ಹನಿ ಇಬ್ಬನಿ – ಅಂತರಂಗದ ಇನಿದನಿ
1.ಅಲೆಯೊಂದು ಸಾಕು
ಅಲ್ಲೋಲಕಲ್ಲೋಲಗೊಳ್ಳಲು
ನೀರ ಮೇಲಿನ ಪ್ರತಿಬಿಂಬ,
ಕಣ್ಣು ಮುಚ್ಚುವವರೆಗೂ ಶಾಶ್ವತ,
ಮನದ ಕಣ್ಣಲ್ಲೂ
ಆವರಿಸಿರುವ ಬಿಂಬ.
2.ಮೆಲ್ಲ ಮೆಲ್ಲನೆ ಜಗವನ್ನಾವರಿಸುವ ಬೆಳಕಿನ ಹೊನಲು,
ಬೆಳಗಿನ ಸಂಭ್ರಮದ ಜೊತೆಗೆ
ಮರೆಯಾಗುವುದು ಬದುಕಿನ ಎಲ್ಲ ಕತ್ತಲು.
3.ಪ್ರಕೃತಿಯ ವಿಸ್ಮಯದೊಳಗೂ ಕಳೆದು ಹೋಗಲು
ತಾಳ್ಮೆ ಇರಬೇಕು,
ತಂಗಾಳಿಯ ತಂಪು,
ಮಲ್ಲಿಗೆಯ ಕಂಪು,
ಜೊತೆಯಲ್ಲಿ ಮೂಡುವುದು ಬೆಳಕು.
4.ಮನಸು ಮಲ್ಲಿಗೆ,
ಸಹಜ ಚೆಲುವಿಗೆ.
5.ಬಾಡಿ ಉದುರುವ ಚಿಂತೆಯಿಲ್ಲದೇ ಅರಳಿ ನಳನಳಿಸಿದಂತೆ ಹೂವು,
ಸಾಗೋ ಮನುಜ ನೀನೂ
ಮರೆತು ಎಲ್ಲಾ ಕೊರಗು, ನೋವು.
ಯಾರ ಹಿಡಿತದಲ್ಲೂ ಇಲ್ಲ ಈ
ಹುಟ್ಟು, ಸಾವು,
ಇದ್ದಷ್ಟು ದಿನ ತುಂಬಿಕೊಂಡು
ಸಾಗು ನೀ
ಜೀವನ ಪ್ರೀತಿಯ ಒಲವು.
-ನಯನ ಬಜಕೂಡ್ಲು
ಸರಳ..ಸುಂದರ…ಕವನ..ಚೆನ್ನಾಗಿದೆ.
ನಯನ ಮೇಡಂ
ಧನ್ಯವಾದಗಳು ಮೇಡಂ
ಅಂತೂ ನಮ್ಮ ಹವ್ಯಾಸದ ಗುಂಪಿಗೆ ಸೇರಿ ಬಿಟ್ಟಿರಿ. ಬರೆಯಿರಿ ಹನಿಗವನ!
ಧನ್ಯವಾದಗಳು ಸರ್
ಸವಿಯಾದ ಭಾವಗಳುಳ್ಳ ಹನಿಗವನಗಳು..ಸೊಗಸಾಗಿವೆ.
ಧನ್ಯವಾದಗಳು ಅಕ್ಕ
ಚಂದದ ಕವನಗಳು
ಧನ್ಯವಾದಗಳು ಮೇಡಂ
ಚಂದದ ಹನಿಗವನಗಳು
ಧನ್ಯವಾದಗಳು ಮೇಡಂ
ಜೀವನ ಪ್ರೀತಿ ತುಂಬಿರುವ ಹನಿಗವನಗಳು ಚೆನ್ನಾಗಿವೆ… ನಯನಾ ಮೇಡಂ.
ಧನ್ಯವಾದಗಳು ಮೇಡಂ.
ಕೊನೆಯ ಸಾಲುಗಳು ಅತೀ ಸುಂದರ
ಹನಿಗವನಗಳು ಮರದ ಹನಿಯಂತಿವೆ ಮಳೆ ನಿಂತರೂ ಮರದ ಹನಿ ನಿಲ್ಲಲ್ಲ ಅನ್ನುವಂತೆ. ಓದಿ ಮುಗಿಸಿದ ಮೇಲೂ ಅವುಗಳ ಭಾವ ಪದೇಪದೇ ಕಾಡುತ್ತದೆ. ತುಂಬಾ ಚೆನ್ನಾಗಿ ಮೂಡಿ ಬಂದಿವೆ ನಯನ ಬಜಕೂಡ್ಲು ಮೇಡಂ