ಪೌರಾಣಿಕ ಕತೆ - ಬೆಳಕು-ಬಳ್ಳಿ

ಕಾವ್ಯ ಭಾಗವತ 44: ಸ್ವರ್ಗ – ನರಕ

Share Button

44.ಪಂಚಮ ಸ್ಕಂದ – ಅಧ್ಯಾಯ-4
ಸ್ವರ್ಗ – ನರಕ

ಸತ್ವ ರಜಸ್ತಮೋಗುಣ
ತಾರತಮ್ಯದಿಂ ಉದ್ಭವಿಪ
ಸಾತ್ವಿಕ, ರಾಜಸ, ತಾಮಸರ
ಗುಣಸ್ವಭಾವದಿಂ ಮಾಡ್ಪ
ಕರ್ಮಾನುಸಾರದಿಂ
ಸುಖ ದುಃಖ ಅನುಭವಗಳ
ಕರ್ಮಗಳ ಫಲಶೃತಿಯೇ
ಸ್ವರ್ಗ ನರಕಗಳ ಸೃಷ್ಠಿಗೆ ಮೂಲ

ನಮ್ಮೆಲ್ಲ ಕರ್ಮಗಳಿಗೆ
ಸುಕರ್ಮ, ಕುಕರ್ಮಗಳಿಗೆ
ಸ್ವರ್ಗ ನರಕವ
ಸೃಷ್ಟಿಸಿ ಜನ್ಮ ಜನ್ಮಾಂತರಗಳ
ಜನ್ಮ, ಪುನಃಜನ್ಮಗಳ
ಸುಳಿಯಲಿ ಸಿಲುಕಿ
ಪರಿತಪಿಪ
ಜೀವಾತ್ಮಗೊಂದೇ ಮಾರ್ಗ
ರಾಜಮಾರ್ಗ. ಭಕ್ತಿಮಾರ್ಗ
ಹರಿಸ್ಮರಣೆ

ಸೂರ್ಯಪುತ್ರ ಯಮರಾಜನ
ಲೋಕದಲಿ
ರೌರವ, ಮಹಾರೌರವ
ಶಾಲ್ಮಲಿ, ವೈತರಣಿ
ವಿಷಸನ .. . . . .
ಎಂಬಿತ್ಯಾದಿ, ಇಪ್ಪತೆಂಟು ನರಕಗಳಲಿ
ಜೀವಾತ್ಮ, ತನ್ನೆಲ್ಲ
ಪರಸ್ತ್ರೀ, ಪರಧನ,
ಮೋಹಪಾಶಕ್ಕೆ ಸಿಲುಕಿ
ಎಸಗಿದ ಪಾಪಕರ್ಮಂಗಳಿಗೆ
ತಕ್ಕುದಾದ. ಘನಘೋರ ಶಿಕ್ಷೆಗಳ
ಅನುಭವಿಸಿ,
ಶೇಷ ಉಳಿಕೆಗೆ
ಮತ್ತೆ ಭೂಲೋಕದಿ ಜನಿಸಿ
ಕರ್ಮ ಸವೆಪ ಮನುಜಗೆ
ಮುಕ್ತಿಗೊಂದೇ ಮಾರ್ಗ
ಭಕ್ತಿಮಾರ್ಗ

ಸ್ವರ್ಗದಲ್ಲೆ,
ಸುಖಲೋಲೋಪ್ತತೆಯನ್ನಭವಿಸಿಯೂ
ಕರ್ಮಶೇಷವನುಳಿಸೆ
ಮತ್ತೆ ಭೂಲೋಕದ
ಜನನ ಮರಣದ
ಸುಳಿಯ ಅಂತ್ಯಕೆ
ನಾರಾಯಣ ಭಕ್ತಿಯೇ
ರಾಜಮಾರ್ಗ,
ಏಕೈಕಮಾರ್ಗ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ :  http://surahonne.com/?p=42622
(ಮುಂದುವರಿಯುವುದು)

-ಎಂ. ಆರ್.‌ ಆನಂದ, ಮೈಸೂರು

5 Comments on “ಕಾವ್ಯ ಭಾಗವತ 44: ಸ್ವರ್ಗ – ನರಕ

  1. ಪ್ರಕಟಿಸಿದ “ಸುರಹೊನ್ನೆ” ಗೆ ಧನ್ಯವಾದಗಳು.

  2. ಭಕ್ತಿಮಾರ್ಗದ ಔಚಿತ್ಯವನ್ನು ಸಾರುವ ಕಾವ್ಯ ಭಾಗವತದ ಈ ಭಾಗ ಆಪ್ತವಾಗಿಯೂ ಇದೆ.

  3. ಸ್ವರ್ಗ ನರಕದ ಪರಿಕಲ್ಪನೆಯೊಂದಿಗೆ ಭಕ್ತಿಮಾರ್ಗ, ರಾಜಮಾರ್ಗಗಳ ಯುಕ್ತ ಪಾಲನೆಗೆ ದಾರಿ ತೋರಿದ ಸರಳ ಸುಂದರ ನಿರೂಪಣೆಯ ಕಾವ್ಯ ಭಾಗವತ.

Leave a Reply to ಎಂ. ಆರ್. ಆನಂದ Cancel reply

 Click this button or press Ctrl+G to toggle between Kannada and English

Your email address will not be published. Required fields are marked *