ಸಂಬಂಧ

ಅರಿವಿರದ ವಯಸ್ಸಲ್ಲಿ
ಎಲ್ಲವೂ ಚಂದ ಚಂದ
ಸುತ್ತಲೂ ಬೆಳೆಯುವುದು
ಸುಂದರ ಅನುಬಂಧ
ಬೇಧ ಭಾವದ ಸೋಂಕಿರದ
ಒಲವ ಮಧುರ ಬಂಧ
ನೋವು ನಲಿವುಗಳನ್ನು
ಮರೆಸುವ ಆತ್ಮೀಯ ಸಂಬಂಧ
ಮೇಲು ಕೀಳಿನ ಭಾವವರಿಯದ
ಮುಗ್ಧತೆಯಿಂದ ತುಂಬಿದ ಮನಸು
ಬಡವ ಶ್ರೀಮಂತನೆಂಬ ಬೇಧವನ್ನು
ಬಯಸದ ಸಹಿಸದ ಮನಸು
ಇಂದು ಹಾಗಿಲ್ಲ ಯಾರ ಮನಸು
ಎಲ್ಲರ ಮನದೊಳಗು ಕೊಳಕು
ಎಲ್ಲರೂ ಮಾಡುವರು ಇಂದು
ಇನ್ನೊಬ್ಬರಿಗೆ ಕೆಡುಕು
ಹಿಂದೊಂದು ಮುಂದೊಂದು
ಸುಮ್ಮನೆ ಮಾಡುವರು ಹುಳುಕು
ಸರಿ ತಪ್ಪುಗಳನ್ನು ಮರೆತು
ಒಳ್ಳೆಯತನವನ್ನು ಹುಡುಕು
ಚಿಕ್ಕ ಜೀವನವನ್ನು
ಚೊಕ್ಕದಾಗಿ ಮುಗಿಸು
ಬದುಕಿನ ಸೌಂದರ್ಯವ
ಹಿರಿದುಗೊಳಿಸು
-ನಾಗರಾಜ ಜಿ. ಎನ್. ಬಾಡ
ಸಂಬಂಧ ಹೌದು ಸತ್ಯವಾದ ಮಾತು..ಅದನ್ನು ತಮ್ಮ ಕವಿತೆಯ ಮೂಲಕ ಹೇಳಿ ರುವುದು ಚೆನ್ನಾಗಿ ಬಂದಿದೆ ಸಾರ್
ಚೆನ್ನಾಗಿದೆ ಕವನ
ಒಂದೊಳ್ಳೆಯ ಸಂದೇಶವನ್ನು ಬೀರುವ ಸುಂದರ ಸತತಕವನ.
ಕಲ್ಮಶವಿಲ್ಲದ ಮಗುವಿನ ಮುಗ್ಧ ಮನವು, ಬೆಳೆದಂತೆಲ್ಲ ಮುಗ್ಧತೆ ಅಳಿಯುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸುತ್ತಾ, ಕೆಡುಕಿನತ್ತ ಮುಖಮಾಡದೆ, ಒಳ್ಳೆತನವನ್ನು ಹುಡುಕುವ ಅಗತ್ಯತೆಯನ್ನು ಒತ್ತಿ ಹೇಳುವ ಸುಂದರ ಕವನ.
ಸಂಬಂಧಗಳ ಬಗ್ಗೆ ಸುಂದರವಾದ ಕವನ