ಋಣ
ನಾ ಹೇಗೆ ತೀರಿಸಲಿ
ನನ್ನವರ ಪ್ರೀತಿಯ ಋಣವಾ
ಹಾದಿಯಲ್ಲಿ ಕಾಣದೆ
ನಾ ಎಡವಿದಾಗ
ಕೈ ಹಿಡಿದು, ಎಬ್ಬಿಸಿ,ನಿಲ್ಲಿಸಿದವರಾ
ಮುಂದಿನ ದಾರಿಯ ತೋರಿದವರಾ
ಪ್ರೀತಿಯ ಋಣವಾ
ನಾ ಹೇಗೆ ತೀರಿಸಲಿ,,,,,,!
ಯಾರೋ ಗೀರಿದ ಗಾಯಗಳಿಗೆ
ಪ್ರೀತಿಯ ಮುಲಾಮು ಹಚ್ಚಿದವರಾ
ನೋವ ಕಂಬನಿಯ ಒರೆಸಿದವರಾ
ದುಃಖವ ಮರೆಸಿದವರಾ
ಪ್ರೀತಿಯ ಋಣವಾ
ನಾ ಹೇಗೆ ತೀರಿಸಲಿ,,,,,,!
ಬದುಕು ಹೆದರಿಸಿದಾಗ
ಹೆಜ್ಜೆ ಹಿಂದೆ ಸರಿಯದಂತೆ,
ಧೈರ್ಯದ ಗೆಜ್ಜೆ ಕಟ್ಟಿ
ಸೋಲದಂತೆ ಗೆಲ್ಲಿಸಿದವರಾ
ಪ್ರೀತಿಯ ಋಣವಾ
ನಾ ಹೇಗೆ ತೀರಿಸಲಿ,,,,,,!
ಕತ್ತಲಾದಾಗ ಬೆಳಕಾದವರು
ನೋವಾದಾಗ ಹೆಗಲಾದವರು
ಭಾವನೆಗಳಿಗೆ ಜೊತೆಯಾದವರು
ಅಸ್ತಿತ್ವಕ್ಕೆ ಅಡಿಪಾಯವಾದವರು
ನಗೆಯ ಹೂ ಅರಳಿಸಿದವರು
ನಿಮ್ಮೆಲರ ಪ್ರೀತಿಯ ಋಣವಾ
ನಾ ಹೇಗೆ ತೀರಿಸಲಿ,,,,,!
ನಾ ಹೇಗೆ ತೀರಿಸಲಿ,,,,,,!
-ವಿದ್ಯಾ ವೆಂಕಟೇಶ. ಮೈಸೂರು
.ಅಕ್ಷರ ದಮಾಲಿಕೆಯಲ್ಲಿ…ಧನ್ಯವಾದಗಳನ್ನು… ತಿಳಿಸಿರುವರೀತಿಯ ಕವನ ಸರಳ ಸುಂದರ ವಾಗಿದೆ ಸೋದರಿ ವಿದ್ಯಾ..
Nice
ನಿಜ….ಜೀವನದ ಪಥದಲ್ಲಿ ನಮ್ಮ ಕಷ್ಟಗಳಿಗೆ ಸ್ಪಂದಿಸುವ, ಕೈಹಿಡಿದೆತ್ತುವ ನೂರಾರು ಕರಗಳ ಋಣವನ್ನು ತೀರಿಸಲು ಅಸಾಧ್ಯವೇ ಹೌದು…ಅರ್ಥವತ್ತಾದ ಕವನ.
ತಮ್ಮ ಸುರಹೊನ್ನೆಯಲ್ಲಿ ಬದುಕಿನ ಭಾವನೆಗಳ್ಳನ್ನು ವ್ಯಕ್ತಪಡಿಸಿರುವ ಕವಯಿತ್ರಿಯ ಪದಕವನಗಳ ಋಣ ನಾನು ಹೇಗೆ ತೀರಿಸಲಿ.
ವಿದ್ಯಮ್ಮ ಧನ್ಯವಾದಗಳು.