
ಕಲಿತದ್ದನ್ನು ಬರೆಯುವುದೇ
ಪರೀಕ್ಷೆ ಎಂದುಕೊಳ್ಳಬೇಡ,
ಬದುಕು ಕಲಿಸಿದ
ಪಾಠಗಳೂ ಪರೀಕ್ಷೆಗಿಡುತ್ತವೆ.
ಅಲ್ಲಿ ತರಗತಿಗಳಿಲ್ಲ,
ಬೋಧಕರಿಲ್ಲ;
ಹಲಗೆ, ಪೆನ್ನು, ಪುಸ್ತಕ –
ಎಲ್ಲವೂ ನೀನೇ.
ಆದರೂ ಪರೀಕ್ಷೆ ಇದ್ದೇ ಇರುತ್ತದೆ.
ಗೆದ್ದರೆ
ಜಗ ಚಪ್ಪಾಳೆ ತಟ್ಟುತ್ತದೆ,
ಸೋತರೆ
ಮತ್ತೊಂದು ಪಾಠ ಕಲಿಯುವೆ.
ಬದುಕೇ ಒಂದು “ಪರೀಕ್ಷೆ”,
ಮುಂದುವರೆಯುವುದೇ ಅತಿ ಮುಖ್ಯ!
ತೆಲುಗು ಮೂಲ : ಡಾ।। ಕಟುಕೋಝ್ವಲ ರಮೇಶ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಅನುವಾದ ಕವನ ಓ.ಕೆ..
ಧನ್ಯವಾದಗಳು
Nice
ಧನ್ಯವಾದಗಳು
ಜೀವನ ಪಾಠದಲ್ಲಿ ನಡೆಯುವ ಪರೀಕ್ಷೆ ಎಂದಿಗೂ ಸುಲಭವಲ್ಲ!
ವಿಶ್ಲೇಷಣಾತ್ಮಕ ಅನುವಾದಿತ ಕವನ ಚೆನ್ನಾಗಿದೆ.
ಧನ್ಯವಾದಗಳು
ಬದುಕೇ ಒಂದು ಪರೀಕ್ಷೆ
Nice poem
ಧನ್ಯವಾದಗಳು
ಚಿಕ್ಕದಾಗಿ, ಚೊಕ್ಕವಾಗಿ ಬದುಕಿನ ಪರೀಕ್ಷೆಗೆ ಅಣಿಯಾಗುವಂತೆ ಪ್ರೇರೇಪಿಸುತ್ತದೆ.