
ಸೋಲು ಗೆಲುವಿಗೂ ಮೀರಿದ್ದು ಜೀವನ
ಇರಬೇಕು ಚೌಕಟ್ಟಿನೊಳಗೆ ಅಭಿಮಾನ
ಬಿಟ್ಟುಕೊಡಬಾರದು ನಮ್ಮ ಸ್ವಾಭಿಮಾನ
ನಗುನಗುತ ಮುಂದೆ ಸಾಗುವುದೇ ಜೀವನ
ಸೋಲು ಗೆಲುವಿರದ ಆಟ ಇಲ್ಲವೇ ಇಲ್ಲ
ಗೆಲುವನ್ನು ಸಂಭ್ರಮಿಸುವುದು ತಪ್ಪಲ್ಲ
ಸೋಲನ್ನು ಅವಮಾನ ಎಂದುಕೊಳ್ಳಬೇಕಿಲ್ಲ
ಹೆಜ್ಜೆ ಹೆಜ್ಜೆಗೂ ಕಲಿಯಬೇಕು ಜೀವನದ ತುಂಬೆಲ್ಲ
ಎದೆಗುಂದಬಾರದು ಬರುವ ಸೋಲುಗಳಿಗಿಲ್ಲಿ
ಏರಿಳಿತ ಇರುವುದು ಸಹಜ ಸಾಗುವ ದಾರಿಯಲ್ಲಿ
ಕಠಿಣ ಪರಿಶ್ರಮ ಪಡಬೇಕು ನಾವು ಬಾಳಿನಲ್ಲಿ
ಇಂದಲ್ಲ ನಾಳೆ ಬದುಕಿನಲ್ಲಿ ಗೆಲ್ಲಬೇಕು ನಾವಿಲ್ಲಿ
ದುಡುಕಿ ನಿರ್ಧಾರವ ತೆಗೆದುಕೊಳ್ಳಬಾರದು ಇಲ್ಲಿ
ಮನದ ತುಂಬ ಮಂಥನವ ಮಾಡುತ್ತಿರಬೇಕಿಲ್ಲಿ
ಸಮಯ ಸಂದರ್ಭಕ್ಕೆ ಹೊಂದಿಕೊಳ್ಳಬೇಕಿಲ್ಲಿ
ಭಾವುಕರಾಗಿ ಮೂರ್ಖರಾಗಬಾರದು ನಾವಿಲ್ಲಿ
ಯಾರನ್ನೋ ಮೆಚ್ಚಿಸುವ ಹುಚ್ಚು ಬೇಕಿಲ್ಲ
ಬದುಕುವ ದಾರಿಯ ಹುಡುಕಿಕೊಳ್ಳಬೇಕಿಲ್ಲಿ
ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕು ನಾವಿಲ್ಲಿ
ನಿತ್ಯವೂ ಸಣ್ಣ ಸಣ್ಣ ಪ್ರಯತ್ನವಿರಲಿ ಜಾರಿಯಲ್ಲಿ
ಅನುಭವಿಸಿ ಬಿಡಿ ಸಿಕ್ಕ ಗೆಲುವಿನ ಖುಷಿಯನ್ನು
ಮರೆತು ಮುಂದೆ ಸಾಗಿ ಸೋಲಿನ ಕಹಿಯನ್ನು
ತಲೆಮೇಲೆ ಹೊತ್ತು ಮೆರೆಸಬಾರದು ಯಾವುದನ್ನು
ಸಮನಾಗಿ ಸ್ವೀಕರಿಸಬೇಕು ಕಷ್ಟ ಸುಖವನ್ನು
ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
ಬದುಕಿನ ಪಾಠವನ್ನು ಕವನದ ಮೂಲಕ ಮೂಡಿಸಿರುವ ಪರಿ ಚೆನ್ನಾಗಿದೆ ಸಾರ್
ಬಹಳ ಸುಂದರವಾಗಿದೆ ಕವನ. ನಾವು ಹೀಗೆ ಬಾಳಬೇಕು ಅನ್ನುವುದನ್ನು ಹೇಳುತ್ತದೆ ಪ್ರತಿಯೊಂದು ಸಾಲು.
ಉತ್ತಮ ಸಂದೇಶವನ್ನು ಹೊತ್ತ ಚಂದದ ಕವನ.
ಸೋಲು ಗೆಲುವಿಗೂ ಮೀರಿದ್ದು ಜೀವನ ಎಂಬ ತತ್ವವನ್ನು ಚಿತ್ರಿಸಿದೆ ಈ ಸುಂದರವಾದ ಕವನ
ಅಭಿನಂದನೆಗಳು ಸರ್
ಜೀವನ ಪಾಠವನ್ನು ಬಹು ಅರ್ಥವತ್ತಾಗಿ, ಸಂಕ್ಷಿಪ್ತವಾಗಿ ವಿವರಿಸುವ ಸೊಗಸಾದ ಕವನ