ಪ್ರೀತಿಯ ಮಳೆ ಹನಿಯಲಿ

ಸುಖಿಸಲಿ ಜಗ
ಪ್ರೀತಿಯ ಮಳೆ ಹನಿಯಲಿ
ಹೆಪ್ಪುಗಟ್ಟಿದ ಮೌನ
ಧಗ ಧಗಿಸುತಿದೆ
ಮನಸ್ಸಿನ ಒಳಾಂಗಣ
ಆಗದಿರಲಿ ಕ್ಷುಲ್ಲಕ ಕಾರಣಕ್ಕೆ
ನೆಮ್ಮದಿಯ ಬದುಕು ರಣಾಂಗಣ
ನೋಡಿಯೂ ನೋಡದಂತೆ
ಕೇಳಿಯೂ ಕೇಳಿಸಿಕೊಳ್ಳದಂತೆ
ಇದ್ದವನೇ ಇಲ್ಲಿ ಕೆಲವೊಮ್ಮೆ ಜಾಣ
ತಪ್ಪಲ್ಲದ ತಪ್ಪಿಗೆ ಗೊತ್ತು ಗುರಿ ಇಲ್ಲದೆ
ಬಂದು ನಾಟುವುದು
ಮೈ ಮನವ ಛೇದಿಸುವುದು
ದ್ವೇಷ ಅಸೂಯೆಗಳ ಬಾಣ
ಹರಿಯುವುದು ರಕ್ತ ತರ್ಪಣ
ದೈಹಿಕ ಮಾನಸಿಕ ಹಿಂಸೆಗೆ
ಕುದಿಯುವುದು ರಕ್ತದ ಪ್ರತಿ ಕಣಕಣ
ಪ್ರೀತಿ ತಾಳ್ಮೆ ಇಲ್ಲದ ಜಗದೊಳಗೆ
ಅನರ್ಥ ಸಂಭವಿಸುವುದು
ರಾಗ ದ್ವೇಷಗಳ ಮರೆತು
ಒಂದಾಗಿ ಎಲ್ಲರೂ ಬೆರೆತಾಗ
ಮನವು ಅರಳುವುದು
ದ್ವೇಷ ಅಸೂಯೆ ನರಳುವುದು
ಆತಂಕದ ಛಾಯೆ ಅಳಿಯುವುದು
ಒಲವ ಹನಿ ಜೊತೆ ಸೇರಿದಾಗ
ಬದುಕು ಹಸಿರಾಗುವುದು
ನಾಳೆಗಳು ಗೆಲುವಾಗುವುದು
–ನಾಗರಾಜ.ಜಿ. ಎನ್. ಬಾಡ
ಸುಂದರ, ಅರ್ಥ ಪೂರ್ಣ ಕವನ.
ಅರ್ಥ ಪೂರ್ಣ ಕವನ ..ಸಾರ್
ಪ್ರೀತಿಯ ಮಳೆ ಹನಿಯ ಸಿಂಚನದಿಂದ ಮನ ಪ್ರಫುಲ್ಲಗೊಂಡಿತು.
ಸಮಾಜ ಸಾಗುತ್ತಿರುವ ಪಥಕ್ಕೆ ಕನ್ನಡಿ ಹಿಡಿಯುವಂತಿದೆ ತಮ್ಮ ಕವನ..ಚೆನ್ನಾಗಿದೆ
ಸಮಾಜ ಸಾಗುತ್ತಿರುವ ಪಥದ ನೈಜತೆ ಅಡಗಿದ ಕವನ ಚೆನ್ನಾಗಿದೆ..
ರಾಗ ದ್ವೇಷಗಳ ಮರೆತು ಒಲವ ಹನಿಯ ಸೇರಿಸುವ ಸುಂದರ ಸಂದೇಶವನ್ನು ಹೊತ್ತ ಚಂದದ ಕವನ.
ಚಂದದ ಕವನ