ಜೋಡಿ ಸಮಸ್ಯೆಗಳ ಪರಿಹಾರಕ್ಕೆ ಏಕೈಕ ಮಂತ್ರ ಹಸಿರು ಜಲಜನಕ
ಪರಿಸರ ಮಾಲಿನ್ಯ ತಡೆಯುವ, ಪಳೆಯುಳಿಕೆ ಆಧರಿಸಿದ ತೈಲ ಬಳಕೆ ಕಡಿಮೆ ಮಾಡುವ ತಂತ್ರದ ಹಿನ್ನೆಲೆಯಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ಮೋದಿ ಘೋಷಿಸಿರುವ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಬಹಳ ಮಹತ್ವ ಪಡೆದಿದೆ. ಈ ಮಿಷನ್ ಅಡಿ ಭಾರತವನ್ನು ಹಸಿರು ಜಲಜನಕ ಕ್ಷೇತ್ರದಲ್ಲಿ ಗ್ಲೋಬಲ್ ಹಬ್ ಮಾಡುವ ಗುರಿಯಿದೆ. ಈ ಮೊದಲು ಕೂಡ ಮೋದಿ ಅವರು ಹಸಿರು ಇಂಧನ ಭವಿಷ್ಯದ ಇಂಧನ ಎಂದು ಹೇಳಿರುವುದು ಇಲ್ಲಿ ಗಮನಾರ್ಹ. ಗ್ರೀನ್ ಎನರ್ಜಿ ಉತ್ತೇಜಿಸುವುದರಿಂದ, ಭಾರತವನ್ನು ಸ್ವಾವಲಂಬಿ ಮಾಡುವಲ್ಲಿ ಇದು ದೊಡ್ಡ ನೆರವು ನೀಡಲಿದೆ. ಇದರಿಂದ ಕಚ್ಛಾ ತೈಲದ ಆಮದಿನ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಭಾರತದಲ್ಲಿನ ಪೆಟ್ರೋಲ್ ಮತ್ತು ಡೀಸಲ್ ಬೇಡಿಕೆ ಕಡಿಮೆಯಾಗಲಿದೆ. ಹಸಿರು ಇಂಧನದ ಬಳಕೆಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ.ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಒಂದೇ ಕುಟುಂಬದಲ್ಲಿ ಮೂರರಿಂದ ನಾಲ್ಕು ಕಾರುಗಳನ್ನು ಹೊಂದಿದವರು ಸಾಮಾನ್ಯ ಜನರ ಜೊತೆಗಿದ್ದಾರೆ. ಆದರೆ, ಹೆಚ್ಚು ವಾಹನಗಳು ರಸ್ತೆಯಲ್ಲಿ ಸಂಚಾರದಿಂದ ವಾತಾವರಣದಲ್ಲಿನ ಗಾಳಿ ಕಲುಷಿತವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತರದೆ. ಇದರಿಂದ 2050 ರವೇಳೆಗೆ ಹೈಡ್ರೋಜನ್ ಇಂಧನ ಮಿಷನ್ನಾಗಿ ಕೇಂದ್ರವು 1,500 ಕೋಟಿ ರೂ ಖರ್ಚು ಮಾಡುತ್ತಿದೆ.
