ಸುಸ್ವಾಗತ ಸುನೀತಾ

ಸ್ವಾಗತವ ಕೋರುವೆವು ಭಾರತ ಸಂಜಾತೆ
ನವಮಾಸ ನಿನ್ನಾವಾಸ ಅಂತರಿಕ್ಷ ಕೋಶ
ಅಸೀಮ ಅದ್ಭುತ ಬಸಿರಿನಲ್ಲೇ ಪುನೀತೆ
ವಿಶ್ವದ ಪ್ರೀತಿಯಲಿ ಮಿಂದು ಎದ್ದಾಕೆ
ಸಾಗರಸ್ನಾನ ಕುಂಭದಿಂದೆದ್ದು ನೀ ಬಂದೆ
ಭುವಿಯ ಮಡಿಲಲಿಂದು ನಗುವ ಲಕ್ಷ್ಮಿಯಾಗಿರುವೆ
ಮರುಹುಟ್ಟಿನ ಸಂಭ್ರಮ ಎನಿತು ಬಣ್ಣಿಸಲೆ
ಫಲಿಸಿದೆ ಅಸಂಖ್ಯಾತ ಜನರ ಪ್ರಾರ್ಥನೆ
ಗುಜರಾತಿಗೆ ಮೂಡಿದೆ ಮತ್ತೊಂದು ಕೋಡು
ಮೊಹ್ಸಾನವಾಗಿದೆ ಹಿರಿಹಿಗ್ಗಿನ ಬೀಡು
ಝುಲಾಸನದ ಜನರ ಕುಣಿದಾಟಕೆ
ಜೊತೆಯಾಗಿವೆ ಪಟಾಕಿಗಳ ಜೋರು
ಬುಚ್ ವಿಲ್ಮೋರ್ ಎನುವ ಸಾಹಸಿಗ
ನಿನ್ನ ಜೊತೆಗಾರ ಎಡೆಬಿಡದ ಸಹಚರ
ನಿಮ್ಮ ಪರಿಶ್ರಮಕಾಯ್ತು ವಿಜ್ಞಾನದ ಮುದ್ರಾಂಕ
ನಿಮ್ಮಿಬ್ಬರ ಸಾಂಗತ್ಯ ತ್ರಿಲೋಕ ಸಾಂಪ್ರತ
ಮೈಕೇಲ್ ವಿಲಿಯಮ್ಸ್ ಸಹಬಾಳ್ವೆ ನಿನಗಿರಲಿ
ಮತ್ತೊಮ್ಮೆ ಸುಸ್ವಾಗತ ಪ್ರೀತಿಯ ಸುನೀತಾ
–ನಿರ್ಮಲ ಜಿ.ವಿ
ಸುಸ್ವಾಗತ ಹಾರೈಕೆಯ ಗೀತೆ ಚೆನ್ನಾಗಿ ಮೂಡಿಬಂದಿದೆ ನಿರ್ಮಲಾ ಮೇಡಂ
ಮಹಿಳಾ ಲೋಕಕ್ಕೇ ಒಂದು ವಿಸ್ಮಯ ಕೊಡುಗೆಯಾದ ಸುನೀತಾಗೊಂದು ಸುಂದರ ಸ್ವಾಗತ.
ಅಸೀಮ ಸಾಹಸಿ, ಹೆಮ್ಮೆಯ ಸುನೀತಾ ಅವರಿಗಾಗಿ ಮೂಡಿಬಂದ ಚಂದದ ಸ್ವಾಗತಗೀತೆ ನಮ್ಮೆಲ್ಲರ ಹಾರೈಕೆಯೂ ಹೌದು…ಧನ್ಯವಾದಗಳು.
ಚೆನ್ನಾಗಿದೆ ಕವನ
ನನ್ನ ಕವನ ಮೆಚ್ಚಿದವರಿಗೆ ವಂದನೆಗಳು. ತಡವಾಗಿ ನೋಡಿದೆ. ಹಬ್ಬದ ಗಡಿಬಿಡಿ