ಜೇನಿನ ಹೊಳೆಯೋ..ಹಾಲಿನ ಮಳೆಯೋ
ದೂದ್ ಸಾಗರ್….
‘
‘ಚಲಿಸುವ ಮೋಡಗಳು’ ಚಲನಚಿತ್ರದ ‘ಜೇನಿನ ಹೊಳೆಯೋ..ಹಾಲಿನ ಮಳೆಯೋ’ ಹಾಡಿನ ಹಿನ್ನೆಲೆಯಲ್ಲಿ ಈ ಪೋಸ್ಟ್ ಅನ್ನು ಓದಿದರೆ ಹೇಗೆ? ಯು-ಟ್ಯೂಬ್ ಕೊಂಡಿಯನ್ನು ಕ್ಲಿಕ್ಕಿಸಿ:
‘
ನಮ್ಮ ನೆರೆಯ ಗೋವಾದಲ್ಲಿ ಹರಿಯುವ ಮಾಂಡೋವಿ ನದಿಯು ಸೃಷ್ಟಿಸಿರುವ ದೂದ್ ಸಾಗರ ಜಲಪಾತವು ನಾಲ್ಕು ಹಂತಗಳಲ್ಲಿ ನೀರನ್ನು ಚಿಮ್ಮಿಸುತ್ತದೆ. ಹೀಗೆ ಧುಮುಕುವ ಜಲಪಾತವು ಹಾಲಿನಂತೆ ಕಾಣಿಸುವುದರಿಂದ ದೂದ್ ಸಾಗರ್ ಎಂಬ ಅನ್ವರ್ಥ ನಾಮ ಪಡೆದುಕೊಂಡಿದೆ. ಇದು ಗೋವಾದ ಪಣಜಿಯಿಂದ 60 ಕಿ.ಮೀ ದೂರದಲ್ಲಿದೆ.
.
ದೂದ್ ಸಾಗರ್ ಬಗ್ಗೆ ಪ್ರಚಲಿತವಿರುವ ದಂತಕತೆಯ ಪ್ರಕಾರ, ಹಿಂದೆ, ಇಲ್ಲಿಗೆ ಪಕ್ಕದ ಅರಮನೆಯಲ್ಲಿ ರಾಜಕುಮಾರಿಯೊಬ್ಬಳು ವಾಸವಿದ್ದಳು. ಇಲ್ಲೊಂದು ಸುಂದರ ಸರೋವರವಿತ್ತು. ರಾಜಕುಮಾರಿಯು ಪ್ರತಿದಿನ ಸರೋವರಕ್ಕೆ ಬಂದು ಸ್ನಾನ ಮಾಡಿದ ನಂತರ, ಚಿನ್ನದ ಹೂಜಿಯಲ್ಲಿ ತಾನು ತಂದಿದ್ದ ಸಿಹಿಹಾಲನ್ನು ಕುಡಿಯುತ್ತಿದ್ದಳಂತೆ. ಹೀಗೆ ಒಂದು ದಿನ ಸ್ನಾನ ಮಾಡಿ ಹಾಲು ಕುಡಿಯುತ್ತಿರುವಾಗ, ಪಕ್ಕದ ಕಾಡಿನ ಮರೆಯಲ್ಲಿ, ರಾಜಕುಮಾರನೊಬ್ಬ ತನ್ನನ್ನು ನೋಡುತ್ತಿರುವುದನ್ನು ಗಮನಿಸಿದಳಂತೆ. ಮುಜುಗರಗೊಂಡ ಆಕೆ ಹೂಜಿಯ ಹಾಲನ್ನು ಚೆಲ್ಲಿ, ಅಪಾರದರ್ಶಕತೆಯನ್ನು ಸೃಷ್ಟಿಸಿ ತನ್ನ ಗೌರವವನ್ನು ಕಾಪಾಡಿಕೊಂಡಳಂತೆ. ಹೀಗೆ ಹರಿದ ಹೂಜಿಯ ಹಾಲು ‘ದೂದ್ ಸಾಗರ್’ ಎಂದ ಹೆಸರು ಪಡೆಯಿತಂತೆ.
‘
ಸುಂದರವಾದ ಈ ಚಿತ್ರವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದವರು ಮೈಸೂರಿನ ಮನೀಷ್ ಕುಮಾರ್ ಅವರು.
‘
– ಸುರಗಿ
I seee this place vry vry beautifullllll
So beautiful..