ಹೈಡ್ರೋಜನ್ ಯಾಕೆ ಬೇಕು? ಭಾರತದಲ್ಲಿ ವಿದ್ಯುತ್ತಾಗಿ ಹೆಚ್ಚಾಗಿ ಕಲ್ಲಿದ್ದಲು ಮೇಲೆ ಅವಲಂಬಿತವಾಗಿದೆ. ಇಷ್ಟು ದಿನ ನಡೆದುಕೊಂಡ ಬಂದಿದ್ದ ಹಾದಿ, ಹೈಡ್ರೋಜನ್ ಮಿಷನ್ನಿಂದ ಬದಲಾವಣೆ ಆಗಲಿದೆ. ಹೈಡ್ರೋಜನ್ ಮಿಷನ್ ಕಾರ್ಯರೂಪಕ್ಕೆ ಬಂದರೆ, ವಾಯು ಮಾಲಿನ್ಯ, ತೈಲ ದರ ಹೆಚ್ಚಳದ ಸಮಸ್ಯೆ ಇರುವುದಿಲ್ಲ. ಇದು ವಿಶ್ವದಲ್ಲಿ ಅತ್ಯಂತ ಹೇರಳವಾಗಿರುವ ಅಂಶವಾಗಿದೆ. ಪೆಟ್ರೋಲ್ ಅನ್ನು ಬಳಸುವುದಕ್ಕಿಂತ ಮೂರು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಸಾರಿಗೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ಅಲ್ಲದೇ ಉಕ್ಕು ಮತ್ತು ರಾಸಾಯನಿಕ ಕ್ಷೇತ್ರಗಳಿಗೂ ಹೈಡ್ರೋಜನ್ ಮಿಷನ್ನಿಂದ ಹಲವು ಲಾಭಗಳಿವೆ. ಹೈಡ್ರೋಜನ್‌ದಲ್ಲಿ ಅಲ್ಲಿ ಮೂರು ವಿಧಗಳಿವೆ. ಬೂದು ಬಣ್ಣದ ಹೈಡ್ರೋಜನ್, ನೀಲಿ ಬಣ್ಣದ ಹೈಡ್ರೋಜನ್ ಹಸಿರು ಹೈಡ್ರೋಜನ್.ರಾಷ್ಟ್ರೀಯ ಜಲಜನಕ ಮಿಶನ್ ೧೫-೮-೨೦೨೧ರಂದು ಆರಂಭವಾಯಿತು. ಇದರ ಉದ್ದೇಶ ಕಾರ್ಬನ್ ಹೊರಸೂಸುವಿಕೆ ಹಾಗೂ ನವೀಕೃತ ಇಂಧನ ಮೂಲಗಳ ಬಳಕೆ ಹೆಚ್ಚಿಸುವುದಾಗಿದೆ. ನೂತನ ಹಾಗೂ ನವೀಕೃತ ಇಂಧನ ಇಲಾಖೆ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಮಾರ್ಗದರ್ಶನ ಸೂತ್ರಗಳನ್ನು ಕೊಡುತ್ತದೆ. ಈ ಮಿಶನ್‌ದ ಗುರಿ ವರ್ಷಕ್ಕೆ ೫ ದಶಲಕ್ಷ ಮೆಟ್ರಿಕ್ ಟನ್ ಹಸಿರು ಜಲಜನಕ ಉತ್ಪಾದನಾ ಸಾಮರ್ಥ್ಯಕ್ಕೆ ಉತ್ತೇಜನ ನೀಡುವುದು. ಕ್ರಿ.