ಬೆಳಕು-ಬಳ್ಳಿ

ಬಂಧ ಕಳಚಿದ ಮೇಲೆ

Share Button

ನನ್ನದೇ ಸರಿ ಎಂಬ ಹುಚ್ಚು
ನಿನ್ನ ಬಿಡಲಿಲ್ಲ
ಕೇಳಿಕೊಂಡು ಸುಮ್ಮನಾಗುವುದನ್ನು
ನಾನು ಅರಿಯಲಿಲ್ಲ

ನಮ್ಮೊಳಗಿನ ಹುಚ್ಚು
ನಮ್ಮಿಬ್ಬರಿಗೂ  ಬಿಡಲಿಲ್ಲ
ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುವುದು ಕಲಿಯಲಿಲ್ಲ

ಹುಚ್ಚು ಕುದುರೆಯಂತೆ
ಲಂಗು ಲಗಾಮಿಲ್ಲದೆ
ಓಡುವುದ ಬಿಡಲಿಲ್ಲ
ಜೊತೆಯಾಗಿ ಕುಳಿತು
ಸಮಸ್ಯೆಯನ್ನು ಪರಿಹರಿಸಿಕೊಳ್ಳಲಿಲ್ಲ

ಅರ್ಥ ಮಾಡಿಕೊಂಡರೆ
ಎಲ್ಲವನ್ನು ಬಗೆಹರಿಸಬಹುದಿತ್ತಲ್ಲ
ಹೊಂದಾಣಿಕೆಯ ಮನಸ್ಥಿತಿ
ಯಾರಲ್ಲೂ ಇರಲಿಲ್ಲ

ನಾನೊಂದು ತೀರ
ನೀನೊಂದು ತೀರ
ಎಂದು ತೀರ್ಮಾನಿಸಿದ ಮೇಲೆ
ಯೋಚಿಸಿ ಫಲವಿಲ್ಲ

ಅಹಂನ ಬಿರುಗಾಳಿಗೆ ಸಿಕ್ಕ ಮೇಲೆ
ಬದುಕಿಗೆ ಉಳಿವಿಲ್ಲ
ಯೋಚಿಸಿ ನೋಡುವ ತಾಳ್ಮೆ
ಯಾರಲ್ಲೂ ಇರಲಿಲ್ಲ

ಅಳಿದುಳಿದ ಸಮಯ ಇದ್ದರೂ
ನಮ್ಮದಾಗಿರುವುದಿಲ್ಲ
ಕಳೆದುಕೊಳ್ಳುವುದು ಕಷ್ಟವಲ್ಲ ಪಡೆದುಕೊಳ್ಳುವುದು ಸುಲಭವಲ್ಲ

ಬಂಧ ಕಳಚಿದ ಮೇಲೆ
ಸಂಬಂಧಗಳಿಗೆ ಇಲ್ಲಿ
ಬೆಲೆಯು ಇಲ್ಲ ನೆಲೆಯೂ ಇಲ್ಲ
ನೆಮ್ಮದಿಯು ದೂರವಾಯಿತಲ್ಲ

-ನಾಗರಾಜ ಜಿ. ಎನ್.  ಕುಮಟ, ಉತ್ತರ ಕನ್ನಡ.

6 Comments on “ಬಂಧ ಕಳಚಿದ ಮೇಲೆ

  1. ಅಹಂನ ಬಿರುಗಾಳಿಗೆ ಸಿಕ್ಕ ಮೇಲೆ ಬದುಕಿಗೆ ಉಳಿವಿಲ್ಲ – ಎಷ್ಟು ಅರ್ಥಪೂರ್ಣ ಸಾಲುಗಳು!
    ಚಿಂತನೆಗೆ ಹಚ್ಚುವ ಚಂದದ ಕವಿತೆ.

  2. ಮಮ ಮತ್ತು ಅಹಂ ಎಂಬ ಪದಗಳಿಗೆ ಸಿಕ್ಕ ಬದುಕು ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ
    ಚಂದದ ಕವನ

  3. ಬಿರುಕುಬಿಟ್ಟ ವೈವಾಹಿಕ ಜೀವನವನ್ನು ಅನಾವರಣಗೊಳಿಸಿದ ಚಂದದ ಕವನ.

  4. ಬದುಕಿನ ಸಹಜ ಸನ್ನಿವೇಶ ಕವನವಾಗಿದೆ. ವಾಸ್ತವದ ಕೈಗೆ ಕನ್ನಡಿಯ ಹಿಡಿದು ತೋರಿಸಿದಂತಿದೆ ಸಾಲುಗಳು. ಸರಳ ಯಾಚನೆ ಯೋಚನೆ ಇಲ್ಲಿದೆ. ಕವಿತೆಯ ಆಶಯ ಚೆನ್ನಾಗಿದೆ.

Leave a Reply to ನಯನ ಬಜಕೂಡ್ಲು Cancel reply

 Click this button or press Ctrl+G to toggle between Kannada and English

Your email address will not be published. Required fields are marked *