ಉಳಿದ ಸಾಲೊಂದ
ಓದದೇ ಉಳಿದ ಸಾಲೊಂದ
ಇನ್ನೂ ಓದಬೇಕಿದೆ
ಆಡದೇ ಉಳಿದ ಮಾತೊಂದ
ಕೂತು ಆಡಬೇಕಿದೆ
ಎಂದೂ ಕೇಳದ ಕಥೆಯೊಂದ
ಪಾತ್ರವಾಗಿ ನೋಡಬೇಕಿದೆ
ಎಂದೂ ಬಿಡಿಸದ ಚಿತ್ರವೊಂದ
ನಾವೇ ಬಿಡಿಸಬೇಕಿದೆ
ಮತ್ತೆ ಬರುವ ಮಳೆಗೆ
ಸುಮ್ಮನೆ ಕಾಯಬೇಕಿದೆ
ಬೀಸುವ ಚಳಿಗಾಳಿಗೆ
ತಲೆ ಎತ್ತಿ ನಿಲ್ಲಬೇಕಿದೆ
ಸುಡುವ ಬಿಸಿಲಿಗೆ
ಮರದ ನೆರಳು ಬೇಕಿದೆ
ದುಡಿವ ಅರಿವಲ್ಲಿ
ಬೆವರು ದಣಿಯಬೇಕಿದೆ
ಹಸಿರು ಬೇರಲ್ಲಿ
ಉಸಿರು ಕಾಯಬೇಕಿದೆ
ಪ್ರೀತಿ ಒಲವಲ್ಲಿ
ದಿನವ ಕಳೆಯಬೇಕಿದೆ.
-ನಾಗರಾಜ ಬಿ.ನಾಯ್ಕ, ಕುಮಟಾ
Supar nagu ಅದ್ಭುತವಾದ ಕವನ ಚೆನ್ನಾಗಿದೆ ಬೆಳೆಯಗ ಸಿರಿ ಮೊಳಕೆಯಲ್ಲಿ ಅನ್ನುವಂತೆ ಭವಿಷ್ಯದಲ್ಲಿ ಚೆನ್ನಾಗಿದೆ ಮುಂದುವರೆಸು
ತಮ್ಮ ಓದಿಗೆ ಧನ್ಯವಾದಗಳು
ಭವಿಷ್ಯತ್ನತಿನ ಕನಸುಗಳನ್ನು ನನಸಾಗಿಸುವ ಸಂದೇಶ ಹೊತ್ತ ಅರ್ಥಪೂರ್ಣವಾದ ಕವನ
ವಂದನೆಗಳು
ನಿಜ, ಕಾಯಬೇಕಿದೆ……!
〽️
ವಾವ್ ತುಂಬಾ ಅರ್ಥಪೂರ್ಣ ವಾದ ಕವನ ಸಾರ್..
ತಮ್ಮ ಓದಿಗೆ ಧನ್ಯವಾದಗಳು
ಮುಕ್ತಕಗಳಂತೆ ಇರುವ ನಾಲ್ಕು ನಾಲ್ಕು ಸಾಲುಗಳು ಅರ್ಥಪೂರ್ಣ ಆಗಿವೆ!
ಓದಿಗೆ ಹಾಗೂ ಪ್ರತಿಕ್ರಿಯೆಗೆ ತುಂಬಾ ತುಂಬಾ ಧನ್ಯವಾದಗಳು
ಕ್ಲಿಷ್ಟಕರ ಬದುಕನ್ನು ಎದುರಿಸುವ ಮಾರ್ಗವನ್ನು ಸುಲಲಿತಗೊಳಿಸುವ ಮಾನಸಿಕ ಸಿದ್ಧತೆ ಎದ್ದು ಕಾಣುವ ಕವನ ಚೆನ್ನಾಗಿದೆ.
ಓದಿಗೆ ತುಂಬಾ ತುಂಬಾ ಧನ್ಯವಾದಗಳು
ಸೂಪರ್ ಸರ್.
ಅಭಿನಂದನೆಗಳು.
ಧನ್ಯವಾದಗಳು ತಮ್ಮ ಓದಿಗೆ
ಬದುಕು ಭಾವನೆಗಳ ಬೆಸೆಯುತ್ತ ಸಾಗುವ ಕವಿತೆ, ಮನಸಿನೊಳಗೆ ಇಣುಕಿ ನೋಡುತ್ತಾ ಸಾಗುತ್ತದೆ. ಬದುಕಿನಲಿ ಪ್ರೀತಿ ಒಲವು ತುಂಬಿರಲಿ ಎಂದು ಬಯಸುವ ಕವಿತೆ ತುಂಬ ಚೆನ್ನಾಗಿದೆ..
ನಾನಾ ಬಾಡ
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಆತ್ಮೀಯ ಪ್ರತಿಕ್ರಿಯೆಗೆ
ಬದುಕಿನಲ್ಲಿ ಮಾಡಬೇಕಿರುವುಗಳ ಅರಿವಿದ್ದರೆ ನಡೆವ ಹಾದಿಯನ್ನು ಸುಲಲಿತವಾಗಿ ಕ್ರಯಿಸಬಹುದು. ಅರ್ಥವತ್ತಾದ ಕವನ.
ಧನ್ಯವಾದಗಳು ತಮ್ಮ ಓದಿಗೆ
Beautiful.
ಧನ್ಯವಾದಗಳು ತಮ್ಮ ಓದಿಗೆ
ಸುಂದರ ಪ್ರತೀಕ್ಷೆಯ ಕವನ ಸಾಲುಗಳು
ಧನ್ಯವಾದಗಳು
ಓದಿಗೆ ಧನ್ಯವಾದಗಳು