ಶ ೨೦೩೦ರೊಳಗೆ ನವೀಕೃತ ಇಂಧನ ಉತ್ಪಾದನೆ ಸಾಮರ್ಥ್ಯವನ್ನು ೧೨೫ GW ರಷ್ಟು ಹೆಚ್ಚಿಸುವುದೇ ಇದರ ಪ್ರಧಾನ ಗುರಿ. ಈ ಉದ್ದೇಶಕ್ಕಾಗಿ ೨೦೩೦ ರೊಳಗೆ ೮ಲಕ್ಷ ಕೋಟಿ ರೂಪಾಯಿಗಳ ತೊಡಗಿಸುವಿಕೆ ಹಾಗೂ ೬ ಲಕ್ಷ ಉದ್ಯೋಗಿಗಳ ಸೃಷ್ಟಿಯಾಗುವ ಮಹಾನ್ ಇಚ್ಛಾ ಶಕ್ತಿಯಿದೆ. ಇದರಿಂದ ೨೦೩೦ರೊಳಗೆ ೧ ಲಕ್ಷ ಕೋಟಿ ರೂಪಾಯಿ ಮೌಲ್ಯದ ಫಾಸಿಲ್ ತೈಲ ಆಮದನ್ನು ಇಳಿಸಬಹುದು. ಅಲ್ಲದೇ ಪ್ರತೀವರ್ಷ ಹಸಿರು ಮನೆ ಅನಿಲ ಹೊರಸೂಸುವಿಕೆಯಿಂದ ಸುಮಾರು ೫೦ MMT ತಗ್ಗಿಸುವಿಕೆ ತಡೆಯಬಹುದಾಗಿದೆ. ಇದರ ಉದ್ದೇಶಿತ ಲಾಭಗಳೆಂದರೆ ಹಸಿರು ಜಲಜನಕದ ನಿರ್ಯಾತ, ಅವಕಾಶಗಳ ಸೃಷ್ಟಿ ಹಾಗೂ ಅದರ ಪೂರಕ ಲಾಭಗಳು.ಕೈಗಾರಿಕೆ, ಚಲನೆ ಹಾಗೂ ಇಂಧನ ವಿಭಾಗಗಳ ಇಂಗಾಲದ ಆಮ್ಲ ತಡೆಯುವುದು ಫಾಸಿಲ್ ತೈಲದ ಆಮದು ಹಾಗೂ ಫೀಡ್ ಬ್ಯಾಕ್ ಮೇಲಿನ ಅವಲಂಬನೆ ತಗ್ಗಿಸುವುದು ಸ್ಥಳೀಯ ಉತ್ಪಾದಕ ಸಾಧ್ಯತೆಗಳ ಅಭಿವೃದ್ಧಿ ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ತುತ್ತ ತುದಿಯ ತಂತ್ರಜ್ಞಾನಗಳ ಅಭಿವೃದ್ಧಿ. ಭವಿಷ್ಯದಲ್ಲಿ ಈ ಮಿಶನ್ ಬೇಡಿಕೆ ಸೃಷ್ಟಿ ಉತ್ಪಾದನೆ, ಬಳಕೆ ಹಾಗೂ ನಿರ್ಯಾತಕ್ಕೆ ಅನುಕೂಲ ಸೃಷ್ಟಿಸಲಿದೆ. ದೊಡ್ಡ ಪ್ರಮಾಣದ ಉತ್ಪಾದನೆ ಬಳಕೆ ಬೆಂಬಲಿಸುವ ಶಕ್ತಿಯಿರುವ ಪ್ರದೇಶಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಿದಾಗ ಹಸಿರು ಜಲಜನಕ ಪರ್ಯಾವರಣ ವ್ಯವಸ್ಥೆ ಹೈಡ್ರೋಜನ್ ಹಬ್‌ಗಳ ಸ್ಥಾಪನೆಯಾಗುವುದು. ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ ಸಾರ್ವಜನಿಕ ಹಾಗೂ ಖಾಸಗಿ ಪಾಲುದಾರಿಕೆಗೆ ಅವಕಾಶ ಕೊಡಲಾಗುವುದು. ಈ ಯೋಜನೆಗಳಲ್ಲಿ ಗುರಿ ಮೂಲದ, ಕಾಲಮಿತಿಯ ಕಾರ್ಯಾಚರೆಣೆಯಾಗಲು ವಿಶ್ವದ ಸ್ವರ್ಧಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲಾಯಿತು.
