ವಾಟ್ಸಾಪ್ ಕಥೆ 36: ಸ್ವಾಭಿಮಾನಿಗಳಾಗಿ ಬದುಕಬೇಕು.
ಸ್ವಾಮಿ ವಿವೇಕಾನಂದರ ಪರಮಶಿಷ್ಯರಾದ ಸೋದರಿ ನಿವೇದಿತಾ ತಮ್ಮ ಗುರುಗಳ ಆಶಯದಂತೆ ಬಾಲಕಿಯರಿಗಾಗಿ ಸ್ವದೇಶಿ ಚಿಂತನೆಯುಳ್ಳ ಶಾಲೆಯೊಂದನ್ನು ಆರಂಭಿಸಿದರು. ಆದರೆ ಅದನ್ನು ಮುನ್ನಡೆಸಲು ನಿವೇದಿತಾರಿಗೆ ಅಲ್ಪಕಾಲದಲ್ಲಿಯೇ ಆರ್ಥಿಕ ಸಂಕಷ್ಟ ಎದುರಾಯಿತು. ಆ ಸಮಯದಲ್ಲಿ ಕಾಶ್ಮೀರದ ಮಹಾರಾಜರು ಕಿಂಚಿತ್ತು ಧನಸಹಾಯ ಮಾಡಿದರಾದರೂ ಅದು ನಾಲ್ಕೈದು ತಿಂಗಳ ನಿರ್ವಹಣೆಗಷ್ಟೇ ಸಾಕಾಯಿತು. ಮುಂದೇನು ಮಾಡಬೇಕೆಂದು ಚಿಂತಿಸುತ್ತಲೇ ತಾವು ನಂಬಿದ್ದ ದೈವ ಹಾಗೂ ತಮ್ಮ ಪರಿಶ್ರಮದ ಮೇಲೆ ಭಾರಹಾಕಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹೀಗಿರುವಾಗ ಒಮ್ಮೆ ನಿವೇದಿತಾರವರ ಶ್ರೀಮಂತ ಗೆಳತಿಯೊಬ್ಬಳು ಅವರನ್ನು ಭೇಟಿಯಾಗಲು ಭಾರತಕ್ಕೆ ಬಂದರು. ಅವರು ಶಾಲೆಯ ಬಗ್ಗೆ ಕೇಳಿ ತಿಳಿದುಕೊಂಡು ತನ್ನೆಲ್ಲ ಸಂಪತ್ತನ್ನು ಅವರ ಶಾಲೆಗಾಗಿ ಧಾರೆಯೆರಯುವುದಾಗಿ ತಿಳಿಸಿದರು. ಆ ಕ್ಷಣಕ್ಕೆ ನಿವೇದಿತಾರಿಗೆ ಆದ ಸಂತಸಕ್ಕೆ ಪಾರವೇ ಇರಲಿಲ್ಲ. ಕಷ್ಟಕಾಲದಲ್ಲಿ ಅದು ಒದಗಿಬಂದ ಸೌಭಾಗ್ಯವಾಗಿತ್ತು. ಆದರೆ ಗೆಳತಿಯದೊಂದು ನಿಬಂಧನೆಯಿತ್ತು. ಶಾಲೆಯ ಶಿಕ್ಷಣ ಕ್ರಮವನ್ನು ಆಂಗ್ಲ ಪದ್ಧತಿಗೆ ಬದಲಾಯಿಸಬೇಕೆಂಬುದು. ಇದನ್ನು ಕೇಳಿದ ನಿವೇದಿತಾರ ಹುಮ್ಮಸ್ಸು ಒಮ್ಮೆಗೇ ಕುಸಿಯಿತು.
ಅವರು ”ನಿನ್ನ ಬಿಡಿಗಾಸೂ ನನಗೆ ಬೇಡ. ಶಿಕ್ಷಣ ಪದ್ಧತಿಯನ್ನು ಯಾವುದೇ ಕಾರಣಕ್ಕಾಗಿ ಬದಲಿಸಲಾರೆ. ನಾನು ಆರಾಧಿಸುವ ಕಾಳಿಮಾತೆಯೇ ನನ್ನ ಕೈಹಿಡಿಯುತ್ತಾಳೆ ಎಂಬ ನಂಬಿಕೆ ನನಗಿದೆ” ಎಂದು ಅಚಲವಾದ ದನಿಯಲ್ಲಿ ಗೆಳತಿಯ ಸಹಾಯವನ್ನು ನಿರಾಕರಿಸಿದರು.
