ಥೀಮ್-ಬರಹ - ಬೆಳಕು-ಬಳ್ಳಿ

ಸಾಕಪ್ಪಾ ಸಾಕು

Share Button

ಮನೆಯಲ್ಲಿದ್ದಾಗಲೂ ಧರಿಸುತ್ತೇನೆ ಕಪ್ಪು ಕನ್ನಡಕ 
ನನ್ನ ಮನಸ್ಥಿತಿಗೆ ಹೊಂದುವಂತೆ 
ಬಿಟ್ಟುಬಿಟ್ಟಿದ್ದೇನೆ ಸಿಹಿತಿಂಡಿಗಳಿಗೆ ಸಕ್ಕರೆ ಹಾಕುವುದನ್ನೇ
ನನ್ನದೊಂದು ತರಹ ಮನೆಯೊಳಗಣ ಆಕ್ರೋಶ 

ಇದನ್ನು ನಾ ಕಲಿತೆ ಅಮ್ಮನಿಂದ 
ಅದಕ್ಕೆ ಮುಂಚೆ ಅವಳು ಕಲಿತಿರಬಹುದು ಅವಳಮ್ಮನಿಂದ 

ಹೀಗೇ………
ಗ್ರೀಕರು ಇದಕ್ಕೆ ಒಂದು ಹೆಸರಿಟ್ಟಿರಬಹುದು 

ಈಗ ಜರ್ಮನರೂ ಸಹ 
ಹೆಚ್ಚು ಹೆಚ್ಚು ಅದರ ಬಗೆ ತಿಳಿಯುತ್ತಾ ಹೋದಷ್ಟು 

ಅವಳಂತರಂಗದೊಳಗಿನ ತುಮುಲಗಳ ಚರ್ಚಿಸಿದಷ್ಟೂ
ದೂರದಿಂದಲೇ ಅವಳದನ್ನು ಅರ್ಥಮಾಡಿಕೊಳ್ಳಬಹುದು 

ನನಗೆ ಗೊತ್ತಿರುವ ಎಲ್ಲ ಊರುಗಳ ಹೆಸರು ಹೇಳಿಬಿಡುತ್ತೇನೆ 
ಮೂಲೆಯಿಂದ ಖದೀಮ ಇರುವೆಯ ನೆರಳು
ಆವರಿಸುವುದ ಗಮನಿಸುತ್ತೇನೆ 

ನಮಗೆ ದಯಪಾಲಿಸಿದ ಜೀವನವನ್ನೇ ಪ್ರೀತಿಸಬೇಕೆ?
ಜೀವನದಿ ಕೊಟ್ಟ ಪಾತ್ರವನ್ನು ಮಾತ್ರ ನಿರ್ವಹಿಸಬೇಕೆ? 

ಗಾಳಿ ಬೆಳಕು ಬೆಂಕಿ ಕಾಲ …..

ದೂರದಲ್ಲೆಲ್ಲೋ ರೈಲು ಕೂಗುವ ಶಬ್ದ ….
ಒಂದಲ್ಲ ಒಂದು ದಿನ ನಾ ಅದನೇರಿಯೇ ಸಿದ್ಧ 


ಇಂಗ್ಲಿಷ್ ಮೂಲ : ‘Enough’ by Suzane Buffam
ಭಾವಾನುವಾದ : ಸುಜಾತಾ ರವೀಶ್

3 Comments on “ಸಾಕಪ್ಪಾ ಸಾಕು

  1. ಆಂಗ್ಲ ಮೂಲ ಕವಿತೆಯ ಭಾವಾನುವಾದ ಬಹಳ ಚೆನ್ನಾಗಿ ಮೂಡಿಬಂದಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *