ಬೆಳಕು-ಬಳ್ಳಿ

ಮುಕ್ತಕಗಳು

Share Button


ಹಸಿರಿರಲಿ ಜಗದಲ್ಲಿ ಸಂತಸವ ಚೆಲ್ಲುತಲಿ
ಉಸಿರನ್ನು ನೀಡುವುದು ಹಸಿರೆಂಬ ವರವು
ಕಸಿದಿಹೆವು ಹಸಿರುಸಿರ ಮಾಲಿನ್ಯ ಮಾಡುತ್ತ
ಹಸಿರಿರಲಿ ಜಗಕೆಂದ – ಗೌರಿತನಯ//೧//

ಬೇಯುತಿದೆ ಬುವಿಯೊಡಲು ಅಗ್ನಿಶಿಖೆ ಉರಿದಂತೆ
ನೋಯುತಿದೆ ತಾಯಮನ ಕೆಂಡವನು ಉಂಡು
ಸಾಯುತಿವೆ ಜೀವಚರ ತಾಪಕ್ಕೆ ಕೋಪಕ್ಕೆ
ಬೇಯುತಿರೆ ಸುಖವಿಲ್ಲ – ಗೌರಿತನಯ//೨//

ಸಾಹಿತ್ಯ ಸುಜ್ಞಾನ ವೃದ್ಧಿಪುದು ಬಾಳುವೆಯ
ಮಾಹಿತಿಯ ನೀಡುವುದು ಸಂತಸವ ತುಂಬಿ
ಸಾಹಿತ್ಯ ಮೊಳಕೆಯನು ಬಿತ್ತಿದರೆ ಜನರಲ್ಲಿ
ಸಾಹಿತಿಯು ಬೆಳೆಯುವನು – ಗೌರಿತನಯ//೩//

ಮಲ್ಲಿಗೆಯ ಕಂಪಂತೆ ಹೊರಸೂಸು ಪರಿಮಳವ
ಎಲ್ಲೆಯನು ಮೀರುತ್ತ ಒಳಿತೆಲ್ಲ ಹರಡಿ
ಪಲ್ಲವಿಸು ಸೊಂಪಾಗಿ ಚಿಗುರನ್ನು ಮೊಳೆಯಿಸುತ
ಸಲ್ಲುವುದು ಗೌರವವು – ಗೌರಿತನಯ//೪//

ಮನವೆಂಬ ಮರ್ಕಟಕೆ ಕಡಿವಾಣ ಹಾಕದಿರೆ
ಘನವಾದ ಈತನುವು ಹೊಂದುವುದು ನಾಶ
ಕನಸುಗಳು ಹತವಾಗಿ ಉಳಿಯುವುದು ಬರಿಬೂದಿ
ಮನಕಿರಲಿ ಕಡಿವಾಣ – ಗೌರಿತನಯ//೫//

ಶುಭಲಕ್ಷ್ಮಿ ಆರ್ ನಾಯಕ್

5 Comments on “ಮುಕ್ತಕಗಳು

  1. ದೈನಂದಿನ ಜೀವನದ ಆಗುಹೋಗುಗಳ ಹಿನ್ನೆಲೆಯಲ್ಲಿ ಒಡಮೂಡಿದ ಮುಕ್ತಕಗಳು ಮುತ್ತಿನಂತಿವೆ ಮೇಡಂ…ಧನ್ಯವಾದಗಳು.

  2. ಪರಿಸರ ಕಾಳಹಿಯ ಸಾರುವ ಮುಕ್ತಕ ಬಹಳ ಸೂಕ್ತವಾಗಿದೆ. ಇತರ ಮುಕ್ತಕಗಳು ದಾರಿ ದೀಪವಾಗಿವೆ

Leave a Reply to Anonymous Cancel reply

 Click this button or press Ctrl+G to toggle between Kannada and English

Your email address will not be published. Required fields are marked *