ಧೂರಿಯನ್
ಪುಟ್ಟ ಹಲಸಿನಕಾಯಿಯನ್ನು ಸುಮಾರಾಗಿ ಹೋಲುವ, ಮೊನಚಾದ ಮುಳ್ಳುಗಳನ್ನು ಹೊಂದಿರುವ ಈ ಹಣ್ಣಿನ ಹೆಸರು ‘ಧೂರಿಯನ್’. ಮಲೇಶಿಯಾ, ಸಿಂಗಾಪುರ, ಥೈಲಾಂಡ್ ಇತ್ಯಾದಿ ದೇಶಗಳಲ್ಲಿ ‘ಹಣ್ಣಿನ ರಾಜ’ ಎಂಬ ಹೆಗ್ಗಳಿಕೆ ಇದಕ್ಕಿದೆ. ಇದಕ್ಕೆ ಗಾಢವಾದ ಪರಿಮಳ ಅಥವಾ ವಾಸನೆ ಇರುವುದರಿಂದ ಕೆಲವರು ಇಷ್ಟ ಪಟ್ಟು ತಿಂದರೆ, ಇನ್ನು ಕೆಲವರು ತಿನ್ನುವ ಮನಸ್ಸು ಮಾಡುವುದಿಲ್ಲ.
ಹಲಸಿನಕಾಯಿಯಿಂದ ವಿವಿಧ ತಿಂಡಿಗಳನ್ನು ತಯಾರಿಸುವಂತೆ ಧೂರಿಯನ್ ನಿಂದಲೂ ತಯಾರಿಸುತ್ತಾರೆ. ತೆಳು ಹಳದಿ ಬಣ್ಣದಿಂದ ಹಿಡಿದು ಕೆಂಪು ಬಣ್ಣದ ವರೆಗೂ ಇರುವ ಧೂರಿಯನ್ 30 ಕ್ಕೂ ಹೆಚ್ಚು ಪ್ರಭೇದಗಳಲ್ಲಿ ದೊರೆಯುತ್ತದೆಯಂತೆ.
ಅಲ್ಲಿನ ವಿಮಾನಗಳಲ್ಲಿ, ಕೆಲವು ಹೋಟೆಲ್ ಗಳಲ್ಲಿ, ಧೂರಿಯನ್ ಗೆ ಪ್ರವೇಶವಿಲ್ಲ ಎಂಬ ಸೂಚನೆಯಿರುತ್ತದೆ.
– ಹೇಮಮಾಲಾ.ಬಿ
Daily nodthini but name eanantha gothirlilla in Thailand
LOOKS LIKE ‘HEBBELASU’
ತುಂಬ ಚನಾಗಿದೆ ತಿನಲು ಮನಸ್ಸು ಆಗಿದೆ
ಹೊಸತಾಗಿ ನನಗೊಂದು ಹಣ್ಣಿನ ಪರಿಚಯವಾಯ್ತು