ಪಾರಿವಾಳಕ್ಕಿಷ್ಟು ಜೋಳ..
ರಾಜಸ್ಥಾನದ ಜೈಪುರದಲ್ಲಿ ನಾನು ಗಮನಿಸಿದಂತೆ ಅಗಲವಾದ ಸ್ವಚ್ಛವಾದ ರಸ್ತೆಗಳು, ದೊಡ್ಡದಾದ ವೃತ್ತಗಳು, ಅಲ್ಲಲ್ಲಿ ಕಾಣಿಸುವ ಪಾರಂಪರಿಕ ಕಟ್ಟಡಗಳು….ಇವುಗಳ ಜತೆಗೆ ಸ್ವಚ್ಛಂದವಾಗಿ ಹಾರಾಡುವ ಅಸಂಖ್ಯಾತ ಪಾರಿವಾಳಗಳು!
ಬಹುಶ: ಅಲ್ಲಿಯ ಜನರಿಗೆ ಪಾರಿವಾಳಗಳಿಗೆ ಆಹಾರ ನೀಡುವುದು ಪುಣ್ಯಕಾರ್ಯ ಎಂಬ ನಂಬಿಕೆ ಇದೆಯೇನೊ. ಹಲವಾರು ವೃತ್ತಗಳಲ್ಲಿ, ಕಟ್ಟಡಗಳ ಮುಂಭಾಗದಲ್ಲಿ ಹಿಂಡು ಹಿಂಡು ಪಾರಿವಾಳಗಳು ಮತ್ತು ಅವಕ್ಕೆ ಜೋಳದ ಕಾಳುಗಳನ್ನು ಎರಚುತ್ತಿರುವ ಜನರನ್ನು ಕಂಡೆವು. ಪಕ್ಕದಲ್ಲಿಯೇ ಜೋಳ ಮಾರುತ್ತಿರುವವರೂ ಇದ್ದರು. ನಾವೂ ಸ್ವಲ್ಪ ಜೋಳ ಖರೀದಿಸಿ ಪಾರಿವಾಳಗಳಿಗೆ ಎರಚಿದೆವು.
‘
– ಹೇಮಮಾಲಾ.ಬಿ
ಹೇಮಾ ಮೇಡಂ. ಜೈಪುರದ ಆ ಸುಂದರ ರಸ್ತೆಗಳನ್ನು ನಿರ್ಮಾಣ ಮಾಡಿದರು ನಮ್ಮವರೇ ಆದ ಸರ್ ಮಿರ್ಜಾ ಇಸ್ಮಾಯಿಲ್ ಅವರು. ಮೈಸೂರು ಆಸ್ಥಾನದ ದಿವಾನ್ ಪದವಿಯಿಂದ ನಿವೃತ್ತರಾದ ಮೇಲೆ ಅವರು ಜೈಪುರದ ದೊರೆಯ ಬಳಿ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು. ಇಂದಿಗೂ ಸಹ ಜೈಪುರದಲ್ಲಿ ಅವರ ಹೆಸರಿನಲ್ಲಿ ರಸ್ತೆಯೊಂದಿದೆ. ಹೆಡ್ ಪೋಸ್ಟ್ ಆಫೀಸ್ ಮುಂಭಾಗದ ರಸ್ತೆಯನ್ನು ಮಿರ್ಜಾ ಇಸ್ಮಾಯಿಲ್ ರೋಡ್ ಎಂದು ಕರೆಯಲಾಗುತ್ತಿದೆ.
Good morning madam.
Pakshigalu tumba channagive. Very very nice……..
ಹೌದು ಇದು ನನ್ನ ಅನುಭವ ಕೂಡಾ 🙂
‘Manamohaka drushya’