ಬೆಳಕು-ಬಳ್ಳಿ

ಕಾವ್ಯ ಭಾಗವತ 33: ಆತ್ಮತತ್ವ

Share Button

33.ಪಂಚಮ ಸ್ಕಂದ
ಅಧ್ಯಾಯ –2
ಆತ್ಮತತ್ವ


ರಹೂಗಣ ರಾಜಂಗೆ
ಭರತನ ಆತ್ಮತತ್ವ ಭೋದನೆ

ಇಹಲೋಕದೆಲ್ಲ ಸುಖ
ಸ್ವಪ್ನ ಸುಖದ ಪರಿ
ಅಲ್ಪವೂ, ಅನಿತ್ಯವೂ
ಕ್ಷಣಭಂಗುರವೂ
ಎಂಬರಿವು ಇಲ್ಲದಿರೆ
ವೇದಾಂತದರಿವು ರುಚಿಸದು
ಜೀವ,
ಸತ್ಯ ರಜಸ್ತಮೋಗುಣಗಳ
ಪ್ರಭಾವದಿ ಮಾಡಿದ ಕರ್ಮದಲಿ
ಉತ್ತಮ-ನೀಚ ಜನ್ಮ ಪಡೆದುದು
ನಂತರದಿ ಶಬ್ಧರೂಪ, ರಸಗಂಧ
ಸ್ವರ್ಶಗಳ
ಸಂಬಂಧದಿಂ ಮಾಡ್ಪ ಕೆಲಸ,
ಬಾಯಿ ಮಾತುಗಳಿಂದ
ಮಾಡ್ಪ
ಕರ್ಮೇಂದ್ರಿಯಗಳ
ಪಂಚವ್ಯಾಪಾರಗಳೆಲ್ಲವ
ಶುದ್ಧರೂಪನಾಗಿ
ಸಾಕ್ಷೀಭೂತನಾಗಿ
ವೀಕ್ಷಪ ಭಗವಂತ ಸರ್ವವ್ಯಾಪಿ

ಎಲ್ಲ ಜೀವಿಗಳ ಒಂದಂಶ ಅವಗೆ,
ಎಲ್ಲ ಆತ್ಮಗಳ ತತ್ವ ಸ್ವರೂಪ ಅವಗೆ
ಅಹಂಕಾರ, ಮಮಕಾರ
ರೂಪದ ಮಾಯೆಯಂ
ಜ್ಞಾನಪ್ರಕಾಶದಿಂ ನೀಗಿಸಿ
ದೇಹಾಭಿಮಾನ
ಪಂಚೇಂದ್ರಿಯಗಳಲಿ
ಅಡಗಿರ್ಪ
ಕಾಮ, ಕ್ರೋಧ, ಮದ, ಮಾತ್ಸರ್ಯಗಳ
ಜಯಿಸಿ
ಅಂತರಾತ್ಮದ ಅರಿಯೆ
ಅದೇ ಆತ್ಮತತ್ವ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=42048

(ಮುಂದುವರಿಯುವುದು)
-ಎಂ. ಆರ್.‌ ಆನಂದ, ಮೈಸೂರು

5 Comments on “ಕಾವ್ಯ ಭಾಗವತ 33: ಆತ್ಮತತ್ವ

  1. ಅಂತರಾತ್ಮವನರಿಯುವುದೇ ಆತ್ಮತತ್ತ್ವ !
    ನಿಜ ಸರ್.‌ ಮನಕಿಳಿಯಿತು.
    ಮುಂದುವರೆಯಲಿ.

  2. ಸೂಕ್ಷ್ಮ ರೂಪದಲ್ಲಿಆತ್ಮತತ್ವದ ಅರಿವನ್ನು ಮೂಡಿಸುವ ಕಾವ್ಯ ಭಾಗವತದ ಈ ಭಾಗವು ಚಿಂತನಯೋಗ್ಯವಾಗಿದೆ.

  3. ಆತ್ಮತತ್ವದ ಅಂತರಾತ್ಮದ ನಿರೂಪಣೆ ಸಹಜ ಸುಂದರವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *