ಬೆಳಕು-ಬಳ್ಳಿ

ಏನೋ ಒಂದು ಬೇಕಿದೆ !

Share Button

ಮೋಡ ಕಟ್ಟುತಿದೆ ಗಾಳಿ ಬೀಸುತಿದೆ‌
ಜೀವಜಲ ಸುರಿದು ಸಡಗರಿಸಲು

ಮಳೆ ಬೀಳುತಿದೆ ಬಿಸಿಲೂ ಹೊಳೆಯುತಿದೆ
ಕಾಮನ ಬಿಲ್ಲು ಬಣ್ಣದೋಕುಳಿಯಾಡಲು

ಕಾಲ ಸಮೀಪಿಸುತಿದೆ ನೆಲ ಒದ್ದೆಯಾಗುತಿದೆ
ಮಣ್ಣಲಿ ಬೀಜ ಮೊಳೆತು ಸಸಿಯಾಗಲು

ಮಂಜು ಸುರಿಯುತಿದೆ ಬೆಳಕು ಮೂಡುತಿದೆ
ಪಾರಿಜಾತ ಕಳಚಿ ಭುವಿಯ ಸಿಂಗರಿಸಲು

ಹೂವರಳಿ ಕಂಪಿಸುತಿದೆ ತಂಗಾಳಿ ರಮಿಸುತಿದೆ
ಮಕರಂದಕೆ ಭ್ರಮರ ದಾಳಿಯಿಡಲು

ಸಂಜೆ ಸಮೀಪಿಸುತಿದೆ ಕತ್ತಲು ಸುರಿಯುತಿದೆ
ಹಣತೆ ಹಚ್ಚುತ ಜ್ಯೋತಿ ಬೆಳಗಿಸಲು

ಆಗಸ ಮೈದೋರುತಿದೆ ಹಕ್ಕಿ ಹಾಡುತಿದೆ
ರವಿಕಿರಣ ಹೊಂಬಿಸಿಲಾಗಿ ಚೆಲ್ಲಲು

ಹೊಳೆಯು ಹರಿಯುತಿದೆ ದೋಣಿ ಸಾಗುತಿದೆ
ಯಾನ ಮುಗಿದು ದಡ ಸೇರಿ ಸುಖವಾಗಲು

ಹುಣ್ಣಿಮೆ ಹರಡುತಿದೆ ಸೆಳವು ಹೆಚ್ಚುತಿದೆ
ಶಾಂತವಿದ್ದ ಸಾಗರ ಭೋರ್ಗರೆಯಲು

ಹೃದಯ ತವಕಿಸುತಿದೆ ಬಂಧ ಮಿಡಿಯುತಿದೆ
ಪ್ರೀತಿ ಪಲ್ಲವಿಸಿ ಮೈ ಮರೆತು ಹಗುರಾಗಲು

ಬೆರಳು ನುಡಿಸುತಿದೆ ಕೊಳಲು ಉಲಿಯುತಿದೆ
ಎದೆಯೊಳಗಿನ ಕಿಚ್ಚು ರಾಗದಿ ಹೊಮ್ಮಲು

ಪೂಜೆ ನಡೆಯುತಿದೆ ಗಂಟೆ ಮೊಳಗುತಿದೆ
ದಿವ್ಯತೆ ಹರಡಿ ಜೀವ ಸಮರ್ಪಿತಗೊಳ್ಳಲು

ಮಾತು ಸೋಲುತಿದೆ ಸಾಲು ತವಕಿಸುತಿದೆ
ಕಣ್ಣ ಭಾಷೆಯ ಕಾಣ್ಕೆ ಕವಿತೆಯಾಗಲು

ಏನೋ ಒಂದು ಬೇಕಾಗಿದೆ !
ಸಹೃದಯಕೀಗ ಗೊತ್ತಾಗುತಿದೆ !!

ಡಾ. ಹೆಚ್‌ ಎನ್‌ ಮಂಜುರಾಜ್‌, ಹೊಳೆನರಸೀಪುರ

8 Comments on “ಏನೋ ಒಂದು ಬೇಕಿದೆ !

  1. ಬಹಳ ಆಪ್ತವಾದ ಕವನ ಅದರಲ್ಲೂ ಕವನದ ಕೊನೆಯ ಸಾಲುಗಳು..ಏನೋ ಒಂದು ಬೇಕಾಗಿದೆ..ಸಹೃದಯಕ್ಕೀಗ ಗೊತ್ತಾಗುತ್ತಿದೆ…ಧನ್ಯವಾದಗಳು ಸಾರ್

  2. ಮಾತು ಸೋಲುತಿದೆ ಗೆಳೆಯರ ಕವಿತೆಯ ಹೃದ್ಯತೆಯನ್ನು ಅನುಭವಿಸಿ ಪೊಗಳಲು.

    1. ಏನೆಲ್ಲಾ ಇದ್ದರೂ, ಬೇರೊಂದರ ಕೊರತೆ ಕಾಣುವುದೇ ಮಾನವನ ಗುಣ, ಎನ್ನುವುದನ್ನು ಕವನ ಹೇಳುತ್ತಿದೆ.ಚೆನ್ನಾಗಿದೆ ಸರ್.❤️

  3. ಪ್ರಕೃತಿಯೆಲ್ಲಡಗಿರುವ ಏನೋ ಬೇಕೆನ್ನುವ ಹಂಬಲವನ್ನು ಕವಿತೆ ಚೆನ್ನಾಗಿ ಕಟ್ಟಿಕೊಟ್ಟಿದೆ

Leave a Reply to Roopa Manjunath Cancel reply

 Click this button or press Ctrl+G to toggle between Kannada and English

Your email address will not be published. Required fields are marked *