ಬೆಳಕು-ಬಳ್ಳಿ

ಹನಿ ಇಬ್ಬನಿ – ಅಂತರಂಗದ ಇನಿದನಿ

Share Button



1.ಅಲೆಯೊಂದು ಸಾಕು
ಅಲ್ಲೋಲಕಲ್ಲೋಲಗೊಳ್ಳಲು
ನೀರ ಮೇಲಿನ ಪ್ರತಿಬಿಂಬ,
ಕಣ್ಣು ಮುಚ್ಚುವವರೆಗೂ ಶಾಶ್ವತ,
ಮನದ ಕಣ್ಣಲ್ಲೂ
ಆವರಿಸಿರುವ ಬಿಂಬ.

2.ಮೆಲ್ಲ ಮೆಲ್ಲನೆ ಜಗವನ್ನಾವರಿಸುವ ಬೆಳಕಿನ ಹೊನಲು,
ಬೆಳಗಿನ ಸಂಭ್ರಮದ ಜೊತೆಗೆ
ಮರೆಯಾಗುವುದು ಬದುಕಿನ ಎಲ್ಲ ಕತ್ತಲು.

3.ಪ್ರಕೃತಿಯ ವಿಸ್ಮಯದೊಳಗೂ ಕಳೆದು ಹೋಗಲು
ತಾಳ್ಮೆ ಇರಬೇಕು,
ತಂಗಾಳಿಯ ತಂಪು,
ಮಲ್ಲಿಗೆಯ ಕಂಪು,
ಜೊತೆಯಲ್ಲಿ ಮೂಡುವುದು ಬೆಳಕು.

4.ಮನಸು ಮಲ್ಲಿಗೆ,
ಸಹಜ ಚೆಲುವಿಗೆ.

5.ಬಾಡಿ ಉದುರುವ ಚಿಂತೆಯಿಲ್ಲದೇ ಅರಳಿ ನಳನಳಿಸಿದಂತೆ ಹೂವು,
ಸಾಗೋ ಮನುಜ ನೀನೂ
ಮರೆತು ಎಲ್ಲಾ ಕೊರಗು, ನೋವು.
ಯಾರ ಹಿಡಿತದಲ್ಲೂ ಇಲ್ಲ ಈ
ಹುಟ್ಟು, ಸಾವು,
ಇದ್ದಷ್ಟು ದಿನ ತುಂಬಿಕೊಂಡು
ಸಾಗು ನೀ
ಜೀವನ ಪ್ರೀತಿಯ ಒಲವು.

-ನಯನ ಬಜಕೂಡ್ಲು

    14 Comments on “ಹನಿ ಇಬ್ಬನಿ – ಅಂತರಂಗದ ಇನಿದನಿ

    1. ಅಂತೂ ನಮ್ಮ ಹವ್ಯಾಸದ ಗುಂಪಿಗೆ ಸೇರಿ ಬಿಟ್ಟಿರಿ.‌ ಬರೆಯಿರಿ ಹನಿಗವನ!

    2. ಸವಿಯಾದ ಭಾವಗಳುಳ್ಳ ಹನಿಗವನಗಳು..ಸೊಗಸಾಗಿವೆ.

    3. ಜೀವನ ಪ್ರೀತಿ ತುಂಬಿರುವ ಹನಿಗವನಗಳು ಚೆನ್ನಾಗಿವೆ… ನಯನಾ ಮೇಡಂ.

    4. ಹನಿಗವನಗಳು ಮರದ ಹನಿಯಂತಿವೆ ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನುವಂತೆ. ಓದಿ ಮುಗಿಸಿದ ಮೇಲೂ ಅವುಗಳ ಭಾವ ಪದೇಪದೇ ಕಾಡುತ್ತದೆ. ತುಂಬಾ ಚೆನ್ನಾಗಿ ಮೂಡಿ ಬಂದಿವೆ ನಯನ ಬಜಕೂಡ್ಲು ಮೇಡಂ

    Leave a Reply to Hema Mala Cancel reply

     Click this button or press Ctrl+G to toggle between Kannada and English

    Your email address will not be published. Required fields are marked *