ಬೆಳಕು-ಬಳ್ಳಿ

ಸೃಷ್ಟಿಯ ದೈವಿಕ ಕ್ಷಣ

Share Button

ಒಂಭತ್ತು ತಿಂಗಳ ಹಿಂದೆ ಅಂಕುರವಾದ ಮುದ್ದು ಸಸಿಯಿಂದು ಪ್ರಪಂಚಕೆ ಸೇರುತಿದೆ
ನವಿರಾದ ಈ ಕುಸುಮವನ್ನು ಬಹು ಜತನದಿಂದ ಸ್ವಾಗತಿಸುತ್ತಿದೆ ವೈದ್ಯ ಲೋಕದ ಜೀವ

ಅಮ್ಮನ ಕರುಳಿಂದ ಬೇರ್ಪಡಿಸಿದ ಡಾಕ್ಟರಮ್ಮಳ ಹೊಡೆಯಲು ಪುಟ್ಟ ಮುಷ್ಟಿ ಕಟ್ಟಿದೆ
ಒಲವು ತುಂಬಿದ ಕಂಗಳ ನೋಡಿ ಹಾಗೇ ನಿದ್ದೆಗೆ ಜಾರಿದೆ

ತೆಳು ಗುಲಾಬಿ ಬಣ್ಣದ ತ್ಚಚೆಯಲ್ಲಿ ಬೆಣ್ಣೆಯಂತಹ ಹಾಲುಗಲ್ಲಗಳು
ಆಗಾಗ ಮಡಿಸಿ ಚಾಚುವ ಪುಟ್ಟ ಎಳಸು ಕಾಲುಗಳು

ಅಳುವ ಕಂದನ ಕೂಗು ಬಳಲಿದ ಅಮ್ಮನ ಮೊಗದಲಿ ಸಾಲು ನಗುವ ತುಂಬಿದೆ
ನೋವಲ್ಲಿ ನಲಿವು ಬೆರೆತ ಅಪರೂಪದ ಕ್ಷಣ ಕಂಡು ಬಂದಿದೆ

ಪ್ರಸವ ಕಾಲದ ಗೌಜು ಗದ್ದಲಗಳು ಈಗ ದೂರವಾಗಿ ಪ್ರಶಾಂತತೆ ಮೂಡಿದೆ
ಮಗು ಪಡೆದು ಅಮ್ಮನಾದ ಧನ್ಯತೆಯ ಭಾವ ಆ ತಾಯಿದಾದರೆ

ಮೊದಲ ತರಬೇತಿ ತರಗತಿಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಖುಷಿಯ ಕ್ಷಣ ನನ್ನದು
ಸೃಷ್ಟಿಯ ಇಂತಹ ದೈವಿಕ ಅನುಭವ ಪಡೆದ ಈ ಕ್ಷಣ ಮತ್ತೊಮ್ಮೆ ಬಾರದು

-ಕೆ.ಎಂ ಶರಣಬಸವೇಶ .

5 Comments on “ಸೃಷ್ಟಿಯ ದೈವಿಕ ಕ್ಷಣ

  1. ಮೊದಲ ಹೆರಿಗೆ ಮಾಡಿಸಿದ ನವವೈದ್ಯನ ಭಾವಪೂರ್ಣವಾದ ಕವನ ಸೊಗಸಾಗಿದೆ.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *