ಕಲ್ಲ ಹಾದಿ…..
ಎಲ್ಲೋ ಒಂದು ಕಡೆ
ಗಟ್ಟಿಯಾಗಿ ನೆಲೆಯೂರಿದ್ದೆ
ಸಿಡಿಮದ್ದುಗಳ ಸಿಡಿಸಿ
ತುಂಡಾಗಿಸಿದರು
ಯಂತ್ರಗಳ ನಡುವೆ ಸಿಕ್ಕು
ಸಮತಟ್ಟಾದೆ
ನಾಜೂಕುತನದಿ ಮನೆ,
ಮಠ,ಮಸೀದಿಗಳ ನೆಲಹೊಕ್ಕಿದೆ
ಮತ್ತಷ್ಟು ತುಂಡುಗಳು
ಉಳಿಯ ಅಳತೆಯೊಳಗೆ
ಊಳಿಗಕೆ ಬಿದ್ದು
ಕಲಾಕೃತಿಗಳಾದವು
ಕಪ್ಪು,ಬಿಳಿ,ಕಂದು ಬಣ್ಣಗಳ
ಜಾಡಿನಲಿ ಶಿಲೆಯಾಗಿ
ಮೂರ್ತಿಯಾಗಿ
ಗುಡಿಗಳಲಿ ರಾರಾಜಿಸಿದೆ
ಜಾತಿ, ಧರ್ಮ,ಮತವೆಂದು
ಹಿಂದೆ ಸರಿಯದೆ
ಸದ್ದಿಲ್ಲದೆ ಸರ್ವಧರ್ಮಕೂ
ಸಲ್ಲಿದೆ
ಲಿಂಗಭೇದ ಎನಗಿತ್ತೇ…?
ಧರ್ಮದ ಆಸರೆ ಎನಗಿತ್ತೇ…?
ಗುಡಿಸೇರಿ ಮಡಿಯಾದೆ
ಮಂಟಪಕೆ ಆಸರೆಯಾದೆ
ನಿರ್ಜೀವದ ಪದರಕೆ
ಪೂಜೆ,ಗೌರವ ಪಡೆದೆ
ಲಿಂಗ, ವರ್ಣಗಳಲ್ಲಿ ಬೆರೆತು
ಸೆರೆಯಾದೆ
ಧರೆಯ ಗಟ್ಟಿಗೆ ನಾನೇ ಜಟ್ಟಿ
ಆದರೇಕೋ ಮಾತಿನೊಳಗೆ
ಎಲ್ಲಾ ಲೊಳಲೊಟ್ಟೆ
ಧರೆ ಜಾರಲಿದೆ ಮೆತ್ತಗೆ
-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ
ಅರ್ಥಪೂರ್ಣ ವಾದ ಕವನ..ಅಭಿನಂದನೆಗಳು ಗೆಳತಿ ಲಕ್ಷ್ಮಿ
ಧನ್ಯವಾದಗಳು ಮೇಡಂ
ಸೊಗಸಾಗಿದೆ ಕವನ
ಧನ್ಯವಾದಗಳು
ಅರ್ಥವತ್ತಾದ ಕವನ
ಭೂಗರ್ಭದೊಳಗಿನ ಶಿಲೆಯ ನಾಶದಿಂದ ಧರೆ ಜಾರಲಿದೆ…..ಮೆಲ್ಲ ಮೆಲ್ಲನೆ!
ಉತ್ತಮ ಸಂದೇಶಯುಕ್ತ ಕವನ.
ಧನ್ಯವಾದಗಳು
ಕಲ್ಲಿನ ಗಟ್ಟಿತನ ಕವಿತೆಯಲ್ಲೂ ಅಡಗಿದೆ.
ಪ್ರಕಟಣೆಗಾಗಿ ಧನ್ಯವಾದಗಳು ಮೇಡಂ