
ದೇವರೇ ಎತ್ತ ಸಾಗುತ್ತಿದೆ ನಮ್ಮ ಸಮಾಜ
ಅರಿಯದಾಗಿದೆ ಇಂದಿನ ವಿದ್ಯಮಾನ
ಯಾರಿಗೂ ಇಲ್ಲ ಒಂದುಚೂರು ತಾಳ್ಮೆಯು
ಇಲ್ಲ ಯಾರಲ್ಲೂ ಕೇಳಿಸಿಕೊಳ್ಳುವ ವ್ಯವಧಾನ
ಹೆಜ್ಜೆ ಹೆಜ್ಜೆಗೂ ಬೇಕು ನಮ್ಮೊಳಗೆ ಸಮಾಧಾನ
ಬೇಕಿಲ್ಲ ಯಾವುದೇ ಬಿಂಕ ಬಿಗುಮಾನ
ಮಾಡಿಕೊಳ್ಳಬಾರದು ಸುಮ್ಮನೆ ಅವಮಾನ
ಅರಿತು ಹೊಂದಿಕೊಳ್ಳುವುದೇ ಜೀವನ
ಮಾತು ಮಾತಿಗೂ ಕೋಪ ತಾಪ
ತೋರಿಸುವರು ಉಗ್ರ ರೌದ್ರಾವತಾರ
ನಡೆಸುವರು ದೈಹಿಕ ಹಲ್ಲೆ ಭಯಾನಕ ಕೊಲೆ
ಕೊನೆಯಿಲ್ಲದಾಗಿದೆ ಅತ್ಯಂತ ಹೇಯ ಕೃತ್ಯಗಳಿಗೆ
ಎಲ್ಲರಿಗೂ ಮೊಬೈಲ್ ಟಿವಿಯ ಗೀಳು
ತುಂಬಿದೆ ಮನೆಯೊಳಗೆ ಗೌಜಿ ಗಲಾಟೆ
ಆಲಿಸದಾಗಿದೆ ಯಾರದೇ ಮನದ ಗೋಳು
ಎಲ್ಲೆಡೆ ಹುಚ್ಚು ರೀಲ್ಸ್ ಸದ್ದಿನ ಭರಾಟೆ
ಸಾಮಾಜಿಕ ಮಾಧ್ಯಮಕ್ಕೆ ಬೇಕಿದೆ ಗುದ್ದು
ಸಮಾಜದ ಸ್ವಾಸ್ಥ್ಯಕ್ಕೆ ನೀಡಬೇಕಿದೆ ಮದ್ದು
ಬೇಕು ನಮ್ಮ ಮೇಲೆಯೇ ನಮಗೆ ಹಿಡಿತ
ಸಿಟ್ಟು ಸೆಡವುಗಳ ಮಾಡಿಕೊಳ್ಳಬೇಕು ಕಡಿತ
ನಿತ್ಯದ ಬದುಕಲ್ಲಿ ಬೇಕು ಸ್ವಯಂ ಸಂಯಮ
ಪಾಲಿಸಬೇಕು ಸಾಮಾಜಿಕ ಬದ್ಧತೆಯ ನಿಯಮ
ಆಗಬಾರದು ಬದುಕು ಯಾರಿಗೂ ದುರ್ಗಮ
ಅಡೆತಡಿಗಳ ದಾಟಿ ಬದುಕು ಸಾಗಬೇಕು ಸುಗಮ
–ನಾಗರಾಜ ಜಿ. ಎನ್. ಬಾಡ
ಕುಮಟ, ಉತ್ತರ ಕನ್ನಡ.
ಚೆನ್ನಾದ ಕವನ
ಧನ್ಯವಾದಗಳು
Nice
ಧನ್ಯವಾದಗಳು
ಒಳ್ಳೆಯ ಸಂದೇಶವನ್ನು ಹೊಂದಿರುವ ಸುಂದರ ಕವಿತೆ.
ಧನ್ಯವಾದಗಳು
ಅರ್ಥಪೂರ್ಣವಾದ ಕವನ
ಸ್ವಯಂ ಸಂಯಮದ ಅಗತ್ಯತೆಯನ್ನು ಒತ್ತಿ ಹೇಳುವ ಸುಂದರ ಕವನ