ಬೆಳಕು-ಬಳ್ಳಿ

ರಾಮನ ನೆನಪಿನಲಿ

Share Button


ನಾರುಮಡಿಯುಟ್ಟು ಅಡವಿಗೆ ನಡೆದವ
ಎಂಜಲು ಹಣ್ಣಲೇ ತಾಯ ಮಮತೆಯುಂಡವ
ಮಡದಿಯ ಹುಡುಕಿ ದೆಸೆಗೆಟ್ಟು ಅಲೆದಾಡಿದವ
ನೆಚ್ಚಿನ ಹನುಮನ ಸ್ನೇಹಕೆ ಸೋತು ಗೆದ್ದವ
ಕಪಿಗುಂಪನೇ ನೆಚ್ಚಿ ಸಮುದ್ರಕೆ ಸೇತುವಾದವ

ದಶಾನನ ಸಂಹರಿಸಿ ದುಂದುಭಿ ಮೊಳಗಿಸಿದವ
ರಾಮರಾಜ್ಯದ ನಿಯಮಕಾಗಿ ಮತ್ತೆ ಒಂಟಿಯಾದವ
ಮಕ್ಕಳೆದುರಿಗೆ ನಿಂತು ಶರಣಾಗಿ ಕೈ ಮುಗಿದವ
ಒಳಗಿನೆಲ್ಲ ತುಮುಲಗಳ ತಡೆದಿಟ್ಟು ಮೌನವಾದವ
ಸಂಕಟಗಳ ಸಂತಸವಾಗಿಸಿ ಲೀಲೆಗೆ ಕೈಗೊಂಬೆಯಾದವ

ನೀನೆಂದರೆ ಮೌಲ್ಯಗಳ ಮಾತು ; ಮಾನವ ದೇವನಾದ ಮಹತು
ನಿನ್ನಿಂದ ಕಲಿತದ್ದು ಒಂದೇ : ಏನಾಗಲಿ, ಸುಮ್ಮನಿರು ತಂದೆ !
ಮಂದಿ ಸಾವಿರ ಮಾತಾಡಲಿ, ಕಾಲಧರ್ಮವೇ ಉತ್ತರಿಸಲಿ !!

-ಡಾ.ಹೆಚ್‌ ಎನ್‌ ಮಂಜುರಾಜ್‌, ಮೈಸೂರು

11 Comments on “ರಾಮನ ನೆನಪಿನಲಿ

    1. ಧನ್ಯವಾದಗಳು ಮೇಡಂ. ನೀವಂತೂ ತುಂಬ ಶ್ರದ್ಧೆ ಮತ್ತು ನಿಷ್ಠೆಯಿಂದ ಸುರಹೊನ್ನೆಯ ಎಲ್ಲವನೂ ಓದಿಯೇ ಅಭಿಪ್ರಾಯಿಸುವಿರಿ. ನಿಮ್ಮ ಆಸಕ್ತಿ ಮತ್ತು ಆ ಶಕ್ತಿಗೆ ನನ್ನ ನಮನಗಳು.

  1. ರಾಮನೆಂದರೆ ಮೌಲ್ಯಗಳ ಮಾತು. ಎಂಥ ಸೊಗಸಾದ ವ್ಯಾಖ್ಯಾನ. ಓದುಗರಿಗೆ ರಾಮನವಮಿಗೆ ಚಂದದ ಕವನದ ಸುಂದರ ಉಡುಗೊರೆ. ಅಭಿನಂದನೆಗಳು.

  2. ರಾಮನ ಕಾರ್ಯಗಳನ್ನು ನೆನಪಿಸುತ್ತಾ ಅವನಂತೆ ನಾವಾಗಬೇಕಾದ ಅಗತ್ಯತೆಯನ್ನು ಎತ್ತಿ ಹಿಡಿದ ಸೊಗಸಾದ ಕವನ.

  3. ರಾಮನ ಕತೆ…ಎಂದಿಗೂ..ಚಿರ ನೂತನ..ಪುಟ್ಟ ದಾಗಿ..ರಾಮನ ವ್ಯಕ್ತಿತ್ವವನ್ನು ಸೆರೆ ಹಿಡಿದಿದೆ ಕವಿತೆ….ಮೌಲ್ಯ ಗಳು..ಬದುಕಿನ ಬೇರಾಗಬೇಕು…ಮಾತು ಮೌನದ ಹಿಂದೆಯೆ ಇರಬೇಕು…ಒಳ್ಳೆಯ ಕವನ ..ಧನ್ಯವಾದ ಗಳು.. ಸರ್..

    1. ಮೆಚ್ಚಿದ್ದಕ್ಕೆ ಮತ್ತು ಪ್ರತಿಕ್ರಿಯಿಸುವುದರ ಮೂಲಕ ಕವಿತೆಯನ್ನು ಗುಣಗ್ರಾಹೀ ವಿಮರ್ಶೆ ಮಾಡಿದ್ದಕ್ಕೆ ಧನ್ಯವಾದಗಳು. ಪ್ರಕಟಿಸಿದ ಸುರಹೊನ್ನೆಯಿಂದಾಗಿ ಇದು ಸಾಧ್ಯವಾಗಿದೆ. ಈ ವೇದಿಕೆಯಿಂದಾಗಿ ಇಂಥ ಸ್ಪಂದನ ಮತ್ತು ಸಂವಾದನ ! ಹಾಗಾಗಿ ಸುರಹೊನ್ನೆಯ ಬಳಗಕ್ಕೆ ಅನಂತಾನಂತ ವಂದನೆಗಳು.

Leave a Reply to Manjuraj Cancel reply

 Click this button or press Ctrl+G to toggle between Kannada and English

Your email address will not be published. Required fields are marked *