೨೦೨೨ರ ಮಧ್ಯದಲ್ಲಿ ದಾಮೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗದಲ್ಲಿ ಕೇಂದ್ರ ಪೆಟ್ರೋಲಿಯಂ ಹಾಗೂ ಸ್ವಾಭಾವಿಕ ಅನಿಲ ಖಾತೆಗಳ ಸಚಿವರಾದ ಹರದೀಪ್ ಸಿಂಗ್ ಪುರಿ ಹೇಳಿದಂತೆ ವಿಶ್ವದ ಸದ್ಯದ ಇಂಧನ ಬಿಕ್ಕಟ್ಟಿನ ಕಾಲದ ಲಾಭ ಪಡೆದು ಭಾರತ ಹಸಿರು ಜಲಜನಕ ಕ್ಷೇತ್ರದಲ್ಲಿ ಮುಂದಾಳವಾಗಿ ಎದ್ದು ನಿಲ್ಲಲಿದೆ ಎಂಬ ಮಾತು ಎಷ್ಟು ಆಶಾದಾಯಕ? ಇದಕ್ಕಾಗಿ ಕೇಂದ್ರ ಸರಕಾರ ೧೯೭೪೪ ಕೋಟಿ ರೂಪಾಯಿಗಳನ್ನು ಒಂದು ಯೋಜನೆ ಒಪ್ಪಿದೆ. ಇದರಲ್ಲಿ ೧೭೪೯೦ ಕೋಟಿ ರೂಪಾಯಿಗಳನ್ನು SIGHT ಕಾರ್ಯಕ್ರಮಕ್ಕೆ ಕೊಟ್ಟಿದೆ. ಜಲಜನಕ ಇಂಧನವನ್ನು ಅನಿಲವಾಗಿ ದ್ರವದ ರೂಪದಲ್ಲಿ ಬಳಸಬಹುದು. ಇದನ್ನು ವಿದ್ಯುಚ್ಛಕ್ತಿ ಅಥವಾ ಇಂಧನವಾಗಿ ಪರಿವರ್ತಿಸಬಹುದು. ಹಲವಾರು ಮಾರ್ಗಗಳಿವೆ. ಈಗಾಗಲೇ ವಿಶ್ವದಲ್ಲಿ ಸುಮಾರು ೭೦ ದಶಲಕ್ಷ ಮೆಟ್ರಿಕ್ ಟನ್ ಜಲಜನಕ ಪ್ರತೀವರ್ಷ ಉತ್ಪಾದನೆಯಾಗುತ್ತಿದೆ.ತೈಲ ಸಂಸ್ಕರಣೆ, ಅಮೋನಿಯಾ ಉತ್ಪತ್ತಿ, ಉಕ್ಕು ನಿರ್ಮಾಣ ರಾಸಾಯನಿಕ ಹಾಗೂ ಗೊಬ್ಬರ ಉತ್ಪಾದನೆ, ಆಹಾರ ಸಂಸ್ಕರಣೆ ಲೋಹಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಹಸಿರು ಜಲಜನಕದ ಬಳಕೆಯಾಗುತ್ತಲಿದೆ.ವಿಶ್ವದಲ್ಲಿ ಬೇರೆ ಮೂಲವಸ್ತುಗಳಿಗಿಂತ ಜಲಜನಕ ಹೆಚ್ಚು ಪ್ರಮಾಣದಲ್ಲಿದೆ. ಸುಮಾರು ಪ್ರತಿಶತ ೯೦ರಷ್ಟು ಅಣುಗಳು ಹೈಡ್ರೋಜನ್ ಆದರೆ ಪ್ರಕೃತಿಯಲ್ಲಿ ಇವು ತಾವೇ ತಾವಾಗಿ ಅಸ್ತಿತ್ವದಲ್ಲಿಲ್ಲ. ಜಲಜನಕದ ಉತ್ಪಾದನೆಗಾಗಿ ಇತರ ಯಾವ ಮೂಲ ವಸ್ತುಗಳೊಂದಿಗೆ ಇದು ಜೋಡಿಯಾಗಿದೆಯೋ ಅದನ್ನು ತೆರವುಗೊಳಿಸಬೇಕು. ನೀರು, ಸಸ್ಯ ಹಾಗೂ ಫಾಸಿಲ್ ತೈಲಗಳು ಇವುಗಳಿಂದ ಇದನ್ನು ಬೇರ್ಪಡಿಸಬೇಕು.