಕ್ಕೆ ಸಂಬಂಧವಿದೆ.

ನಿಮಗೆ ಸಂತಸ ತರುವ ವಿಷಯಗಳಿಂದ ಜೀವನ ತುಂಬಿಕೊಳ್ಳಿ, ಇತ್ಯಾತ್ಮಕ ಭಾವನೆಗಳಿರಲಿ. ನಿಮಗೆ ಸಂತಸ, ತರುವ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಪೂರ್ಣ ಜೀವನ ಬಾಳುವ ಬಗ್ಗೆ ಪ್ರಬಂಧ ಬರೆಯಿರಿ. ಹೇಗೆ ಕಾಲಕಳೆಯುತ್ತೀರಿ.? ಪ್ರೀತಿ ಅಂದರೇನು? ಇದು ಪ್ರಣಯದ ಪ್ರೀತಿಯೇ, ಕೌಟುಂಬಿಕ ಪ್ರೀತಿಯೇ, ಸ್ನೇಹದ ಪ್ರೀತಿಯೇ?

ಇನ್ನೂ ಹೆಚ್ಚು ಪ್ರೀತಿ ಹೇಗೆ ಜೀವನದಲ್ಲಿ ತರಬಲ್ಲಿರಿ?

ಕರುಣೆಯನ್ನು ರೂಢಿಸಿಕೊಂಡು ಇತರರು ಪೂರ್ಣ ಜೀವನ ಬದುಕಲು ನೆರವಾಗಿರಿ. ಕೃತಜ್ಞತೆಯಿಂದ ಜೀವನ ತುಂಬಿಕೊಳ್ಳಿ. ಹೊಸ ತಂತ್ರಗಳನ್ನು ನೀವೇ ಅನ್ವೇಷಿಸಿಕೊಳ್ಳಿ. ಹೊಸ ವಿಷಯಗಳತ್ತ ಪ್ರಯತ್ನಿಸಿ. ಫೋನಿನಲ್ಲಿ ಕಡಿಮೆ ಸಮಯ ಕಳೆಯಿರಿ. ನಿಮ್ಮ ಒತ್ತಡಗಳನ್ನು ನೀವೇ ಕಡಿಮೆ ಮಾಡಿಕೊಳ್ಳಿ. ಮುಂದೆ ಪಶ್ಚಾತ್ತಾಪ ಪಡದಿರುವಂತೆ ಈಗ ನಡೆಯಿರಿ. ಪ್ರತಿನಿತ್ಯ ದೃಢೀಕರಣಗೊಳಿಸಿಕೊಳಿ. ಪ್ರೇಮ-ಕರುಣೆಗಳ ಧ್ಯಾನ ಮಾಡಿ. ಮನದುಂಬಿ ವ್ಯಾಯಾಮ ಮಾಡಿ. ನೂತನ ಗೆಳೆಯರನ್ನು ಸಂಪಾದಿಸಿ. ಗುರಿಗಳನ್ನಿಟ್ಟುಕೊಳ್ಳಿ. ಕೆಟ್ಟ ಆಲೋಚನೆ ಬಿಡಿ. ಅವಕಾಶಗಳ ಲಾಭ ಪಡೆಯಿರಿ. ನಿಮ್ಮ ಬಲ ಬಳಸಿರಿ. ಪ್ರತಿ ಘಳಿಗೆ ಆಸ್ವಾದಿಸಿರಿ. ಶಕ್ತಿ ಹೀರುವ ರಕ್ತಪಿಶಾಚಿಗಳಿಂದ ದೂರವಿರಿ. ಸಂತಸವನ್ನು ಕಣ್ಣಿಗೆ ಕಾಣಿಸುವಂತೆ ಮಾಡಿ. ನಿಮಗೆ ಹೆಮ್ಮೆ ತರುವ ಕೆಲಸ ಮಾಡಿ. ನಿಮಗೇನು ಬೇಕೆಂದು ಸ್ವಷ್ಟತೆ ಹೊಂದಿ. ನಿಮ್ಮ ಕನಸುಗಳನ್ನು ನನಸು ಮಾಡಲು ಪ್ರಯತ್ನಿಸಿ. 10 ವರ್ಷಗಳ ಮುಂಚಿತ ಯೋಜನೆ ಮಾಡಿ. ಸ್ವಯಂ ವಾಸ್ತವೀಕರಣ ಹೊಂದಿ. ನಿಮ್ಮ ಗುರಿಗಳ ಬಗ್ಗೆ ಕ್ರಿಯಾಶೀಲರಾಗಿರಿ. ಸತ್ಯಕ್ಕಾಗಿ ಉದ್ದೇಶಕ್ಕಾಗಿ ಬಾಳಿರಿ. ಕ್ಷಮಿಸಿ, ಆಕಾಂಕ್ಷೆ ಗುರುತಿಸಿ. ಕೃತಜ್ಞತೆ ಸಲ್ಲಿಸಿ. ಜೀವನ ಕೌಶಲ್ಯ ಬೆಳೆಸಿರಿ. ನೀವೇ ಅರಳಲು ನಿಮಗೆ ನೆರವಾಗಿ. ಹೆದರಿಕೆ ಎದುರಿಸಿ. ವಿಶಾಲ ಮನೋಭಾವ ಹೊಂದಿ. ನಿಮ್ಮ ಸಾಮಾಜಿಕ ಸಂಬಂಧ ಸುಧಾರಿಸಿಕೊಳ್ಳಿ. ಜೀವನವನ್ನು ಸಂತೋಷದಿಂದ ಅನುಭವಿಸಿ.

ಎನ್.ವ್ಹಿ.ರಮೇಶ್ , ಮೈಸೂರು

3 Comments on “ನಿಮ್ಮ ನಿರ್ಧಾರ ನಿಮ್ಮ ಕೈಯಲ್ಲಿ

  1. ಸರಳ ಸುಂದರ ಸಂದೇಶ ಹೊತ್ತ ಲೇಖನ ..ಚೆನ್ನಾಗಿ ದೆ ಸಾರ್..

  2. ಬಹಳ ಸುಂದರವಾದ, ಜೀವನ ಪ್ರೀತಿ ತುಂಬಿರುವ ಬರಹ. ಪ್ರೇರಣಾತ್ಮಕ ಸಾಲುಗಳು ತುಂಬಿವೆ ಲೇಖನದ ತುಂಬಾ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *