ಅವಳು ಎತ್ತರದವಳು,
ಸೊಗಸರಿ, ಚತುರಳು.
ಯಾವುದಕ್ಕೂ ಲಕ್ಷ್ಯ ಕೊಡದವಳು
ಒಂಟಿ ಲೋಕದಲ್ಲಿ ತರ್ಕಿಸುತ್ತಿದ್ದಳು.
ಕಾದಂಬರಿಯ ಪುಟಗಳೇ ಅವಳಿಗೆ ಪಾಠ,
ಗೇಲಿ, ಆಟ, ಎಲ್ಲವೂ ಅನಾಕರ್ಷಕ.
ಗುರುಗಳು ಗಮನಿಸಿ,
ಶಿಕ್ಷೆಗೆ ಬದಲು
ಪ್ರೋತ್ಸಾಹದ ದಾರಿಯಲ್ಲಿ ನಡೆಸಿ
“ಕಥೆ ಹೇಳು” ಎಂದರು.
ಕಣ್ಣುಗಳಲ್ಲಿ ಹೊಸ ಹೊಳಪು,
ಮಾತಿನಲ್ಲಿ ಲಹರಿ.
ಅವಳು ಕಾದಂಬರಿಗಾರ್ತಿ,
ಕಥಾವಿಶ್ಲೇಷಕಿ,
ವೇದಿಕೆ ಅವಳ ಪ್ರಪಂಚ.
ಮುಂದಿನ ಬೆಂಚ್‌ನಲ್ಲಿ ಕುಳಿತು
ನಾಯಕಿಯಾದಳು.
ಪರೀಕ್ಷೆಯಲ್ಲಿ ಉನ್ನತ ಶ್ರೇಣಿ,
ಚರ್ಚಾ ಸ್ಪರ್ಧೆಯಲ್ಲಿ ಪ್ರಶಸ್ತಿ.
ಆ ಯಶಸ್ಸು ಕೇವಲ ಅಂಕಗಳದಲ್ಲ,
ಅವಳ ಅಸ್ಮಿತೆಯ ಬೆಳಕು.
ಆಕೆ ಈಗ ಅದ್ವಿತೀಯ ಭಾಷಣಗಾರ್ತಿ.
ತನ್ನ ಪ್ರಶಸ್ತಿಗಳನ್ನು ಗುರುಪೂಜ್ಯೋತ್ಸವ ದಿನ
ಶಾಲೆಯ ಹೆಸರಿಗೆ ಅರ್ಪಿಸಿದಳು.
ಇದೇ ಗುರುಗಳ ಪರಿಣಾಮ. ಶಿಕ್ಷೆಯಿಂದಲ್ಲ,
ಪ್ರೋತ್ಸಾಹದಿಂದ ಅವಳು ಅರಳಿದಳು.

ತೆಲುಗು ಮೂಲ : ರಾಜೇಶ್ವರೀ ದಿವಾಕರ್ಲ
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಹೌದು ಮಕ್ಕಳ ಆಸಕ್ತಿ ಗುರುತಿಸಿ ಪ್ರೋತ್ಸಾಹ ಕೊಡುವುದು ಒಂದು ಗುರುತರ ಜವಾಬ್ದಾರಿ.. ಅನುವಾದ ಕವನ ಚೆನ್ನಾಗಿದೆ ಸಾರ್
ಧನ್ಯವಾದಗಳು ಮೇಡಮ್ !
Beautiful
Thank you madam
ಶಿಕ್ಷಕರ ದಿನಾಚರಣೆಗೆ ಪೂರಕವಾಗಿ ಮೂಡಿಬಂದ ಸುಂದರ, ಅರ್ಥಗರ್ಭಿತ ಅನುವಾದಿತ ಕವನ.
ಧನ್ಯವಾದಗಳು
ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರೆಯಲು ಪ್ರೋತ್ಸಾಹ ನೀಡುವಂತಹ ಗುರುಗಳು ವಿದ್ಯಾರ್ಥಿಗಳಿಗೆ ಲಭಿಸಿದರೆ ಉಂಟಾಗುವ ಸತ್ಪರಿಣಾಮದ ಅನಾವರಣಗಿದೆ. ಅನುವಾದವೂ ಸೊಗಸಾಗಿದೆ.