ಬೆಳಕು-ಬಳ್ಳಿ

ಪರೀಕ್ಷೆ

Share Button

ಕಲಿತದ್ದನ್ನು ಬರೆಯುವುದೇ
ಪರೀಕ್ಷೆ ಎಂದುಕೊಳ್ಳಬೇಡ,
ಬದುಕು ಕಲಿಸಿದ
ಪಾಠಗಳೂ ಪರೀಕ್ಷೆಗಿಡುತ್ತವೆ.

ಅಲ್ಲಿ ತರಗತಿಗಳಿಲ್ಲ,
ಬೋಧಕರಿಲ್ಲ;
ಹಲಗೆ, ಪೆನ್ನು, ಪುಸ್ತಕ –
ಎಲ್ಲವೂ ನೀನೇ.
ಆದರೂ ಪರೀಕ್ಷೆ ಇದ್ದೇ ಇರುತ್ತದೆ.
ಗೆದ್ದರೆ
ಜಗ ಚಪ್ಪಾಳೆ ತಟ್ಟುತ್ತದೆ,
ಸೋತರೆ
ಮತ್ತೊಂದು ಪಾಠ ಕಲಿಯುವೆ.
ಬದುಕೇ ಒಂದು “ಪರೀಕ್ಷೆ”,
ಮುಂದುವರೆಯುವುದೇ ಅತಿ ಮುಖ್ಯ!

ತೆಲುಗು ಮೂಲ : ಡಾ।। ಕಟುಕೋಝ್ವಲ ರಮೇಶ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್

9 Comments on “ಪರೀಕ್ಷೆ

  1. ಜೀವನ ಪಾಠದಲ್ಲಿ ನಡೆಯುವ ಪರೀಕ್ಷೆ ಎಂದಿಗೂ ಸುಲಭವಲ್ಲ!
    ವಿಶ್ಲೇಷಣಾತ್ಮಕ ಅನುವಾದಿತ ಕವನ ಚೆನ್ನಾಗಿದೆ.

  2. ಚಿಕ್ಕದಾಗಿ, ಚೊಕ್ಕವಾಗಿ ಬದುಕಿನ ಪರೀಕ್ಷೆಗೆ ಅಣಿಯಾಗುವಂತೆ ಪ್ರೇರೇಪಿಸುತ್ತದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *