ಬೆಳಕು-ಬಳ್ಳಿ

ಶಬ್ದದೊಳಗಣ ನಿಶ್ಶಬ್ದ

Share Button

ಜೊತೆಗಿದ್ದೂ ಇಲ್ಲದ ಹಾಗೆ ಇರುವುದು ಹೇಗೆ ?
ಕೇಳಿದ ಶಿಷ್ಯನ ಪ್ರಶ್ನೆಗೆ
ಗುರುಗಳ ಉತ್ತರ ಮಾತಿನಲಲ್ಲ !
ಜೊತೆಗೇ ಕರೆದುಕೊಂಡು ಹೋದ ಬಗೆಯಲ್ಲಿ !!

ಮರವೊಂದನು ತೋರಿದರು ; ಮಗುಮ್ಮಾದರು
ತಂಗಾಳಿ ತೊನೆವಾಗ ಹಣ್ಣಾದ ಎಲೆಯೊಂದು
ಹಾಗೇ ಏನನೂ ತಂಟೆ ಮಾಡದೆ ಸೀದಾ
ಜಾರುತ ನೆಲಕಿಳಿಯುತ ಶರಣಾಯಿತು ಇಳೆಗೆ ;
ಚಿಗುರುವ ಎಲೆಗೆ ದಾರಿ ಮಾಡಿಕೊಡುವ ಬಗೆ

ಪದ್ಮಪತ್ರದ ಜಲಬಿಂದುವಿನ ನಂಟನುಸುರುತ
ಪ್ರತಿಫಲಿಸುವ ರವಿಕಿರಣವ, ಸುರಿವ ಹಿಮಕೆ
ಆವಿಯಾಗುವ ಶೂನ್ಯವ ತೋರಿದರು :
‘ಹೊರಗಿದ್ದೂ ಒಳಗಿರುವ ಬ್ರಹ್ಮಾಂಡದ ಗಂಟು
ಬೆಳಗಿಸುವ ಅನುಭೂತಿಗೆ ಈ ಎಲ್ಲವೂ ಉಂಟು’

ಒಣಗಿದೆಲೆಗಳ ಮೇಲೆ ಸರಸರ ಹೆಜ್ಜೆ ಹಾಕುತ
ಗುರುಶಿಷ್ಯರಿಬ್ಬರೂ ಸುಮ್ಮನೆ ಧ್ಯಾನಿಸುತ
ಕುಟೀರದತ್ತ ಸರಿದರು, ಭ್ರಮೆಯ ತೊರೆದರು !
‘ನಿನ್ನನ್ನು ಗೆಲ್ಲು ; ನನ್ನಲ್ಲಿ ನಿಲ್ಲು’
ಎಂಬ ದಿವದ ಕರೆಗೆ ಓಗೊಟ್ಟರು.

ಅಲ್ಲಿದ್ದುದು ಕೇವಲ ಸದ್ದು; ಮನಕೆ ಗುದ್ದು
ಮಾತಿನ ಹಂಗಿರದ ಅರಿವಿನೆಚ್ಚರದ ಮುದ್ದು

ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು

29 Comments on “ಶಬ್ದದೊಳಗಣ ನಿಶ್ಶಬ್ದ

  1. ವಾವ್.. ಮಾತಿಲ್ಲದೆ..ವಾದವಿವಾದವಿಲ್ಲದ ..
    ಪ್ರಾತಕ್ಷತೆಯಿಂದ …ಪ್ರಶ್ನೆ ಗೆ ಉತ್ತರ… ಕಲಾತ್ಮಕ ವಾದ ಕವನ..ಅಭಿನಂದನೆಗಳು ಮಂಜುರಾಜ್ ಸರ್.

    1. ಪ್ರಶ್ನೆಗುತ್ತರ……….ಧನ್ಯವಾದಗಳು ನಾಗರತ್ನ ಮೇಡಂ. ನಿಮ್ಮ ಸಹೃದಯಕೆ ಶರಣು.

    1. ಧನ್ಯವಾದಗಳು ನಯನ ಮೇಡಂ, ನಿಮ್ಮ ನಿರಂತರ ಪ್ರತಿಸ್ಪಂದನಕೆ ಮತ್ತು ಸಹೃದಯಕೆ

  2. ಗುರು ಶಿಷ್ಯರ ನಿಶ್ಶಬ್ದ ಸಂವಾದ ಅರ್ಥಪೂರ್ಣ !… ಚಂದದ ಕವನ.