ನೀರನ್ನು ಬೇರ್ಪಡಿಸಿದಾಗ ಜಲಜನಕ ಉತ್ಪತ್ತಿಯಾದಾಗ ಇದರ ಉಪ-ಉತ್ಪನ್ನ ಆಮ್ಲಜನಕ ವಿದ್ಯುಚ್ಛಕ್ತಿಯನ್ನು ಸೌರ ಹಾಗೂ ವಾಯು ಶಕ್ತಿಯಂತಹ ನವೀಕೃತ ಮೂಲದಿಂದ ಉತ್ಪಾದಿಸಿದರೆ ಮಾಲಿನ್ಯ ರಹಿತ ಜಲಜನಕವೇ ಹಸಿರು ಜಲಜನಕ. ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಮುಟ್ಟಲು ಹಸಿರು ಜಲಜನಕ ಅತ್ಯಾವಶ್ಯಕ. ಅನಿಯಮಿತ ಹಾಗೂ ಅಪರಿಮಿತ ಪೂರೈಕೆ ಲಭ್ಯವಿದೆ. ಉತ್ಪಾದನೆಯಾದಲ್ಲಿಯೇ ಅಥವಾ ಎಲ್ಲಿಗೆ ಬೇಕಾದರೂ ಇದನ್ನು ಟ್ರಾನ್ಸ್ ಪೋರ್ಟ್ ಮಾಡಬಹುದು. ಬ್ಯಾಟರಿಗಳು ದೊಡ್ಡ ಪ್ರಮಾಣದ ವಿದ್ಯುತ್ತನ್ನು ಬಹು ದೀರ್ಘ ಅವಧಿಗೆ ಕಾದಿರಿಸಲು ಅಶಕ್ತ ಹೆಚ್ಚು ಪ್ರಮಾಣದಲ್ಲಿರುವ ನವೀಕೃತ ಇಂಧನದಿಂದ ಜಲಜನಕ ಉತ್ಪಾಧಿಸಿ ಅತಿ ದೊಡ್ಡ ಪ್ರಮಾಣದಲ್ಲಿ ದೀರ್ಘ ಕಾಲದವರೆಗೆ ಸಂಗ್ರಹಿಸಿಡಬಹುದು.ಘಾಸಿಲ್ ತೈಲಕ್ಕೆ ಹೋಲಿಸಿದರೆ, ಜಲಜನಕ ೩ ಪಟ್ಟು ಹೆಚ್ಚು ಇಂಧನ ಹೊಂದಿದೆ. ಯಾವುದೇ ಕೆಲಸ ಮಾಡಲು ಇದರ ಕಡಿಮೆ ಪ್ರಮಾಣ ಸಾಕು.ಎಲ್ಲಿ ನೀರಿದೆಯೋ ಅಲ್ಲಿ ಇದನ್ನು ಉತ್ಪಾದಿಸಬಹುದು. ಹಾಗೂ ವಿದ್ಯುಚ್ಛಕ್ತಿ ಇದ್ದಲ್ಲಿ, ಹೆಚ್ಚಿನ ವಿದ್ಯುಚ್ಛಕ್ತಿ ಹಾಗೂ ಶಾಖ ಉತ್ಪಾದಿಸಲು, ಇದು ಸಹಾಯಕ ಎಂಬುದೇ ಇದರ ಹೆಗ್ಗಳಿಕೆ.
-ಎನ್.ವ್ಹಿ.ರಮೇಶ್ , ಮೈಸೂರು
ಮಾಹಿತಿ ಪೂರ್ಣ ಲೇಖನ…ಸಾರ್..
ಮಾಹಿತಿ ಪೂರ್ಣ ಲೇಖನ
ಮಾಹಿತಿ ಪೂರ್ಣ ಲೇಖನ …ಸರ್
ಈ ಇಂಧನದ ಉತ್ಪಾದನಾ ವೆಚ್ಚವು ಬಹಳ ಹೆಚ್ಚು ಎನ್ನುವ ಮಾತಿದೆ. ಇರಲಿ…ಒಳ್ಳೆಯ ಮಾಹಿತಿಯುಕ್ತ ಲೇಖನಕ್ಕಾಗಿ ವಂದನೆಗಳು ಸರ್.