ಮಳೆಯ ಸ್ವರೂಪ, ಮನದ ದ್ವಿರೂಪ
ಕವಿಯಾಗುವೆ ಕೂತು ಮಲೆನಾಡ ಮಳೆಗೆ,
ಪದದನಿಯ ಪೋಷಿಸುವೆ ಸಾಹಿತ್ಯಭೂಮಿಗೆ.
ಭಾವ ಭುವನಕ್ಕೆ ಸಾಹಿತ್ಯ ಸ್ನಾನ ಸಂಲಗ್ನವಾದಂತೆ ಸೊಗಸು,
ಮಳೆಯ ಮಧ್ಯದಲ್ಲಿ ಮುಗುಳಗೆಯನ್ನಪಿತು ಎನ್ನೀ ಮನಸು.
ಮೂಡಿಬಂದದ್ದು ಮಲೆನಾಡ ಮನೋಹರ ಚಿತ್ರ,
ಮುಂಗಾರನ್ನಪಿದ ಮರದ ಚಿತ್ರ,
ಮಳೆಯ ಮಧ್ಯದಲ್ಲೂ ಮೆರೆಯುತ್ತಿದ್ದ ಮಾಮರದ ಚಿತ್ರ,
ಮಳೆದನಿಯ ಮೀರಿಸಿದ ಝರಿಯ ಚಿತ್ರ.
ಮುಗುಳಗೆ ಮೀರಿ ನಯನದೆರೆದಾಗ ಮೂಡಿದ್ದು,
ಮಳೆಯ ನಡುವೆ ನಲಿಯದ ಮರವ,
ಮಳೆಯ ನುಡಿಗೆ ಕುಣಿಯದ ಮಣ್ಣ ತನುವ,
ಮಳೆಯ ನಡುವೆ ಹೋರಾಡಿಗೆದ್ದ ಹೊಗೆಯ.
ಇದು ಕೇವಲ ಕಣ್ಣು ಕಂಡ ಚಿತ್ರವಲ್ಲ,
ಮನಕೆ ಕಣ್ಣೀರ್ಗೆರೆದ ಚಿತ್ರ, ಮೂರ್ತದ ಚಿತ್ರ…
ಇದ ತಿಳಿದು ಮನ ಮುಗುಳ್ಳಗೆಯ ಮರೆತದ್ದೇ ವಿಚಿತ್ರ
-ಹೇಮಂತ್ ರಾಂ ಕೆ ಆರ್
ಚಂದದ ಕವನ..ಮಳೆಗಾಲದ ಮಲೆನಾಡಿನ ಸುಂದರ ಕಾವ್ಯ….
ಸುಂದರ ಮಲೆನಾಡ ಕಾವ್ಯ…ಕಣ್ತೆರದಾಗ ಬೋಳು ಮರ ಮಳೆಯಿಲ್ಲದ ಚಿತ್ರ.ನೆನೆಯದ ನೆಲದ ಚಿತ್ರ…ಬರಗಾಲದ ಸೂಚ್ಯವೂ ಹೌದು ಮಲೆನಾಡಿನ ಸೊಬಗೂ ಹೌದು….
ಸರಳ ಸುಂದರ ಕವನದ…ಪ್ರಕೃತಿಯ ಅನಾವರಣ ಕಲ್ಪನೆಯ ಮೂಸೆಯಲ್ಲಿ ಚೆನ್ನಾಗಿದೆ ಸಾರ್.
ತುಂಬಾ ಚೆನ್ನಾಗಿದೆ ಕವನ
ಮಳೆ ಬರುವ ಈ ಸಮಯದಲ್ಲಿ….. ನಿಮ್ಮ ಕವನ ಪೂರಕವಾಗಿದೆ…. ಮನಕೂ ಮಳೆ ಹನಿಯ ಸಿಂಚನವಾಗಿದೆ
ತುಂಬಾ ಸುಂದರ ಬರಹ ಅರ್ಥ ಗರ್ಭಿತ ಪದವಾಕ್ಯ,,, ಮಲೆನಾಡ ಹಸಿರು ಬಸಿರಿನ ಚಿತ್ರ ವರ್ಣನಾತೀತ,,, ಮಲೆನಾಡ ಮಳೆಯ ಮುದ ಕೊಡುವ ಬಣ್ಣಿಪ ಬಗೆ ಅತೀ ಸುಂದರ.VERY GOOD,
ತುಂಬಾ ಸೊಗಸಾದ ಕವನ ಹೇಮಂತ್… ಮುಂಗಾರು ಮಳೆ, ಮಲೆನಾಡ ಸೊಬಗಿನ ನೈಜ ಚಿತ್ರಣ … ಒಂದೊಂದು ಸಾಲುಗಳೂ ಮನಸಿಗೆ ಮಳೆಯ ಸಿಂಚನವನ್ನೇ ಮಾಡಿದ ಅನುಭವ..,ನಿನಗೆ ಒಳ್ಳೆಯದಾಗಲಿ…
ಮಲೆನಾಡ ಮಳೆಯ ವೈಭವವನ್ನು ತನ್ನಲ್ಲಿ ತುಂಬಿಕೊಂಡ ಸುಂದರ ಕವನ.
ಮಳೆಯ ಬಗ್ಗೆ ರಸಿಕರ, ಅರಸಿಕರ ಭಾವಗಳು ಸುಂದರವಾಗಿ ಮೂಡಿ ಬಂದಿದೆ