ನೀರ ಮೇಲೆ
ಭಾವ ವೀಣೆ ತೇಲಿ ತೇಲಿ
ಸಾಗಿದೆ ಸುಮ್ಮನೇ
ಒಲವ ಹಂಚಿ ಜೀವ ಭಾವ
ಕಡಲ ಮೇಲೆ ಸಾಗಿ
ಸಗ್ಗ ಸೇರಿದ ಮೆಲ್ಲನೇ
ಬಾನ ಬಯಲು
ಹಸಿರ ಉಸಿರು
ಭೂಮಿ ನಗುವ ಹೂವು
ಗಾಳಿ ಗಂಧ
ಬಣ್ಣ ಬಿಂಬ ತುಂಬಿ
ಸುರಿವ ಜಗವು
ಮಾತು ಮೌನ
ಹಸಿರು ಧ್ಯಾನ
ಜೀವ ಜೀವದ ಕಥನ
ಮಣ್ಣ ಹಾಡು
ಸಾರ ಸತ್ವ
ಸೋಜಿಗ ನೆಲದ ವದನ
-ನಾಗರಾಜ ಬಿ. ನಾಯ್ಕ, ಕುಮಟಾ.
ಸರಳ ಸುಂದರ ಕವಿತೆ ಸಾರ್
ಧನ್ಯವಾದಗಳು ತಮ್ಮ ಓದಿಗೆ
Nice
ಧನ್ಯವಾದಗಳು ತಮ್ಮ ಓದಿಗೆ
ಪ್ರಕೃತಿಯೊಂದಿಗೆ ಭಾವ ಸೇರಿದಾಗ ಹುಟ್ಟಿದ ಕವಿತೆ ಸುಂದರವಾಗಿದೆ.
ಧನ್ಯವಾದಗಳು
ಭಾವನಾತ್ಮಕ ಸುಂದರ ಕವನ.
ಧನ್ಯವಾದಗಳು ತಮ್ಮ ಓದಿಗೆ