
ನಮ್ಮ ಕಣ್ಣೆದಿರು ಯಾರೇ ಅತ್ತರು
ಮನಸ್ಸಿಗೆ ಬೇಸರವು ಆಗುವುದು
ಮನದ ತುಂಬ ಸಂಕಟ ಯಾತನೆ
ದುಃಖವು ಉಮ್ಮಳಿಸಿ ಬರುವುದು
ಖುಷಿಯ ವಾತಾವರಣ ಇದ್ದಾಗ
ಸುತ್ತಲೂ ಸಂಭ್ರಮವು ಹೆಚ್ಚುವುದು
ನೋವು ತುಂಬಿಕೊಂಡಿರುವಾಗ
ವಿಷಾದ ಛಾಯೆಯು ಆವರಿಸಿಕೊಳ್ಳುವುದು
ಹೆರಿಗೆ ಕೋಣೆಯಿಂದ ನನ್ನ ಮುದ್ದು ಕಂದನ
ಮೊದಲ ಅಳುವಿನ ಶಬ್ದವನ್ನು ಕೇಳಿದಾಗ
ಹೊರಗಿದ್ದ ನನ್ನೊಳಗೆ ಹರುಷವು ಚಿಮ್ಮಿತ್ತು
ಅಮ್ಮನ ನೋವು ಮಂಜಂತೆ ಕರಗಿ ಹೋಗಿತ್ತು
ಜಗದೊಳಗೆ ಖುಷಿಕೊಡುವ ಆಳುವು
ಮಕ್ಕಳ ಮೊದಲ ಅಳುವೊಂದೇ
ನಂತರ ಬಯಸುವುದು ನಾವು ನಿತ್ಯವೂ
ಮಕ್ಕಳ ಮುಖದಲ್ಲಿ ಕಿಲ ಕಿಲ ನಗುವೊಂದೇ
ಮಕ್ಕಳ ನಗುವೇ ಮನೆಯ ಬೆಳಗುವ
ಮನವನ್ನು ಅರಳಿಸುವ ನಂದಾದೀಪ
ಅವರ ಮುದ್ದು ತುಂಟಾಟಗಳೆ ಬಾಲ್ಯವ
ನೆನಪಿಸಿ ಒತ್ತಡ ನೀಗುವ ದೈವಸ್ವರೂಪ
ಪುಟಾಣಿ ಮಕ್ಕಳು ನಕ್ಕು ನಲಿಯುತ್ತಿರಲು
ಹೂದೋಟದಿ ಹೂವರಳಿ ಘಮಘಮಿಸಿದಂತೆ
ಮಕ್ಕಳನ್ನು ಎತ್ತಿ ಮುದ್ದಾಡಲು ಮನದ ತುಂಬ
ತುಂಬಿಕೊಳ್ಳುವುದು ನೆಮ್ಮದಿಯ ಭಾವವೊಂದೇ
ನಾಗರಾಜ ಜಿ. ಎನ್ ಬಾಡ
ಕುಮಟ, ಉತ್ತರ ಕನ್ನಡ.
PC: Internet
ಅಭಿನಂದನೆಗಳು ಕವಿಗಳೇ…….
ಮಗುವಿನ ಜೊತೆಗೆ “ಅಪ್ಪ”ನೂ ಜನಿಸುತ್ತಾನೆ !
ಕೊನೆಯ ಸಾಲು ನಿಮ್ಮದೂ ಹೌದು; ಓದಿದ ನಮ್ಮದೂ ಹೌದು.
ತಮ್ಮ ಒಂದೊಂದು ನುಡಿಯು ಖುಷಿ ನೀಡುತ್ತದೆ ಧನ್ಯವಾದಗಳು
ಸರಳ ಸುಂದರ ಕವನ ಪ್ತತಿಯೊಬ್ಬರ ಜೀವನದಲ್ಲೂ ನೆಡುಯುವ ಅನಭವಿಸುವ…ಅಪೇಕ್ಷಿಸುವ..ಸಮಯ ಸಾರ್
ಸರಳ ಸುಂದರ ಕವನಪ್ರತಿ ಯೊಬ್ಬರ ಜೀವನದಲ್ಲೂ ನೆಡೆಯುವ ಅನಭವಿಸುವ…ಅಪೇಕ್ಷಿಸುವ..ಸಮಯ ಸಾರ್
ಕಂದನ ಆಗಮನದ ಸುಂದರ ಕ್ಷಣಗಳು ಕವನದ ಪ್ರತಿ ಸಾಲಿನಲ್ಲೂ ವಿಜೃಂಭಿಸಿ ನಗುತಿವೆ…
ಸುಂದರ ಕವನ
ಮಗುವಿನ ಮದಲ ಅಳು ಹಾಗೂ ಅದರ ಕಿಲಕಿಲ ನಗುವನ್ನು ಕುರಿತಾದ ಸುಂದರ ಕವನ.