ನಿಲ್ಲದ ಹೋರಾಟ

Share Button

ಸುತ್ತಲೂ ಕಾರ್ಗತ್ತಲೆ ತುಂಬಿರಲು
ಬೆಳಕನ್ನು ನುಂಗಿ ಅಂಧಕಾರ ಮೆರೆಯುತ್ತಿರಲು

ಭರವಸೆಯ ಕಿರಣಗಳೇ ಮರೆಯಾಗಿ ಕಾರ್ಮೋಡ ಕವಿದಿರಲು
ಗುಡುಗು ಮಿಂಚುಗಳ ನಡುವೆ ಸುಳಿಗಾಳಿ ಬೀಸುತಿರಲು

ಒಬ್ಬಂಟಿಯಾಗಿ ಈ ಕತ್ತಲೆ ದೂರಮಾಡಲು ಬೆಳಗುತಿರುವೆ
ನನ್ನ ನಾನು ಕರಗಿಸಿಕೊಂಡು ಉರಿಯುತ್ತಿರುವೆ

ಕಡು ಕತ್ತಲಿನ ಕೂಡ ಯುದ್ಧದಲ್ಲಿ ತೊಡಗಿಕೊಂಡಿರುವೆ
ಅತಿ ಸಣ್ಣ ಮೊಂಬತ್ತಿಯೆಂಬ ಕೀಳರಿಮೆ ಎನಗಿಲ್ಲ

ಈ ಕಾಳಗದಲ್ಲಿ ಪಾಲ್ಗೊಂಡ ತೃಪ್ತಿ ಎನಿಗಿದೆಯೆಲ್ಲಾ
ಬೀಸುವ ಗಾಳಿಗೆ ಹೊಯ್ದಾಡುತಾ ಈ ಬದುಕು
ಮುನ್ನಡೆದಿದೆಯೆಲ್ಲಾ

ಉರಿಯಲು ಸಹಾಯ ಮಾಡುವ ಈ ಗಾಳಿಯೇ ಜೋರಾದರೆ ಅದೇ ಸಂಚಕಾರ ಎಂಬ ಅರಿವು ಎನಗಿದೆ
ಸುತ್ತ ಚೆಲ್ಲಿದ ಹೊಂಬೆಳಕು ಎನ್ನ ಹೋರಾಟದ ಕುರುಹುವಾಗಿದೆ

ಕಟ್ಟಕಡೆಯ ಕಣವಿರುವವರೆಗೆ ಬೆಳಗುತಾ ಸಾಗುವುದೇ ಧರ್ಮವಾಗಿದೆ

– ಕೆ.ಎಂ ಶರಣಬಸವೇಶ 

4 Responses

  1. ಅರ್ಥಪೂರ್ಣ ವಾದ ಕವನ..ಸಾರ್… ಚೆನ್ನಾಗಿದೆ.

  2. ನಯನ ಬಜಕೂಡ್ಲು says:

    ಸುಂದರವಾಗಿದೆ ಕವನ

  3. ಶಂಕರಿ ಶರ್ಮ says:

    ಮೊಂಬತ್ತಿಯ ಸ್ವಗತವು ಕವನ ರೂಪದಲ್ಲಿ ಚೆನ್ನಾಗಿ ಮೂಡಿ ಬಂದಿದೆ.

  4. ಪದ್ಮಾ ಆನಂದ್ says:

    ಚಿಕ್ಕದಾದರೂ ಚಿಕ್ಕವಾದ ಮೇಣದಬತ್ತಿಯ ಮನೋಭಾವ ಹಲವರಿಗೆ ದಾರಿದೀಪವಾಗಬಹುದು. ಸುಂದರ ಕವನ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: