ಸಂಚಾರಿ ಜೀವಿ ನಾನು
ಸಾವಿರ ಕನಸುಗಳ ಹೊದಿಕೆಯಲಿ
ಸುಪ್ತವಾದವು ಕೆಲವು ಮರೆಯಲಿ
ಎಚ್ಚರಿಸಿದರು ಹಾರಲಾರದೆ
ತಟ್ಟಿದರೂ ಮನ ತೆರೆಯಲಾರದೆ
ಪಣವಾಯಿತು ಈ ಕನಸು ಪಯಣದಲಿ.
ಆಸರೆ ಬಯಸಿದ್ದ ಕನಸುಗಳು
ಹುಸಿಯಾದವು ಕೆಲ ಉಸಿರುಗಳು
ಚದುರತೊಡಗಿದವು ಭಾವನೆಗಳು
ಮಿಡಿಯತೊಡಗಿದವು ಮನಸ್ಸುಗಳು
ದಿನಚರಿ ಆದವು ಎಲ್ಲಾ ನೆನಪುಗಳು
ಹವ್ಯಾಸವಾದವು ಈ ಕನಸು- ನನಸುಗಳು.
–ನಿಶಾಂತ್ ರಾವ್, ಮಂಗಳೂರು
ನೈಸ್
ಕನಸಿನ ಲೋಕದಿಂದ ವಾಸ್ತವಿಕತೆಗೆಡೆಗೆ ಹರಿದ ಮನದ ಲಹರಿ ಚೆನ್ನಿದೆ.
ಚೆನ್ನಾಗಿದೆ
ಸೊಗಸಾಗಿದೆ
ಕವನದ ಶೈಲಿ ಚೆನ್ನಾಗಿದೆ ಸರ್.ಹವ್ಯಾಸವಾದವು ಈ ಕನಸು ನನಸು ಗಳು ಸಾಲುಗಳು ಬಹಳ ಭಾವನಾತ್ಮಕವಾಗಿ ಮೂಡಿ ಬಂದಿದೆ
ಚೆನ್ನಾಗಿದೆ ಕವನ
ಮನ ತುಂಬಾ ಕನಸುಗಳನ್ನು ಹೊತ್ತು ಸಾಗಿದ ಪಯಣದಲ್ಲಿ ವಾಸ್ತವಿಕತೆಯನ್ನೂ ಅರಗಿಸಿಕೊಳ್ಳಬೇಕಾದ ಅನಿವಾರ್ಯತೆ! ಭಾವಪೂರ್ಣ ಕವನ ಚೆನ್ನಾಗಿದೆ.