ಎಷ್ಟೋಸಲ ಯಾವುದೋ ಕಾರ್ಯವನ್ನು ಮಾಡಬೇಕಾದರೆ ಹಣ, ಅಂತಸ್ತು, ಅಧಿಕಾರ ಹೀಗೆ ಬಗೆಬಗೆಯ ಪ್ರಲೋಭನೆಗಳಿಗೆ ಒಳಗಾಗುತ್ತೇವೆ. ಹೀಗಾದಾಗಲೆಲ್ಲ ನಮ್ಮ ಸ್ವಂತಿಕೆಯನ್ನು ಕಳೆದುಕೊಂಡು ಕೊನೆಗೆ ನಮ್ಮ ಕಾರ್ಯಕ್ರಮದ ಯಶಸ್ಸನ್ನೂ ಇತರರಿಗೆ ಬಿಟ್ಟುಕೊಡಬೇಕಾಗುತ್ತದೆ. ತನ್ನ ಹೊಟ್ಟೆಯನ್ನಷ್ಟೇ ತುಂಬಿಸಿಕೊಳ್ಳುವ ಚಿಕ್ಕಜಂತು ಕೂಡ ಸ್ವಾಭಿಮಾನವನ್ನು ಬಿಟ್ಟು ಬದುಕದು.
ಹೀಗಿರುವಾಗ ಲೊಕೋಪಕಾರ ಮಾಡಬಯಸುವ ಮನುಷ್ಯರು ನಾವು ಪರರ ಹಂಗಿನಲ್ಲಿ ಬಾಳಿದರೆ ಬದುಕಿಗೆ ಮೌಲ್ಯವೆಲ್ಲಿರುತ್ತದೆ.
ಉದ್ದೇಶಿತ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕಾದರೆ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬೇಕಾದ್ದು ಅನಿವಾರ್ಯ. ಸ್ವಾಭಿಮಾನ ನಮಗೆ ಸ್ವಾಯತ್ತತೆ, ಸಬಲತೆ, ಪರಿಪೂರ್ಣತೆಗಳನ್ನು ತಂದುಕೊಡುತ್ತದೆ. ಇದನ್ನು ನಾವು ಯಾವಾಗಲೂ ಮರೆಯಬಾರದು.
ವಾಟ್ಸಾಪ್ ಕಥೆಗಳು
ಸಂಗ್ರಹ : ಬಿ.ಆರ್ ನಾಗರತ್ನ, ಮೈಸೂರು
ಸ್ವಾವಲಂಬಿ ಬದುಕಿಗೆ ಪೂರಕವಾದ ಚಂದದ ಕಥೆ
ವಂದನೆಗಳು
Very nice
ಧನ್ಯವಾದಗಳು ನಯನಮೇಡಂ
ಧನ್ಯವಾದಗಳು ಗಾಯತ್ರಿ ಮೇಡಂ
ಸಮಾಜ ಸೇವೆ ಮತ್ತು ಸ್ವಾಭಿಮಾನ ಎರಡರ ಕುರಿತೂ ಬೆಳಕು ಚೆಲ್ಲುವ ಸುಂದರ ಕಥೆ.
ಧನ್ಯವಾದಗಳು ಪದ್ಮಾ ಮೇಡಂ
ಯಾವುದೇ ಪ್ರಲೋಭನೆಗೆ ಒಳಗಾಗದೆ, ಸ್ವಾಭಿಮಾನದಿಂದ ನಡೆದ ಸೋದರಿ ನಿವೇದಿತಾ ಅವರ ಪುಟ್ಟ ಕಥೆ ಮನತಟ್ಟಿತು…ಧನ್ಯವಾದಗಳು ನಾಗರತ್ನ ಮೇಡಂ.
ವಂದನೆಗಳು ಶಂಕರಿ ಮೇಡಂ