ಪರಾಗ

ವಾಟ್ಸಾಪ್ ಕಥೆ 29: ಅವಸರದ ನಿರ್ಧಾರ.

Share Button

ಒಂದು ಮಗು ಎರಡು ಸೇಬು ಹಣ್ಣಗಳನ್ನಿಟ್ಟುಕೊಂಡು ಆಟವಾಡುತ್ತಿತ್ತು. ಅವರ ಅಮ್ಮ ಅದರ ಬಳಿಗೆ ಬಂದು ”ಪುಟ್ಟಾ ನಿನ್ನ ಬಳಿ ಎರಡು ಸೇಬು ಹಣ್ಣಿವೆ. ನನಗೂ ತಿನ್ನಬೇಕೆಂದು ಆಸೆ. ನನಗೊಂದು ಕೊಡುತ್ತೀಯಾ?” ಎಂದು ಕೇಳಿದಳು.

ಮಗು ತನ್ನ ಕೈಯಲ್ಲಿದ್ದ ಒಂದು ಸೇಬಿನ ಹಣ್ಣಿನಿಂದ ಒಂದು ಚೂರು ಕಚ್ಚಿ ತಿಂದಿತು. ಅಮ್ಮ ಇನ್ನೊಂದನ್ನು ತನಗೆ ಕೊಡ ಬಹುದೆಂದು ನಿರೀಕ್ಷಿಸಿದಳು. ಆದರೆ ಮಗು ಇನ್ನೊಂದು ಹಣ್ಣನ್ನೂ ಬಾಯಿಗಿಟ್ಟು ಅದರಿಂದಲೂ ಒಂದು ಚೂರು ಕಚ್ಚಿ ತಿಂದಿತು. ಆಗ ಅಮ್ಮನಿಗೆ ತುಂಬ ನಿರಾಸೆಯಾಯಿತು. ಆದರೂ ಬಲವಂತವಾಗಿ ಮುಖದ ನಗೆ ಮಾಸದಂತೆ ಇದ್ದಳು. ಕೂಡಲೇ ಮಗು ತನ್ನ ಎಡಗೈಯಲ್ಲಿದ್ದ ಹಣ್ಣನ್ನು ಅಮ್ಮನಿಗೆ ”ಕೊಡುತ್ತಾ ಅಮ್ಮಾ ಇದನ್ನು ನೀನು ತಿನ್ನು. ಇದು ಈ ಎರಡರಲ್ಲಿ ಹೆಚ್ಚು ಸಿಹಿಯಾಗಿದೆ. ನಾನು ಕಡಿಮೆ ಸಿಹಿಯಿರುವ ಹಣ್ಣನ್ನು ತಿನ್ನುತ್ತೇನೆ” ಎಂದಿತು.

ಅಮ್ಮನ ಕಣ್ಣುಗಳಲ್ಲಿ ಆನಂದಬಾಷ್ಪಗಳು ತುಂಬಿ ನಿಂತವು. ಮಗುವನ್ನು ಬರಸೆಳೆದು ಅಪ್ಪಿಕೊಂಡಳು. ಕೆನ್ನೆಗೆ ಮುತ್ತು ಕೊಟ್ಟು ”ಕಂದಾ ನಿನಗೆ ನನ್ನ ಮೇಲೆ ಎಷ್ಟೊಂದು ಪ್ರೀತಿ ಇದೆ” ಎಂದು ಪರವಶಳಾದಳು.

ವಾಟ್ಸಾಪ್ ಕಥೆಗಳು
ಸಂಗ್ರಹ ಬಿ.ಆರ್ ನಾಗರತ್ನ, ಮೈಸೂರು

11 Comments on “ವಾಟ್ಸಾಪ್ ಕಥೆ 29: ಅವಸರದ ನಿರ್ಧಾರ.

  1. ಮನಮುಟ್ಟುವ ಪುಟ್ಟ ಕಥೆಯೊಂದಿಗಿನ ಚಂದದ ಸೂಕ್ತ ರೇಖಾಚಿತ್ರ ಮನತುಂಬಿತು.. ನಾಗರತ್ನ ಮೇಡಂ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *