
ಆ ಕಣ್ಣ ಕಂಡೆನು ನಾ, ಅಂದು ಆ ಕಣ್ಣ ಕಂಡೆನು
ಮೌನದಿ ಉರಿಯುವ ಜ್ವಾಲೆಯ ಕಂಡೆ
ತನ್ನ ಮನದಿ ಬಚ್ಚಿಟ್ಟ ಕನಸಿನ ಬುಟ್ಟಿ ಅದು
ಪದೇ ಪದೇ ಅಬಲೆ ಎಂದೆನ್ನುವ
ಪುರುಷ ಸಮಾಜದ ಬೇರಿನ ಶಕ್ತಿಯ ಕಂಡೆನು ನಾ
ಪವಿತ್ರೆ ಎಂದೆನಿಸಲು ಅಗ್ನಿಯ ಪ್ರವೇಶಿಸಿ
ತನ್ನ ಆಟಕೆ ನನ್ನ ಪಗಡೆ ಆಗಿಸಿ
ಕೊನೆಗೆ ‘ ಸ್ತ್ರೀ ‘ ಅನ್ನುವ ದಾಳ ಉರುಳಿಸಿ
ಎಲ್ಲದಕ್ಕೂ ನೀನೆ ಕಾರಣ ಎಂದರಯ್ಯ.
ಮತ್ತೆ ಮತ್ತೆ ಶೋಷಣೆಗೆ ಒಳಗಾಗಿ
ಪೋಷಿಸುವ ಮಾತೃ ಹೃದಯ ಕಂಡೆನು
ನೊಂದು ಬೆಂದ ಜೀವಗಳಿಗೆ
ಸಾಂತ್ವನ ಹೇಳುವ ಆತ್ಮದ ಕಣ್ಣ ಕಂಡೆನು ನಾ
ಅಂದು ಆ ಕಣ್ಣು ಕಂಡೆನು.
ಸಮಯ ಬಂದಿಹುದು, ಜ್ವಾಲೆ ಪ್ರಜ್ವಲಿಸುತಿಹುದು
ಕೀಳು- ಮೇಲುಗಳೆಲ್ಲ ಹೊತ್ತಿ ಉರಿಯುವುದು
ಜ್ವಾಲೆಯ ಸ್ಪೋಟಕೆ ಉತ್ತರಿಸಲಾಗದ
ಈ ಸಮಾಜವು ಬೆಂದು ಬೆಚ್ಚಗೆ ಮಲಗುವುದು.
-ನಿಶಾಂತ್ ರಾವ್ ,ಮಂಗಳೂರು
ನೊಂದು ಬೆಂದ ಜೀವಕೆ ಸಾಂತ್ವನವೂ ಲಭ್ಯ; ಕಣ್ಣಿನ ಸಖ್ಯ
ಮನ ಕಲಕಿತು. ಚೆನ್ನಾಗಿದೆ. ಅಭಿನಂದನೆ
ಧನ್ಯವಾದಗಳು ಸರ್
ಕವನದ ಆಶಯ ಚೆನ್ನಾಗಿದೆ.. ಕವನ ಕಟ್ಟುವುದರಲ್ಲಿ..ಇನ್ನೂ ಸ್ವಲ್ಪ ಪರಿಶ್ರಮ ಬೇಕಿತ್ತು.. ಎನಿಸಿತು..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ, ನಿಮ್ಮ ಅನಿಸಿಕೆಯಂತೆ ಮುಂದಿನ ಕವಿತೆಗೆ ಹೆಚ್ಚು ಒತ್ತು ನೀಡುವೆ.
ಅರ್ಥಗರ್ಭಿತ ಕವಿತೆ ಮನವನ್ನು ಚಿಂತನೆಗೆ ಹಚ್ಚಿತು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಕವನ ತುಂಬಾ ಚೆನ್ನಾಗಿದೆ. ಮನ ತಟ್ಟುವಂತಿದೆ
ನಿಮ್ಮ ಅಭಿಪ್ರಾಯಕ್ಕೆ ನನ್ನ ಅಭಿನಂದನೆಗಳು ಮೇಡಂ
ಅಭಿನಂದನೆಗಳು .ಕವನವು ಸ್ತ್ರೀಯ ಜೀವನದ ಹೋರಾಟದ ಪ್ರತೀಕವಾಗಿದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮೇಡಂ
ಚೆನ್ನಾಗಿದೆ ಕವನ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ನಯನ ಮೇಡಂ
ಕವಿತೆ ಚೆನ್ನಾಗಿದೆ. ಸ್ತ್ರೀ ಯ ಬದುಕಿನ ಹೋರಾಟದ ಚಿತ್ರಣ ಮನ ಮುಟ್ಟುವಂತಿದೆ.ಅಭಿನಂದನೆಗಳು
Very nicely written.
ಸ್ತ್ರೀ ಶೋಷಣೆಯ ಕುರಿತ ಕವನ ಚೆನ್ನಾಗಿದೆ.