    1. ಧನ್ಯವಾದಗಳು ಶಂಕರಿ ಮೇಡಂ, ಓದಿ ಪ್ರತಿಕ್ರಿಯಿಸಿದ ನಿಮ್ಮ ಸಹೃದಯತೆಗೆ ಶರಣು

  3. ನಮಸ್ಕಾರ, ತುಂಬಾ ಕಡಿಮೆ ಸಾಲುಗಳಲ್ಲಿ, ಭವದೊಳಗಿನ ಭಾವಗಳ ಗೆಲ್ಲುವ ಬಗ್ಗೆ,,, ಕವನದಲ್ಲಿ ತಿಳಿಸಿದ ರೀತಿ ಅನನ್ಯ

    1. ಭವದೊಳಗಿನ ಭಾವಗಳ ಗೆಲ್ಗೆ, ಅದರ ಬಗೆ…….ಓಹ್!‌ ಚೆಂದದ ಪ್ರತಿಸ್ಪಂದನ. ಧನ್ಯವಾದಗಳು ವಿದ್ಯಾ ಮೇಡಂ

  4. ಏನೇ ಬರೆದರೂ ಅರ್ಥಗರ್ಭಿತ ಪದ ಮತ್ತು ವಾಕ್ಯ, ಅದ್ಭುತವಾದ ಅರ್ಥ. ಇನ್ನೇನು ಬೇಕು! ವಿಚಾರವಂತರಾಗಲು !

    1. ಧನ್ಯವಾದಗಳು ಸ್ನೇಹಿತರೇ….

      ಬಿಡುವಿಲ್ಲದ ನಿಮ್ಮ ಕೆಲಸಗಳ ನಡುವೆಯೂ
      ಪ್ರೀತಿಯಿಂದ ಓದಿ ಪ್ರತಿಕ್ರಿಯೆ ದಾಖಲು
      ಮಾಡಿದ ನಿಮಗೆ ಧನ್ಯವಾದಗಳು

  5. ವಾವ್ ಸುಂದರ ಕವನ… ಖುಷಿಯಾಯಿತು ಸರ್
    ಸಾವಿರ ನಮನ..!

    1. ಧನ್ಯವಾದಗಳು ಕವಿಗುರುವೇ

      ದಯಮಾಡಿ ನೀವೂ
      ಸುರಹೊನ್ನೆಗೆ ಬರೆಯಿರಿ

      ನಿಮ್ಮ ಕವಿತೆಯೋದಬೇಕು
      ನಾವೆಲ್ಲರೂ ಇಲ್ಲಿ
      ಈ ತಾಣದಲ್ಲಿ !

  6. ತುಂಬಾ ಚನ್ನಾಗಿದೆ ಗುರುಗಳೇ…. ಸ್ವತಃ ಅನುಭವದ ಮೂಲಕ ಉತ್ತರ ಕಾಣಿಸುವುದು….

  7. ಅನುಭವವು ಅನುಭಾವವಾಗಲು ಗುರು ಬೇಕೇ ಬೇಕು.
    A good poem, which leads to introspection.

    1. ನಿಜ ಮೇಡಂ….

      ಅಂತರತಮಕೆ ಬೆಳಕಿನ
      ಕಿರಣ

      ಹಾಯ್ದಾಗ ಅಹಮಿನ ಮರಣ !

      ಧನ್ಯವಾದಗಳು, ದಯಮಾಡಿ
      ನೀವೂ ಬರೆಯಿರಿ

  8. ಅಂತರತಮನೇ ಗುರು ಆತ್ಮವಿಹಾರಿ ….. ಎಂಬ ಅಂತಸತ್ವ ನಿಮ್ಮ ಕವನ ಆತ್ಮಜ್ಞಾನದ ಬೆನ್ನಟ್ಟಿ ಹೊರಟ ಶಿಷ್ಯ ನಿಗೆ ಪ್ರಕೃತಿಯ ಅವಿಚ್ಚಿನ್ನತಿಯಲ್ಲಿ ಸತ್ಯ ಕಾಣಿಸಿದ ಗುರು ಮಹಾ ಮೇರು

Leave a Reply to ಎಂ. ಕುಸುಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *