ತೆರೆ ಅಳಿಸಿದ ಹೆಜ್ಜೆ
ಕಡಲ ದಂಡೆ ಉದ್ದಕ್ಕೂ
ಬಿಳಿ ಮರಳ ರಾಶಿ
ಇಟ್ಟ ಹೆಜ್ಜೆಯೆಲ್ಲಾ ಅಚ್ಚಾಗಿ
ಪ್ರಸ್ತುತಿ ಚಿತ್ರದಂತೆ
ಒಮ್ಮೊಮ್ಮೆ ಹೆಜ್ಜೆಗಳು
ಕಾಣುವುದೇ ಇಲ್ಲ
ತೆರೆ ಅಳಿಸಿದ ಹೆಜ್ಜೆಯ
ಗುರುತೇ ಸಿಗುವುದಿಲ್ಲ
ಅವನಲ್ಲಿ ಅವಳ ಹೆಜ್ಜೆ
ಅವಳಲ್ಲಿ ಅವನ ಹೆಜ್ಜೆ
ಎಷ್ಟು ಚೆಂದ ಹೆಜ್ಜೆ ಗುರುತು
ಬಿಳಿ ಮರಳ ಒಡಲಲ್ಲಿ
ಸ್ವಲ್ಪ ಸಮಯ ಅಷ್ಟೇ
ಅದರ ನಿಲುವು
ತೆರೆ ಬರುವ ತನಕ ಮಾತ್ರ
ಕೈ ಹಿಡಿದ ಗುರುತು
ಕಾಣದು ಹೆಜ್ಜೆಯಂತೆ
ವಾಸ್ತವಕ್ಕೆ ನೂರು ಹೆಜ್ಜೆಗಳು
ಮನದಲ್ಲಿ ಕನಸಲ್ಲಿ
ಅಲ್ಲೆಲ್ಲಾ ಒಂದು ಸೂತ್ರದ
ನಂಬಿಕೆಯಲ್ಲಿ ಸ್ಥಿರವಾಗಿ
ಕಾಣದ ಹೆಜ್ಜೆಗಳಲ್ಲಿ
ನಡೆದ ಹೆಜ್ಜೆಯ ಗುರುತು
ಗೆಜ್ಜೆಯ ದನಿಯ ಜೊತೆ
ಇರುವ ದೃಢತೆ ಅದರದ್ದು
ನಡೆವ ನಡಿಗೆ ನಮ್ಮದೇ
ಹೆಜ್ಜೆಯೂ ನಮ್ಮದೇ
ಆದರೆ ಗುರುತು ಮಾತ್ರ
ಮಣ್ಣಿನದ್ದು ಕಾಯಕದ್ದು
ಬದುಕುಳಿಯುವ ಭಾವದ್ದು.
-ನಾಗರಾಜ ಬಿ.ನಾಯ್ಕ , ಕುಮಟಾ
ಹೊರನೋಟಕ್ಕೆ ಸಾಮಾನ್ಯ ಸಾಲುಗಳಂತೆ ಕಾಣುವ ಈ ಕವನದೊಳಗೆ ಅಮೂರ್ತದ ಯಾವುದೋ ಒಂದು ಭಾವ ಮಿಸುಕಾಡುತ್ತಿದೆ.
ಧನ್ಯವಾದಗಳು ತಮ್ಮ ಓದಿಗೆ…….
ತುಂಬಾ ಅರ್ಥಪೂರ್ಣವಾದ ಕವನ..ಹೆಜ್ಜೆಯು ನಮ್ಮದೇ…ಬದುಕುಳಿಯುವ ಭಾವದ್ದು…ಕೊನೆಯ ಸಾಲುಗಳು ಚಿಂತನೆಗೆ ಹಚ್ಚುವಂತಿದೆ..ಧನ್ಯವಾದಗಳು ಸಾರ್
ಧನ್ಯವಾದಗಳು ತಮ್ಮ ಆಪ್ತ ಓದಿಗೆ,
ಒಳ್ಳೆಯ ಕಾಯಕದಲ್ಲೂರಿದ ನಮ್ಮದೇ ಹೆಜ್ಜೆಯ ಗುರುತನ್ನು ಮಣ್ಣಿನಲ್ಲಿ ಮಣ್ಣಿನಲ್ಲಿ ಅಚ್ಚಳಿಯದೇ ಉಳಿವ ಭಾವದ್ದಾದರೆ ಬದುಕು ಸಾರ್ಥಕ. ಸೊಗಸಾದ ಅರ್ಥಪೂರ್ಣ ಕವಿತೆ.
ಧನ್ಯವಾದಗಳು ತಮ್ಮ ಓದುವ ಆಪ್ತತೆಗೆ…..
ಸೊಗಸಾಗಿದೆ ಕವನ
ಧನ್ಯವಾದಗಳು ತಮ್ಮ ಓದಿಗೆ
ನಿಜ, ಹೆಜ್ಜೆ ನಮ್ಮದು, ಗುರುತು ಬದುಕುಳಿಯುವ ಭಾವದ್ದು!
ಧನ್ಯವಾದಗಳು ತಮ್ಮ ಓದಿಗೆ……
ಅಳಿಯುವಂತಹ ಮರಳ ಮೇಲಿನ ಹೆಜ್ಜೆ ಗುರುತುಗಳು…
ಅಳಿಸಲಾರದ ಬದುಕಿನ ಭಾವದ ಹೆಜ್ಜೆ ಗುರುತುಗಳು… ನಿಗೂಡಾರ್ಥ ಹೊತ್ತ ಕವನ ವಿಶೇಷವೆನಿಸಿತು.
ತಮ್ಮ ಓದಿಗೆ ಧನ್ಯವಾದಗಳು…..
Modlu tumba honne mara ittu. Iga maddigoo ondu sigalla. Tumba chennagi moodi bandide.
ಆಪ್ತ ಓದಿಗೆ ಧನ್ಯವಾದಗಳು