ಬೆಳಕು-ಬಳ್ಳಿ

ನಿನ್ನೆಯ ದಿನ

Share Button

ಹುಟ್ಟುಹಬ್ಬದ
ಶುಭಾಶಯಗಳನ್ನು ಹೊರಿಯುತ್ತಾ
ಬದಲಾಗಿ ನಾನು ಕೊಡುತ್ತಿರುವ
ಧನ್ಯವಾದ ರಸೀದಿಗಳನ್ನು ಸಾಗಿಸುತ್ತಾ
ಇಡೀ ನಿನ್ನೆ ಫೇಸ್‌ಬುಕ್‌ ವಾಟ್ಸಾಪ್
ಅತಿಯಾಗಿ ದಣಿದಿದೆ !

ವಿರಾಮ ತೆಗೆದುಕೊಳ್ಳಲಿ ಯಂತ
ಸ್ವಲ್ಪ ಮೊಬೈಲ್ ಡೇಟಾ ಯನ್ನು
ಇನ್ನು ಸ್ವಲ್ಪ ಇಂಟರ್ನೆಟ್ ಸಂಪರ್ಕವನ್ನು
ನೀಡಿ ಸತ್ಕರಿಸಿದೆ !

ದಿನವಿಡೀ ರಿಂಗಣಿಸುತ್ತಾ
ಆಶೀರ್ವಾದದ ಮಾತುಗಳನ್ನೂ
ವಂದನೆಗಳ ವಿನಯದ ಪ್ರತ್ಯುತ್ತರಗಳನ್ನೂ
ಅಲ್ಲಿಗೆ ಇಲ್ಲಿಗೆ ತಲುಪಿಸಿ
ಫೋನ್ ಸಹಿತ ಸುಸ್ತಾಗಿದೆ
ಕಣ್ಣುಗಳಲ್ಲಿನ ಬೆಳಕು ಕಡಿಮೆಯಾಗಿ ಮೂರ್ಛೆ ಹೋಗಿದೆ !

ಕೊನೆಯುಸಿರೆಳೆದಿದ್ದ ಅದನ್ನು
ನಿಧಾನವಾಗಿ ಮೈಯೆಲ್ಲಾ ತಟ್ಟಿ
ಒಂದು ಬದಿಯಲ್ಲಿ ಚೆನ್ನಾಗಿ ಮಲಗಿಸಿ
ಹೊಟ್ಟೆ ತುಂಬಾ ಚಾರ್ಜಿಂಗ್ ಮಾಡಿದೆ !

ಮಧ್ಯರಾತ್ರಿ ದಾಟಿತು
ಕ್ಯಾಲೆಂಡರ್‌ನಲ್ಲಿ ದಿನಾಂಕ ಬದಲಾಯ್ತು
ಫೇಸ್‌ಬುಕ್‌ ವಾಟ್ಸಾಪ್ ಗಳನ್ನ ನಿದ್ದೆ ಹೊಗಿಸಿ
ಸದ್ದು ಮಾಡದೇ
ಫೋನ್ ಸಹಿತ ಒಂದು ಕಡೆ ಮಲಗಿತು !!!

ತೆಲುಗು ಮೂಲ : ಶ್ರೀಧರ್ ಚೌಡಾರಪು
ಕನ್ನಡ ಅನುವಾದ : ಕೋಡೀಹಳ್ಳಿ  ಮುರಳೀ ಮೋಹನ್

17 Comments on “ನಿನ್ನೆಯ ದಿನ

  1. ಫೋನ್ ಚಾರ್ಜ್ ಮಾಡುವ ಒಂದು ಸಾಮಾನ್ಯ ವಿಷಯವನ್ನು ಇಷ್ಟೊಂದು ಅತಿಶಯ ವಾಗಿಸಿದ್ದ ಈ ಕವನ ನಿಜಕ್ಕೂ ಅಧ್ಭುತವಾಗಿದೆ. ಭಾಷಾ ಶೈಲಿ ಚೆನ್ನಾಗಿದೆ. ಅಭಿನಂದನೆಗಳು .

  2. Nice poetry from sridhar choudarapu addl director of social welfare department of Telangana state and nice translation by Mr murali mohan sir congratulations to both of you

  3. ಸರಳ, ಸಾಮಾನ್ಯ ವಿಷಯವೂ ಕವಿಮನದ ಮೂಸೆಯಲ್ಲಿ ಪರಿಪಕ್ವವಾಗಿ ಕವಿತೆಯಾಗಿ ಹೊರಹೊಮ್ಮಿದ ಪರಿ ಸೋಜಿಗವನ್ನುಂಟು ಮಾಡಿತು.

  4. ಕವಿಯ ಸೃಷ್ಟಿ ಗೆ ವ್ಯಾಪ್ತಿಯ ಪ್ರದೇಶವಿಲ್ಲ ಅಂತ ಕವನ ನಿರೂಪಿಸುತ್ತದೆ

  5. ಸಂದೇಶಗಳನ್ನು ಹೊತ್ತೊಯ್ದು ದಣಿದು ಕೊನೆಯುಸಿರೆಳೆದ ಚರವಾಣಿಗೆ ಚಾರ್ಜ್ ಮಾಡಿ ಜೀವ ತುಂಬಿದ ಕವಿತೆ ಹೊಸತೆನೆಸಿತು!…ಅನುವಾದ ಅದ್ಭುತ!

Leave a Reply to Rajeswari.C.S Cancel reply

 Click this button or press Ctrl+G to toggle between Kannada and English

Your email address will not be published. Required fields are marked *